More

    ಚೆಸ್​ನಲ್ಲಿ ಸಿಮ್ರಾ ಉತ್ತಮ ಸಾಧನೆ

    ಹುಬ್ಬಳ್ಳಿ : ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆ 2023-24 ಯಲ್ಲಿ ನಗರದ ಚಿನ್ಮಯ ವಿದ್ಯಾಲಯದ 6ನೇ ತರಗತಿಯ ವಿದ್ಯಾರ್ಥಿನಿ ಸಿಮ್ರಾ ನದಾಫ ಚೆಸ್ ಸ್ಪರ್ಧೆಯ 14 ವರ್ಷ ವಯೋಮಿತಿಯಲ್ಲಿ 4ನೇ ಸ್ಥಾನ ಗಳಿಸಿದ್ದಾಳೆ.

    ಈ ಸ್ಪರ್ಧೆಯಲ್ಲಿ 9 ಅಂಕಗಳ ಪೈಕಿ 7.5 ಅಂಕಗಳನ್ನು ಪಡೆದುಕೊಂಡು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಯಾಗಿದ್ದಾಳೆ. ಶಾಲೆಯ ಆಡಳಿತ ಮಂಡಳಿಯವರು ಈ ಸಾಧನೆಗೆ ಮೆಚ್ಚಿ ಐದು ಸಾವಿರ ರೂ. ನಗದು ಬಹುಮಾನವನ್ನು ವಿದ್ಯಾರ್ಥಿನಿಗೆ ಕೊಟ್ಟಿದ್ದಾರೆ. ಧಾರವಾಡ ಜಿಲ್ಲೆಯಿಂದ ಈ ವಿದ್ಯಾರ್ಥಿನಿ ಮಾತ್ರ ಪ್ರತಿನಿಧಿಸಿದ್ದಳು. ಶಾಲೆಯ ಆಡಳಿತ ಮಂಡಳಿ, ಆಡಳಿತಾಧಿಕಾರಿಗಳು, ಮುಖ್ಯೋಧ್ಯಾಪಕಿ, ಶಿಕ್ಷಕರು ವಿದ್ಯಾರ್ಥಿನಿಯ ಸಾಧನೆಗೆ ಶುಭ ಹಾರೈಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts