More

    29 ರಂದು ಶಿವಾಜಿ ಪುತ್ಥಳಿ ಅನಾವರಣ

    ಸಿಂದಗಿ: ತಾಲೂಕಿನ ಮಲಘಾಣದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಶಿವಾಜಿ ಮಹಾರಾಜರ ಕಂಚಿನ ಪುತ್ಥಳಿಯನ್ನು ಫೆ.29 ರಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಜಂಟಿಯಾಗಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಗ್ರಾಮದ ಮುಖಂಡರು ತಿಳಿಸಿದರು.
    ಕ್ಷತ್ರೀಯ ಮರಾಠ ಸಮಾಜ ಸೇವಾ ಸಂಘ ಹಾಗೂ ಗ್ರಾಮದ ಗುರು-ಹಿರಿಯರ ಬಳಗ ಮತ್ತು ಸಂಘ-ಸಂಸ್ಥೆಗಳ ಸಹಕಾರದಿಂದ ಅಂದಾಜು 13 ಲಕ್ಷ ರೂ. ವೆಚ್ಚದಲ್ಲಿ ಪುತ್ಥಳಿ ನಿರ್ಮಾಣಗೊಂಡಿದೆ. ಮಹಾರಾಷ್ಟ್ರದ ಪೂನಾದ ಕಲಾವಿದೆ ಸೀಮಾ ವಿಜಯ್ ಸಿರಕಿ ಎಂಬುವರು ಮೂರ್ತಿ ಸಿದ್ಧಪಡಿಸಿದ್ದಾರೆ ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    1.5 ಟನ್ ಪಂಚಲೋಹದ 9.5 ಅಡಿ ಎತ್ತರದ ಶಿವಾಜಿ ಪುತ್ಥಳಿಯು ಗ್ರಾಮದಲ್ಲಿ ನಿರ್ಮಿಸಲಾದ 9 ಅಡಿ ಎತ್ತರದ ಕಟ್ಟೆಯ ಮೇಲೆ ಅನಾವರಣಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಬೆಂಗಳೂರಿನ ಗೋಸಾಯಿ ಮಠದ ಭವಾನಿ ಪೀಠದ ವೇಧಾಂತಾಚಾರ್ಯ ಮಂಜುನಾಥಸ್ವಾಮಿ, ಮಲಘಾಣದ ಶಾಂತೇಶ್ವರ ಹಿರೇಮಠದ ಜಡೆಯಶಾಂತಲಿಂಗ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ, ಸ್ಥಳೀಯ ಶಾಸಕ ಎಂ.ಸಿ. ಮನಗೂಳಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸರ್ಕಾರದ ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ ಕೇಸರಿ ಧ್ವಜಾರೋಹಣ ನೆರವೇರಿಸುವರು. ಲೋಕಸಭೆ ಸದಸ್ಯ ರಮೇಶ ಜಿಗಜಿಣಗಿ, ಮಾಜಿ ಸಚಿವ, ಶಾಸಕ ಎಂ.ಬಿ. ಪಾಟೀಲ ಜ್ಯೋತಿ ಬೆಳಗಿಸುವರು ಎಂದು ಹೇಳಿದರು.
    ಅಕ್ಕಲಕೋಟ ಶಾಸಕ ಸಚಿನ್ ಕಲ್ಯಾಣಶೆಟ್ಟಿ, ಶಾಸಕ ಯಶವಂತರಾಯಗೌಡ ಪಾಟೀಲ ಪುಷ್ಪಾರ್ಚನೆ ಸಲ್ಲಿಸುವರು. ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ಜಿಪಂ ಸದಸ್ಯ ಯಶವಂತರಾಯಗೌಡ ರೇ. ರೂಗಿ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿ.ಆರ್. ಗ್ರುಪ್‌ನ ಶಿವಾನಂದ ಪಾಟೀಲ ಮನರಂಜನೆ ಕಾರ್ಯಕ್ರಮಗಳ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.
    ಯಶವಂತರಾಯಗೌಡ ರೂಗಿ, ರಸೂಲಸಾಬ ಆಲಮೇಲ, ಶ್ಯಾಮರಾವ ಚವಾಣ್, ದಾವಲಸಾ ಬಡೇಘರ, ಅರ್ಜುನ ಚವಾಣ್, ಶರಣು ಕಕ್ಕಳಮೇಲಿ, ದಶರಥ ಚವಾಣ್, ಗೋಪಾಲ ಶಿಂಧೆ, ಶಿವಪ್ಪ ಮಾಶ್ಯಾಳ, ಮಹಾದೇವ ಕದಂ, ರಾಜು ಚವಾಣ್, ಅಮಿತ್ ಚವಾಣ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts