More

    ಸಿಂದಗಿ ಪುರಸಭೆ ಅಧಿಕಾರ ಅತಂತ್ರ

    ಸಿಂದಗಿ: ಪಟ್ಟಣದ ಪುರಸಭೆ ಚುನಾವಣೆಯಲ್ಲಿ ಮತದಾರರು 23 ವಾರ್ಡುಗಳಲ್ಲಿ 11 ಸ್ಥಾನ ಗೆಲ್ಲಿಸುವ ಮೂಲಕ ಕಾಂಗ್ರೆಸ್ ಕೈಗೆ ಬಲ ತುಂಬಿದರೆ, ಅಧಿಕಾರದ ಕನಸು ಹೊತ್ತಿದ್ದ ಜೆಡಿಎಸ್‌ಗೆ ಕೇವಲ 6 ಸ್ಥಾನಗಳನ್ನು ಕೈಗಿತ್ತಿದ್ದಾರೆ. 3ರಲ್ಲಿಯೇ ಮತ್ತೆ ಕಮಲ ಅಭ್ಯರ್ಥಿಗಳಿಗೆ ಜಯ ತಂದು ಕೊಟ್ಟು, 3 ಪಕ್ಷೇತರರಿಗೆ ಮಣೆ ಹಾಕಿದ್ದಾರೆ.
    ಪಟ್ಟಣದ ಆರ್.ಡಿ.ಪಾಟೀಲ ಕಾಲೇಜಿನಲ್ಲಿ ಮಂಗಳವಾರ ಮತ ಎಣಿಕೆ ಕಾರ್ಯ ನಡೆಯಿತು. ಈ ಬಾರಿ ಮತದಾರ ತನ್ನ ಒಲವನ್ನು ಮತ್ತೆ ಕಾಂಗ್ರೆಸ್‌ನತ್ತ ಹೊರಳಿಸಿ, ಅಧಿಕಾರ ಅತಂತ್ರವಾಗಿಸಿದ್ದಾನೆ.

    ಪಕ್ಷವಾರು ವಿಜೇತರ ವಿವರ

    ವಾರ್ಡ್ 1ರಲ್ಲಿ ಕಾಂಗ್ರೆಸ್‌ನ ಕಲ್ಲೂರ ಪ್ರತಿಭಾ ಶಿವಕುಮಾರ, ವಾರ್ಡ್ 2ರಲ್ಲಿ ಜೆಡಿಎಸ್‌ನ ಉಮಾದೇವಿ ಶರಣಪ್ಪ ಸುಲಿ, ವಾರ್ಡ್ 3ರಲ್ಲಿ ಕಾಂಗ್ರೆಸ್‌ನ ಬೀರಗೊಂಡ ಶ್ರೀಶೈಲ ಮಲ್ಲಪ್ಪ, ವಾರ್ಡ್ 4ರಲ್ಲಿ ಪಕ್ಷೇತರ ಕಡಕೋಳ ಕಲಾವತಿ ಅನೀಲ, ವಾರ್ಡ್ 5ರಲ್ಲಿ ಜೆಡಿಎಸ್‌ನ ಯರನಾಳ ಬಸವರಾಜ ಚಂದ್ರಾಮಪ್ಪ, ವಾರ್ಡ್ 6ರಲ್ಲಿ ಕಾಂಗ್ರೆಸ್‌ನ ಸುಣಗಾರ ಹಣಮಂತ ಯಮನಪ್ಪ, ವಾರ್ಡ್ 7ರಲ್ಲಿ ಕಾಂಗ್ರೆಸ್‌ನ ತಾಂಬೋಳಿ ಬಾಶಾಸಾಬ ಖಾಲೆಸಾಬ, ವಾರ್ಡ್ 8ರಲ್ಲಿ ಕಾಂಗ್ರೆಸ್‌ನ ನಾಟಿಕಾರ ಖೈರೂನಬಿ ಮಹ್ಮದಹನೀಫ್, ವಾರ್ಡ್ 9ರಲ್ಲಿ ಕಾಂಗ್ರೆಸ್‌ನ ಹಾಸಿಮಪೀರ ಆಳಂದ, ವಾರ್ಡ್ 10ರಲ್ಲಿ ಜೆಡಿಎಸ್‌ನ ದುರ್ಗಿ ಪಾರ್ವತಿ ಗುರಪ್ಪ, ವಾರ್ಡ್ 11ರಲ್ಲಿ ಬಿಜೆಪಿಯ ವಿಜಯಲಕ್ಷ್ಮಿ ಗಿರೀಶ ನಾಗೂರ, ವಾರ್ಡ್ 12ರಲ್ಲಿ ಬಿಜೆಪಿಯ ಮಹಾಂತೇಶ ಗುರಲಿಂಗಪ್ಪ ಬಿರಾದಾರ, ವಾರ್ಡ್ 13ರಲ್ಲಿ ಜೆಡಿಎಸ್‌ನ ಶಾಂತವೀರ ಮಲ್ಲಪ್ಪ ಮನಗೂಳಿ, ವಾರ್ಡ್ 14ರಲ್ಲಿ ಕಾಂಗ್ರೆಸ್‌ನ ಬಿರಾದಾರ ಶಾಂತವೀರ ಸಿಪ್ಪ, ವಾರ್ಡ್ 15ರಲ್ಲಿ ಕಾಂಗ್ರೆಸ್‌ನ ಡೋಣೂರ ಭಾಗವ್ವ ಬಸಪ್ಪ, ವಾರ್ಡ್ 16ರಲ್ಲಿ ಪಕ್ಷೇತರ ಅಭ್ಯರ್ಥಿ ಭೀಮಣ್ಣ ಕಿಸಾನ ಕಲಾಲ, ವಾರ್ಡ್ 17ರಲ್ಲಿ ಕಾಂಗ್ರೆಸ್‌ನ ಚೌರ ಸಂದೀಪ ಭೀಮಪ್ಪ, ವಾರ್ಡ್18ರಲ್ಲಿ ಜೆಡಿಎಸ್‌ನ ನಾರಾಯಣಕರ ರಾಜಣ್ಣ ಧರ್ಮಪ್ಪ, ವಾರ್ಡ್ 19ರಲ್ಲಿ ಕಾಂಗ್ರೆಸ್‌ನ ಮುಲ್ಲಾ ತಾಹಸೀನ ಆಬಿದ, ವಾರ್ಡ್ 20ರಲ್ಲಿ ಬಿಜೆಪಿಯ ಬಸಮ್ಮ ಚಂದ್ರಶೇಖರ ಸಜ್ಜನ, ವಾರ್ಡ್ 21ರಲ್ಲಿ ಪಕ್ಷೇತರ ಅಭ್ಯರ್ಥಿ ಬಂಕಲಗಿ ಗೊಲ್ಲಾಳಪ್ಪ ನಿಂಗಪ್ಪ, ವಾರ್ಡ್ 22ರಲ್ಲಿ ಜೆಡಿಎಸ್‌ನ ಶರಣಗೌಡ ಮಡಿವಳಪ್ಪ ಪಾಟೀಲ ಹಾಗೂ ವಾರ್ಡ್ 23ರಲ್ಲಿ ಕಾಂಗ್ರೆಸ್‌ನ ನಾಯ್ಕೋಡಿ ಮಹಾದೇವಿ ಭೀಮಣ್ಣ ಜಯ ಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಎಸ್.ಕಡಕಭಾವಿ ಹಾಗೂ ಬಿ.ಎಸ್. ಗೋಳಾಮಠ ಘೋಷಿಸಿದರು.
    ಒಟ್ಟು 354 ಮತಗಳು ನೋಟಾಕ್ಕೆ ಚಲಾವಣೆಗೊಂಡಿವೆ. 18ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬ ಅತಿ ಕಡಿಮೆ ಎಂದರೆ ಕೇವಲ 2 ಮತಗಳನ್ನು ಪಡೆದಿದ್ದಾನೆ. 7ನೇ ವಾರ್ಡ್ ಅಭ್ಯರ್ಥಿ ಬಾಶಾಸಾಬ ತಾಂಬೋಳಿ ತಮ್ಮ ಪ್ರತಿಸ್ಪರ್ಧಿಗಿಂತ 1085 ಮತಗಳ ಅಂತರವನ್ನು ಪಡೆದು ಗೆದ್ದು ಬೀಗಿದರೆ 11ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯಥಿ ವಿಜಯಲಕ್ಷ್ಮೀ ನಾಗೂರ ತಮ್ಮ ಪ್ರತಿಸ್ಪರ್ಧಿ ಮೀನಾಕ್ಷಿ ಗೋಣಿ ಅವರನ್ನು ಕಡಿಮೆ 21 ಮತಗಳ ಅಂತರದಿಂದ ಪರಾಭವಗೊಳಿಸಿದ್ದು ವಿಶೇಷ.

    ಹ್ಯಾಟ್ರಿಕ್ ಗೆಲವು

    6ನೇ ವಾರ್ಡ್‌ನಲ್ಲಿ ಹಣಮಂತ ಸುಣಗಾರ ಅವರು ಮೂರನೇ ಬಾರಿಗೆ ಸ್ಪರ್ಧಿಸಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಅಲ್ಲದೆ 21ನೇ ವಾರ್ಡ್‌ನಲ್ಲಿ ಪಕ್ಷೇತರನಾಗಿ ಗೊಲ್ಲಾಳಪ್ಪ ಬಂಕಲಗಿ ಹಾಗೂ 7ನೇ ವಾರ್ಡ್‌ನಲ್ಲಿ ಅಭ್ಯರ್ಥಿ ಬಾಶಾಸಾಬ ತಾಂಬೋಳಿ ಸತತವಾಗಿ 2ನೇ ಬಾರಿಗೆ ಪುರಸಭೆ ಪ್ರವೇಶಿಸಿದರು.

    ಶಾಸಕ ಪುತ್ರನ ಗೆಲವು

    13ನೇ ವಾರ್ಡ್‌ನಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಎಂ.ಸಿ.ಮನಗೂಳಿ ಅವರ ಪುತ್ರ ಡಾ.ಶಾಂತವೀರ ಮನಗೂಳಿ ಅಭಿವೃದ್ಧಿ ಹೆಸರಿನಲ್ಲಿ ಮೊದಲ ಬಾರಿ ಕಣಕ್ಕಿಳಿದಿದ್ದರು. ಇವರ ನೇರ ಸ್ಪರ್ಧಿ ಬಿಜೆಪಿಯ ಶೈಲಜಾ ಸ್ಥಾವರಮಠ ಅವರ ವಿರುದ್ಧ 206 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಕಾಂಗ್ರೆಸ್‌ನಿಂದ ವಿಜಯೋತ್ಸವ

    11 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಘೋಷಣೆ ಕೇಳುತ್ತಲೇ ಮತ ಎಣಿಕೆ ಕೇಂದ್ರದಲ್ಲಿ ಅಭ್ಯರ್ಥಿಗಳು ಗೆಲುವಿನ ಸಂಕೇತ ತೋರಿಸುತ್ತ ಹೊರಗಡೆ ಕುಣಿದು ಕುಪ್ಪಳಿಸುತ್ತ ಅಭಿಮಾನಿಗಳನ್ನು ಕೂಡಿಕೊಂಡು ಸಂಭ್ರಮಿಸಿದರು. ನಂತರ ಮತ ಎಣಿಕೆ ಕೇಂದ್ರದಿಂದ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತ ಮಾರ್ಗವಾಗಿ ಮೆರವಣಿಗೆ ನಡೆಸುವ ಮೂಲಕ ವಿಜಯೋತ್ಸವ ಆಚರಿಸಿದರು.
    ವಿಜಯೋತ್ಸವದಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ, ಅಶೋಕ ವಾರದ, ಗೊಲ್ಲಾಳಪ್ಪಗೌಡ ಪಾಟೀಲ, ಸಂತೋಷ ಹರನಾಳ, ಅಮೀರ್ ಚೌಧರಿ, ಎಂ.ಎ.ಖತೀಬ, ಮಲ್ಲು ಘತ್ತರಗಿ, ಚನ್ನು ವಾರದ, ವಿಜಯಕುಮಾರ ಯಾಳವಾರ, ಪರಶುರಾಮ ಉಪ್ಪಾರ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts