More

    ಮನುಕುಲಕ್ಕೆ ಶರಣರ ಕೊಡುಗೆ ಅಪಾರ

    ಸಿಂದಗಿ: ಮನುಕುಲಕ್ಕೆ ಶರಣರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಜಾತಿ ವ್ಯವಸ್ಥೆಯನ್ನು ಒಡೆದು ಸಮ ಸಮಾಜದ ಪರಿಕಲ್ಪನೆಯನ್ನು ಕಟ್ಟಿಕೊಟ್ಟಿದ್ದಾರೆ. ಆದರೆ, ಇಂದು ವಿವಿ ಕುಲಪತಿ ಮಾಡಲು, ಮಂತ್ರಿ ಮಾಡುವುದು ಸೇರಿ ಯಾವುದೇ ಪದವಿ ನೀಡಲು ಪ್ರತಿಭೆಯನ್ನುಗುರುತಿಸದೆ ಜಾತಿ ನೋಡಲಾಗುತ್ತಿದೆ ಎಂದು ಅಕ್ಕಮಹಾದೇವಿ ಮವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರ ಕಾಕಡೆ ವಿಷಾದಿಸಿದರು.

    ಪಟ್ಟಣದ ಬಸವಮಂಟಪದಲ್ಲಿ ಆರು ಊರು ಗೆಳೆಯರ ಬಳಗದ ಸಹಯೋಗದಲ್ಲಿ ಮಡಿವಾಳ ಮಾಚಿದೇವ ವಚನ ಮಂಟಪದಿಂದ ಆಯೋಜಿಸಲಾಗಿದ್ದ ಇತ್ತೀಚೆಗೆ ಹಮ್ಮಿಕೊಂಡಿದ್ದ ವಚನ ಓದು ಹಾಗೂ ವಿಶ್ಲೇಷಣೆ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ಯುವ ಗೆಳೆಯರು ತೆರೆ ಮರೆಗೆ ಸರಿದು ಹೋಗುತ್ತಿರುವ ಶರಣರನ್ನು ಮತ್ತೆ ಮುಂಚೂಣಿಯಲ್ಲಿ ತರುವ ಮೂಲಕ ಮುಂದಿನ ಪೀಳಿಗೆಗೆ ದಾಟಿಸಿಕೊಂಡು ಹೋಗುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
    ಶಾಸಕ ಎಂ.ಸಿ. ಮನಗೂಳಿ ಮಾತನಾಡಿ, ಜನರು ಬರೀ ಹಣದ ಹಿಂದೆ ಬೆನ್ನು ಬಿದ್ದಿದ್ದಾರೆ. ಅದನ್ನ ಬಿಟ್ಟು, ಈ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಶರಣರು ನೀಡಿದ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
    ಹಿರಿಯ ಸಂಶೋಧಕ ಹಾಗೂ ತೀರ್ಪುಗಾರ ಡಾ.ಎಂ.ಎಂ. ಪಡಶೆಟ್ಟಿ ಮಾತನಾಡಿ, ವಚನಗಳನ್ನ ಓದುವುದು ಹೇಗೆ? ಅದನ್ನು ವಿಶ್ಲೇಷಣೆ ಮಾಡುವ ಸಂದರ್ಭ ಅನುಸರಿಸಬೇಕಾದ ಸೂತ್ರಗಳೇನು ಎನ್ನುವುದರ ಬಗ್ಗೆ ಸಲಹೆ ನೀಡಿದರು. 30ಕ್ಕೂ ಹೆಚ್ಚು ಜನರ ಸ್ಪರ್ಧೆಯಲ್ಲಿ ಅಂತಿಮವಾಗಿ ಬಂದ 14 ಜನರಲ್ಲಿ ತುಂಬಾ ಪೈಪೋಟಿ ಇತ್ತು. ಅರ್ಧ ಅಂಕದಲ್ಲಿ ಪೈಪೋಟಿ ನಡೆದಿದ್ದರಿಂದಾಗಿ ಪ್ರಥಮ ಇಬ್ಬರಿಗೆ, ದ್ವಿತೀಯ ಇಬ್ಬರಿಗೆ ಹಾಗೂ ತೃತೀಯ ಒಬ್ಬರಿಗೆ ನೀಡಲಾಯಿತು ಎಂದರು.

    ಧಾರವಾಡದ ಜಿ.ಆರ್. ಗ್ರೂಪ್ ಮುಖ್ಯಸ್ಥ ಶಿವಾನಂದ ಪಾಟೀಲ ಸೋಮಜಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಮಡಿವಾಳ ಮಾಚಿದೇವ ವಚನ ಮಂಟಪದ ಕಾರ್ಯದರ್ಶಿ ನಾಗೇಶ ತಳವಾರ, ಪತ್ರಕರ್ತ ಶಾಂತು ಹಿರೇಮಠ ಮಾತನಾಡಿದರು.
    ಡಾ.ವಿ.ಡಿ. ಐಹೊಳೆ, ಜಗದೀಶ ಪಾಟೀಲ ಪ್ರಥಮ ಸ್ಥಾನ ಹಂಚಿಕೊಂಡರು. ಸುಕೃತಾ ಪಟ್ಟಣಶೆಟ್ಟಿ ಹಾಗೂ ಪಲ್ಲವಿ ಬಾಗೇವಾಡಿ ದ್ವಿತೀಯ ಸ್ಥಾನ ಪಡೆದರೆ, ಸಾಧನಾ ಸಿಂಧೆ ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು.

    ಮಡಿವಾಳ ಮಾಚಿದೇವ ವಚನ ಮಂಟಪದ ಸಂಸ್ಥಾಪಕ ಅಧ್ಯಕ್ಷ ಚಂದ್ರಕಾಂತ ಸೊನ್ನದ, ಅಧ್ಯಕ್ಷ ಮಡು ಕರದಾಳಿ, ಖಜಾಂಚಿ ಗುರುರಾಜ ಪಡಶೆಟ್ಟಿ, ಸಾಹಿತಿ ಡಾ. ಚನ್ನಪ್ಪ ಕಟ್ಟಿ, ಸುಭಾಸಗೌಡ ಪಾಟೀಲ, ಪ್ರಶಾಂತ ಪಾಟೀಲ, ಸಿದ್ದು ಬುಳ್ಳಾ, ಶಿವು ಕಲ್ಲೂರ, ಮಲ್ಲು ಹಿರೋಳ್ಳಿ, ಮಹಾಂತೇಶ ಕಲಶೆಟ್ಟಿ, ಗೌರೀಶ ಹೈಯಾಳಕರ ಮತ್ತಿತರರಿದ್ದರು. ಜಗದೀಶ ಪಾಟೀಲ ನಿರೂಪಿಸಿದರು. ಶಶಿಧರ ಹೊನ್ನಳ್ಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts