More

    ಪುರಸಭೆಯಲ್ಲಿ ಅಧಿಕಾರಿ ಕುರ್ಚಿ ಪಡೆಯುವುದಕ್ಕೂ ವಾಮಾಚಾರ!

    ಸಿಂದಗಿ: ಪಟ್ಟಣದ ಪುರಸಭೆಯಲ್ಲಿ ಮುಖ್ಯಾಧಿಕಾರಿ ಕುರ್ಚಿ ಕೆಳಗೆ ಸಿಕ್ಕ ಕುಂಕುಮ ತುಂಬಿದ ನಿಂಬೆ ಹಣ್ಣೊಂದು ಸಿಕ್ಕಿದ್ದು, ಸಿಬ್ಬಂದಿ ಹಾಗೂ ಮುಖ್ಯಾಧಿಕಾರಿಗಳಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದೆ. ಕಚೇರಿ ಸ್ವಚ್ಛತೆ ಕೆಲಸ ಮಾಡುವ ಸಿಬ್ಬಂದಿ ರುಕ್ಮುದ್ದೀನ್ ಬಾವಾ ಎಂಬುವವರು ಮಂಗಳವಾರ ಗಣ ರಾಜ್ಯೋತ್ಸವ ನಿಮಿತ್ತ ಮುಖ್ಯಾಧಿಕಾರಿ ಕೋಣೆಗೆ ಆಗಮಿಸಿ ಕಸಗುಡಿಸುವ ಸಂದರ್ಭ ಅಧಿಕಾರಿ ಕುರ್ಚಿ ಕೆಳಗೆ ಕುಂಕುಮ ತುಂಬಿದ್ದ ನಿಂಬೆ ಹಣ್ಣ ಕಂಡು ಗಾಬರಿಗೊಂಡಿದ್ದಾರೆ. ಕೂಡಲೇ ಮುಖ್ಯಾಧಿಕಾರಿ ಸುರೇಶ ನಾಯಕ ಅವರನ್ನು ಕರೆದು ತೋರಿಸಿದ್ದಾರೆ.

    ಧ್ವಜಾರೋಹಣಕ್ಕೆ ಆಗಮಿಸಿದ್ದ ಕೆಲವು ಪುರಸಭೆ ಸದಸ್ಯರು ಮತ್ತು ಕಚೇರಿಯ ಇತರ ಸಿಬ್ಬಂದಿ ಸಾಹೇಬರ ಕುರ್ಚಿಗೆ ಯಾರೋ ಕಣ್ಣಿಟ್ಟಿದ್ದಾರೆ. ಅದಕ್ಕಾಗಿ ಹೀಗೆಲ್ಲ ಮಂತ್ರ ವಿದ್ಯೆ ಬಳಸುತ್ತಿದ್ದಾರೆ. ಅಂಜಬೇಡಿ, ಇದೆಲ್ಲ ಮೂಢ ನಂಬಿಕೆ ಎಂದು ತಿಳಿಸಿ ನಿಂಬೆ ಕಾಯಿಯನ್ನು ಅಲ್ಲಿಂದ ದೂರ ಎಸೆಯಲು ಸಿಬ್ಬಂದಿಗೆ ಸೂಚಿಸಿದರು.

    ನಾನು ಮುಖ್ಯಾಧಿಕಾರಿಯಾಗಿ ಕೆಲಸಕ್ಕೆ ಬಂದಾಗಿನಿಂದಲೂ ನನ್ನ ಕೆಲಸಕ್ಕೆ ಅಡೆತಡೆ ಮಾಡುವ ತಂತ್ರಗಳನ್ನು ಚೀಟಿ ಕಟ್ಟಿ ಎಸೆಯುವುದು ಸೇರಿದಂತೆ ಇತರ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಇದನ್ನು ಯಾರು ಮಾಡುತ್ತಿದ್ದಾರೆ ಎನ್ನುವುದು ತಿಳಿದಿಲ್ಲ. ಇಂದು ನಿಂಬೆ ಹಣ್ಣಿನ ಮೂಲಕ ಭಯ ಮೂಡಿಸುವ ಯತ್ನ ಮಾಡಲಾಗುತ್ತಿದೆ. ಇದನ್ನು ಯಾರು ಮಾಡುತ್ತಿದ್ದಾರೆಂಬುದು ತಿಳಿಯುತ್ತಿಲ್ಲ. ಕಚೇರಿಯಲ್ಲಿನ ಸಿಸಿ ಕ್ಯಾಮೆರಾಗಳಲ್ಲಿ ಅವರ ಚಲನವಲನಗಳ ಮೇಲೆ ನಿಗಾವಹಿಸಲಾಗುತ್ತಿದೆ. ನೇರವಾಗಿ ಏನನ್ನೂ ಮಾಡಲಾಗದವರು ಇಂತಹ ಕೃತ್ಯಕ್ಕೆ ಕೈ ಹಾಕಿದ್ದಾರೆ. ಕಚೇರಿ ಹಿಂಬದಿಯ ಕಿಟಕಿ ಗ್ಲಾಸು ಒಡೆದು ಹೋಗಿದ್ದರಿಂದ ಅಲ್ಲಿಂದಲೇ ಎಸೆದಿರಬಹುದು.
    ಸುರೇಶ ನಾಯಕ, ಮುಖ್ಯಾಧಿಕಾರಿ ಸಿಂದಗಿ

    https://www.vijayavani.net/chittoor-horror-on-advice-of-swamiji-mother-ends-thier-two-daughters-after-performing-tantric-puja/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts