More

  ಸಿಕಂದರ್ ಅಧ್ಯಕ್ಷ, ರಾವಸಾಬ ಉಪಾಧ್ಯಕ್ಷ

  ಮಾಂಜರಿ: ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ದಿ ಆಜಾದ್ ಕೋ-ಆಪ್ ಕ್ರೆಡಿಟ್ ಸೊಸೈಟಿ ನೂತನ ಅಧ್ಯಕ್ಷರಾಗಿ ಸಿಕಂದರ್ ತಾಂಬೋಳಿ ಮತ್ತು ಉಪಾಧ್ಯಕ್ಷರಾಗಿ ರಾವಸಾಬ ನರವಾಡೆ ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ.

  ಅಪ್ಪಾ ಮುಲ್ಲಾ, ಬಸಪ್ಪಾ ಕೋಕಣೆ, ಜ್ಯೋತಿರಾಮ ಲೋಕರೆ, ಶಮಶೇರ ಮತ್ತೆಭಾಯಿ, ಮನ್ಸೂರ್ ಅಪರಾಜ, ಮೌಲಾ ತರಾಳ, ರಾಜಕುಮಾರ ಪಾಟೀಲ, ಮದೀನಾ ತರಾಳ, ಬೇಬಿಜಾನ್ ಮುಲ್ಲಾ ಮತ್ತು ನಾಮದೇವ ಬಾನೆ ಸದಸ್ಯರಾಗಿ ಅವಿರೋಧ ಆಯ್ಕೆಯಾದರು.

  ನೂತನ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಚುನಾವಣಾಧಿಕಾರಿ ಕುಂತಿನಾಥ ಶಿರಹಟ್ಟಿ ಅವರನ್ನು ಸನ್ಮಾನಿಸಲಾಯಿತು.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಯಾದವ, ಉಮರ್ ಜಮಾದಾರ, ಇಮ್ರಾನ್ ತಾಂಬೋಳಿ, ಸೈಯ್ಯದ್ ತರಾಳ, ಯಾಲೇಖಾನ್ ತರಾಳ, ಬಾಪು ಮುಲ್ಲಾ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts