More

    ಗ್ರಾಮಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಿ

    ಸಿಂದಗಿ: ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳ ಸಮರ್ಪಕ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಎಲ್ಲ ಸಾರಿಗೆ ಬಸ್ ನಿಲುಗಡೆಗೆ ಒತ್ತಾಯಿಸಿ ತಾಲೂಕಿನ ಸಾಸಾಬಾಳ ಕ್ರಾಸ್ ಬಳಿ ಸೋಮವಾರ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.

    ವಿದ್ಯಾರ್ಥಿ ಸತೀಶ ಆಲಮೇಲ, ಶಿವು ಹೊಳಕುಂದಿ, ರೋಹನ್ ಚಿಂಚೋಳ್ಳಿ, ವಿನೋದ ಮಾದರ ಮಾತನಾಡಿ, ಈ ಭಾಗದ ಹಳ್ಳಿಗಳಲ್ಲಿ ನಿಗದಿತ ಸಮಯ ಹಾಗೂ ಸಮರ್ಪಕವಾಗಿ ಸಾರಿಗೆ ಬಸ್‌ಗಳನ್ನು ಓಡಿಸುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ದೂರಿದರು.

    ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ಸಮಯದಲ್ಲಿ ಬಸ್ ಬರುತ್ತಿಲ್ಲ. ಕೆಲವು ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆಯೂ ಇಲ್ಲ.ಹೀಗಾಗಿ ಸಿಂದಗಿ ಪಟ್ಟಣಕ್ಕೆ ಹೋಗುವ ವಿದ್ಯಾರ್ಥಿಗಳು ಸರಿಯಾಗಿ ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಕೂಡಲೇ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.

    ಬಿಜೆಪಿ ಮುಖಂಡ ಶ್ರೀಶೈಲ ಚಳ್ಳಗಿ, ಪರಶುರಾಮ ಚನ್ನೂರ, ನಿಂಗಣ್ಣ ಶಿವಣಗಿ, ಮಲ್ಲಣ್ಣ ಪೂಜಾರಿ, ನಿಂಗು ಸುಂಬಡ, ಅಂಬರೀಷ್ ಬಾಸಗಿ, ಗೋಲ್ಲಾಳ ಆಲಮೇಲ, ಸಂತೋಷ ಚಿಂಚೋಳಿ, ವೀರೇಶ ಹೊಸಮನಿ, ಮಹೇಶ ರಾಠೋಡ, ಅಂಜುಮಾ ಮುಲ್ಲಾ, ಬೋರಮ್ಮ ಪೂಜಾರಿ, ಸುಜಾತಾ ಅಳ್ಳೋಳ್ಳಿ, ಸುನೀಲ ಬಂಥನಾಳ, ಗಾಯತ್ರಿ ಚನ್ನೂರ, ತ್ರಿವೇಣಿ ಚಿಗರಿ ಇತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts