More

  ರೇಷ್ಮೆ ಬೆಂಬಲ ಬೆಲೆ 600 ರೂ. ಹೆಚ್ಚಳ: ಸಿರಿಗೇರಿಯಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿಕೆ

  ಸಿರಿಗೇರಿ: ರೇಷ್ಮೆ ಹಾಗೂ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಗುರುವಾರ ಸಂಜೆ ಸಿರಿಗೇರಿ ಗ್ರಾಮಕ್ಕೆ ಭೇಟಿ ನೀಡಿ ಶ್ರೀ ನಾಗನಾಥೇಶ್ವರ ದೇವರ ದರ್ಶನ ಪಡೆದರು. ನಂತರ ಅನ್ನಪೂರ್ಣ ಕ್ರಿಯೆಷನ್ಸ್‌ನ ಯರಿಸ್ವಾಮಿ ನಿರ್ದೇಶಿಸಿದ ‘ಕುರುಗೋಡು ಸಿರಿಗೇರಿ ದರ್ಶನ ’ ಸಾಕ್ಷೃಚಿತ್ರದ ಸಿ.ಡಿ.ಬಿಡುಗಡೆ ಮಾಡಿ, ವೀಕ್ಷಿಸಿದರು.

  ರೇಷ್ಮೆ ಬೆಳೆಗಾರಿಗೆ ಗುರುತಿನ ಚೀಟಿ ವಿತರಿಸಲಾಗುವುದು. ರೇಷ್ಮೆಯ ಬೆಂಬಲ ಬೆಲೆ 600 ರೂ. ಹೆಚ್ಚಿಸಲಾಗುವುದು. ಯಾವುದೇ ಕ್ರೀಡೆಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಪಟುಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವಂತೆ ಸಿಎಂಗೆ ಮನವಿ ಮಾಡಿದ್ದು, ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ದೇಶದಲ್ಲಿಯೇ ಪ್ರಥಮವಾಗಿ ಕರ್ನಾಟಕದಲ್ಲಿ ಏಷ್ಯಾಡ್ ಕ್ರೀಡಾಕೂಟ ನಡೆಸಲಾಗುವುದು ಎಂದು ತಿಳಿಸಿದರು.

  ಲೇಖಕ ಸಿರಿಗೇರಿ ಯರಿಸ್ವಾಮಿ ಮಾತನಾಡಿದರು. ಸಚಿವರನ್ನು ಗ್ರಾಮದ ಅಮರೇಶ್ ಗೌಡ ಸೇರಿ ಮುಖಂಡರು ಸನ್ಮಾನಿಸಿದರು. ಗ್ರಾಪಂ ಅಧ್ಯಕ್ಷೆ ಸುಜಾತಾ ಕುಮಾರಸ್ವಾಮಿ, ಉಪಾಧ್ಯಕ್ಷೆ ದಾನಮ್ಮ ಮುದಿಯಪ್ಪ, ಕ್ರಿಡಾ ಇಲಾಖೆಯ ಆಯುಕ್ತ ಗೋಪಾಲಕೃಷ್ಣ ಮತ್ತು ಆಪ್ತ ಸಹಾಯಕ ಪ್ರಭಾಕರ್, ತಾಪಂ ಇಒ ಶಿವಪ್ಪ ಸುಬೇದಾರ್, ತಹಸೀಲ್ದಾರ್ ಮಂಜುನಾಥ ಸ್ವಾಮಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts