More

    ಬುಡಕಟ್ಟು ಸಿದ್ದಿಗಳು ಕೃಷಿಯಲ್ಲಿ ಲಾಕ್ – ಇದು ಕರೊನಾ ಲಾಕ್​ಡೌನ್ ಎಫೆಕ್ಟ್​

    ಹಳಿಯಾಳ: ಉದರ ನಿರ್ವಹಣೆಗಾಗಿ ಅನ್ಯ ರಾಜ್ಯ, ಜಿಲ್ಲೆಗೆ ತೆರಳಿದ್ದ ಬುಡಕಟ್ಟು ಸಿದ್ದಿ ಸಮುದಾಯದವರನ್ನು ಈ ಲಾಕ್​ಡೌನ್ ಮತ್ತೆ ಕುಟುಂಬದ ಮೂಲ ಕಸುಬಿನತ್ತ ಚಿತ್ತ ಹರಿಸುವಂತೆ ಮಾಡಿದೆ.

    ತಾಲೂಕಿನ ಕೆಸರೊಳ್ಳಿ ಗ್ರಾ.ಪಂ ವ್ಯಾಪ್ತಿಗೊಳಪಡುವ ಗರಡೊಳ್ಳಿ-ವಾಡಾ ಗ್ರಾಮದಲ್ಲಿ ಬಹುತೇಕವಾಗಿ ಸಿದ್ಧಿಗಳೇ ನೆಲೆಸಿದ್ದಾರೆ. ಈ ಗ್ರಾಮಗಳಲ್ಲಿ ಕೃಷಿ ಕಾರ್ಯಕ್ಕೆ ಎಲ್ಲಿಲ್ಲದ ಮಹತ್ವ ಬಂದಿದೆ. ಸಿದ್ದಿಗಳೆಲ್ಲ ಈಗ ಕೃಷಿ ಹಂಗಾಮಿನಲ್ಲಿ ಲಾಕ್ ಆದಂತಾಗಿದ್ದಾರೆ.

    ಗ್ರಾಮಗಳ ಜನಸಂಖ್ಯೆ 945 ರಷ್ಟಿದೆ. ಗರಡೊಳ್ಳಿಯಲ್ಲಿ 130 ಹಾಗೂ ವಾಡಾದಲ್ಲಿ 7 ಕುಟುಂಬಗಳಿವೆ. ಮರಾಠಾ ಸಮುದಾಯದ ಕೆಲ ಕುಟುಂಬಗಳನ್ನು ಬಿಟ್ಟರೆ ಇಲ್ಲಿ ಸಿದ್ದಿ ಸಮುದಾಯದವರೇ ಹೆಚ್ಚು.

    ಕಠಿಣ ಪರಿಶ್ರಮಿಗಳು: ಎಂತಹ ಕಠಿಣ ಕೆಲಸ ನೀಡಿದರೂ ಸೈ ಎನ್ನುವ ಈ ಸಿದ್ದಿಗಳು ಕೃಷಿ ಕೆಲಸ ಬಿಟ್ಟು ಉದ್ಯೋಗ ಅರಸಿ ಹೊರ ರಾಜ್ಯ, ಜಿಲ್ಲೆಗಳಿಗೆ ಹೋಗಿದ್ದರು. ಯುವಕರು ಹೋಟೆಲ್, ಸೆಕುರಿಟಿ, ಡ್ರೈವಿಂಗ್, ಮನೆ ನಿರ್ವಣದ ಕೆಲಸಕ್ಕೆ ತೆರಳಿದ್ದರೆ, ಯುವತಿಯರು ಮನೆ, ತೋಟಗಳ ನಿರ್ವಹಣೆ ಇತ್ಯಾದಿ ಕೆಲಸ ಮಾಡಲು ತೆರಳಿದ್ದರು. ಕರೊನಾ ಲಾಕ್​ಡೌನ್​ದಿಂದಾಗಿ ಹೊರಗಡೆ ಹೋದವರೆಲ್ಲರೂ ಈಗ ಗ್ರಾಮಕ್ಕೆ ಮರಳಿದ್ದಾರೆ. ಮರಳಿದವರೆಲ್ಲರಿಗೆ ಮತ್ತೆ ಹಿಂದಿನ ಕೆಲಸ ಸಿಗುವ ಅನಿಶ್ಚಿತತೆ ಎದುರಾಗಿದ್ದರಿಂದ ಈಗ ಎಲ್ಲರೂ ಕುಟುಂಬದ ಮೂಲ ಕಸುಬು ಕೃಷಿಯತ್ತ ಚಿತ್ತ ಹರಿಸಿದ್ದಾರೆ.

    ರೇಷನ್ ಬಂದಿದೆ: ಗರಡೊಳ್ಳಿ -ವಾಡಾದಲ್ಲಿ ಪ್ರತಿ ಕುಟುಂಬಗಳಿಗೆ ಎರಡು ತಿಂಗಳ ರೇಷನ್ ತಲುಪಿದೆ. ಜತೆಗೆ ಕೇಂದ್ರ ಸರ್ಕಾರದಿಂದ ಬುಡಕಟ್ಟು ಸಮುದಾಯದವರಿಗೆ ಪೌಷ್ಟಿಕ ಆಹಾರವನ್ನೂ ಪೂರೈಸಲಾಗಿದೆ. ತಾಲೂಕಾಡಳಿತದ ಸೂಚನೆಯಂತೆ ಪಟ್ಟಣದಿಂದ ತರಕಾರಿ, ಹಣ್ಣು ಮಾರಾಟ ಮಾಡಲು ವ್ಯಾಪಾರಸ್ಥರು ನಿತ್ಯ ಗ್ರಾಮಗಳಿಗೆ ಬಂದು ಹೋಗುತ್ತಿದ್ದಾರೆ. ಸದ್ಯಕ್ಕೆ ಮದುವೆ ಮತ್ತಿತರ ಕಾರ್ಯಗಳನ್ನು ಮುಂದೂಡಲಾಗಿದೆ. ಸರ್ಕಾರದ ಎಲ್ಲ ಮಾರ್ಗದರ್ಶನಗಳನ್ನು ಪಾಲಿಸುತ್ತಿದ್ದೇವೆ ಎನ್ನುತ್ತಾರೆ ಗರಡೊಳ್ಳಿಯ ಲೀನಾ ಕಾಂಬ್ರೆಕರ.

    ಕಾಜೂ-ಘಮಲು: ಗ್ರಾಮಗಳಲ್ಲಿ ಕಳ್ಳಬಟ್ಟಿ ತಯಾರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ತಂಡ ಗ್ರಾಮಕ್ಕೆ ಭೇಟಿ ನೀಡಿ ಎಚ್ಚರಿಸಿ ಹೋಗಿದೆ. ಆದರೂ ಸದ್ಯ ಎಲ್ಲೆಡೆ ಗೇರು ಹಣ್ಣಿನ ಸೀಜನ್ ಆರಂಭವಾಗಿದ್ದರಿಂದ ಗರಡೊಳ್ಳಿ-ವಾಡಾದ ಕೆಲವೆಡೆ ಹೋಂ ಮೆಡ್ (ಉರಾಕ ಮಾದರಿ) ಕಾಜೂ ಪೇಯ ಬಳಸಲಾಗುತ್ತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

    ಇಲ್ಲಿನ ಬಹುತೇಕ ಜನ ಕೂಲಿ ಕಾರ್ವಿುಕರಾಗಿದ್ದು, ಲಾಕ್​ಡೌನ್​ದಿಂದ ಕೆಲಸವಿಲ್ಲದೆ ಹಣದ ಸಮಸ್ಯೆಯಾಗಿದೆ. ಸರ್ಕಾರ ರೇಷನ್ ನೀಡಿದೆ. ಇತರ ಜೀವನಾವಶ್ಯಕ ಸಾಮಗ್ರಿ ಪೂರೈಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.

    | ಮೊತೆಸ್ ಬಸ್ತ್ಯಾಂವ್ ಕಾಂಬ್ರೆಕರ

    ಲೇಸ್​ ಬ್ರಾ ಆಕಾರದ ಫೇಸ್​ಮಾಸ್ಕ್​ಗಳಿಗೆ ಜಪಾನಿನಲ್ಲಿ ಭಾರಿ ಬೇಡಿಕೆ- ಮಾರುಕಟ್ಟೆ ಬಂದ ಕೆಲವೇ ನಿಮಿಷಗಳಲ್ಲಿ ಸ್ಟಾಕ್ ಖಾಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts