More

    ಬೆಳ್ಳಿ ಸಿಂಹಾಸನ ಅದ್ದೂರಿ ಮೆರವಣಿಗೆ

    ಬೈಲಹೊಂಗಲ: ಪಟ್ಟಣದ ಶ್ರೀ ಸಾಯಿಬಾಬಾ ದೇವಸ್ಥಾನಕ್ಕೆ ಸುಮಾರು 35 ಲಕ್ಷ ರೂ. ವೆಚ್ಚದ 45 ಕೆಜಿ ತೂಕದ ಬೆಳ್ಳಿ ಸಿಂಹಾಸನವನ್ನು ಮಂಗಳವಾರ ಅದ್ದೂರಿ ಮೆರವಣಿಗೆ ಮಾಡಲಾಯಿತು.

    ಎಪಿಎಂಸಿ ಎದುರು ಇರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪಲ್ಲಕ್ಕಿಯು ಸಕಲ ವಾದ್ಯಮೇಳಗಳೊಂದಿಗೆ ಪಟ್ಟಣದ ಇಂಚಲ ರಸ್ತೆ, ಕೇಂದ್ರ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಬಜಾರ್ ರಸ್ತೆ, ಗೊಂಬಿಗುಡಿ, ಹನುಮಂತ ದೇವರ ದೇವಸ್ಥಾನ ಮೂಲಕ ಸಿಂಹಾಸನದ ಮೆರವಣಿಗೆ ಸಾಯಿಬಾಬಾ ಮಂದಿರ ತಲುಪಿತು. ದಾರಿಯುದ್ದಕ್ಕೂ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಲಾಯಿತು.

    ಶ್ರೀ ಶಿರಡಿ ಸಾಯಿ ಸೇವಾ ಸಮಿತಿ ಅಧ್ಯಕ್ಷ ಅರವಿಂದ ಕಲಕುಟಕರ ಮಾತನಾಡಿ, ಭಕ್ತರ ಇಚ್ಛೆಯಂತೆ ಶ್ರೀ ಸಾಯಿ ಮಂದಿರದ 17ನೇ ವಾರ್ಷಿಕೋತ್ಸವ ಅಂಗವಾಗಿ ಡಿ.7ರಂದು ಬೆಳಗ್ಗೆ 6 ಗಂಟೆಗೆ ಹೋಮ, ಸನ್ಮಂಗಳ ಪೂಜಾ ಕಾರ್ಯಕ್ರಮದೊಂದಿಗೆ 10 ಗಂಟೆಗೆ ಸಾಯಿಬಾಬಾಗೆ ಬೆಳ್ಳಿ ಸಿಂಹಾಸನ ಅರ್ಪಣೆ ಕಾರ್ಯಕ್ರಮ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಮಧ್ಯಾಹ್ನ 12 ಗಂಟೆಗೆ ಆರತಿ, ಬಳಿಕ ಮಹಾಪ್ರಸಾದ ಸೇವೆ, ಸಂಜೆ 6 ಗಂಟೆಗೆ ದೀಪೋತ್ಸವ ಜರುಗಲಿದೆ. ದೀಪ ಬೆಳಗಿಸುವ ಭಕ್ತರು ಮಂದಿರದಲ್ಲಿ ದೀಪದ ಪಾವತಿ ಪಡೆಯುವ ಮೂಲಕ ದೀಪ ಬೆಳಗಿಸಿ ಶ್ರೀ ಸಾಯಿಬಾಬಾ ಅವರ ಕೃಪಾಗೆ ಪಾತ್ರರಾಗಬೇಕೆಂದರು.

    ಆನಂದ ಪುರಾಣಿಕಮಠ, ಕಾರ್ಯದರ್ಶಿ ಅನಿಲ ಚಡಿಚಾಳ, ನಿರ್ದೇಶಕರಾದ ಆರ್.ಎ.ಪಾಟೀಲ, ಮಹೇಶ ಹಿರೇಮಠ, ಎಸ್.ಬಿ.ಪಾಟೀಲ, ವೀರೇಶ ಹೊಳೆಪ್ಪನವರ, ಪುರಸಭೆ ಸದಸ್ಯರಾದ ಬಸವರಾಜ ಜನ್ಮಟ್ಟಿ, ಅರ್ಜುನ ಕಲಕುಟಕರ, ಭಕ್ತರಾದ ಜಗದೀಶ ಮರೆಮ್ಮಗೋಳ, ಬಾಬು ಹರಕುಣಿ, ಬೊಮ್ಮನಾಯ್ಕ ಪಾಟೀಲ, ಎಂ.ವಿ.ಸಾಲಿಮಠ, ಮಹಾಂತೇಶ ಮೂಗಿ, ಆನಂದ ಪುರಾಣಿಕಮಠ, ಮಹಾದೇವ ಗೊಲ್ಲರ, ಎಸ್.ಜಿ.ಭೋವಿ, ಜಿ.ಎಸ್.ಸಾಧುನವರ, ಬಿ.ಬಿ.ವಾಳೇಕರ, ಮಂಜುನಾಥ ಬಾಗೇವಾಡಿ, ರಮೇಶ ಗಾಣಿಗೇರ, ಅರುಣ ಚಿನಗುಡಿ, ಅರುಣ ಕುಂದ್ರಾಳ, ಮಹಾಂತೇಶ ನಾಗನಗೌಡರ, ಚಂಬಯ್ಯ ಪುರಾಣಿಕಮಠ, ದುಂಡಪ್ಪ ಅಂಗಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts