More

    ಸಿದ್ಧಗಂಗೆಯಲ್ಲಿ ಕಲಿತವರು ಭಾಗ್ಯವಂತರು

    ಮಾದನಹಿಪ್ಪರಗಿಯ ಅಭಿನವ ಶಿವಲಿಂಗೇಶ್ವರ ಶ್ರೀ ನುಡಿ | ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವ

    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಮಠವನ್ನು ಕಟ್ಟಿ ಬೆಳೆಸುವಲ್ಲಿ ತುಮಕೂರು ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಪಟ್ಟ ಶ್ರಮ ಅಪಾರ. ಮಠಾಧೀಶರೆಂದರೆ ಐಷಾರಾಮಿ ಜೀವನ ನಡೆಸುವವರೆಂದು ಟೀಕಿಸುವವರೇ ಹೆಚ್ಚು. ಆದರೆ ಸಿದ್ಧಗಂಗಾ ಶ್ರೀಗಳು ಮಠದಲ್ಲಿ ಹಿಡಿ ಅಕ್ಕಿ ಇಲ್ಲದಿದ್ದಾಗ ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಮಕ್ಕಳ ಹೊಟ್ಟೆ ತುಂಬಿಸಿದ ಮಹಾನ್ ದಾರ್ಶನಿಕರು ಎಂದು ಮಾದನಹಿಪ್ಪರಗಿಯ ಶ್ರೀ ಅಭಿನವ ಶಿವಲಿಂಗೇಶ್ವರ ಸ್ವಾಮೀಜಿ ಬಣ್ಣಿಸಿದರು.
    ಸಿದ್ಧಗಂಗಾ ಮಠದ ಹಳೇ ವಿದ್ಯಾರ್ಥಿ ಮತ್ತು ಹಿತೈಷಿಗಳ ಸಂಘ, ವೀರಶೈವ ಸಮಾಜದ ಸಹಯೋಗದಡಿ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಲಿಂಗೈಕ್ಯ ಶ್ರೀ ಡಾ.ಶಿವಕುಮಾರ ಮಹಾಸ್ವಾಮೀಜಿ ಗುರುವಂದನ ಮಹೋತ್ಸವದಲ್ಲಿ ಮಾತನಾಡಿದ ಅವರು, ಮಠಗಳ ಉಚಿತ ಪ್ರಸಾದ ನಿಲಯದಲ್ಲಿದ್ದು ಅಧ್ಯಯನ ಮಾಡುವ ಮಕ್ಕಳು ಬಡವರಲ್ಲ. ಭಾಗ್ಯವಂತರು ಎಂದರು.
    ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಮಠಗಳು ಸರ್ಕಾರ ಮಾಡದಂಥ ಕೆಲಸಗಳು ಮಾಡುತ್ತಿವೆ. ಸಮಾಜಕ್ಕೆ ಮಾರ್ಗದರ್ಶನದೊಂದಿಗೆ ಶೈP್ಷÀಣಿಕ ಕ್ರಾಂತಿ ಮಾಡಿ e್ಞÁನ ಬಿತ್ತುವಲ್ಲಿ ತೊಡಗಿಸಿಕೊಂಡಿವೆ. ಸಂಸ್ಕಾರದೊAದಿಗೆ ಸಂಸ್ಕೃತಿ ಉಳಿಸುತ್ತಿವೆ. ಕಾಯಕ ದಾಸೋಹ ತತ್ವ ಪಾಲಿಸುವುದರ ಜತೆಗೆ ಅದರ ಮಹತ್ವ ಸಾರಿದ್ದು ಸಿದ್ಧಗಂಗಾ ಮಠ ಎಂದು ಹೇಳಿದರು.
    ವೀರಶೈವ ಸಮಾಜದ ಜಿಲ್ಲಾಧ್ಯP್ಷÀ ಅರುಣಕುಮಾರ ಪಾಟೀಲï ಮಾತನಾಡಿ, ಸಿದ್ಧಗಂಗಾ ಮಠ ದೇವನೊಬ್ಬ ನಾಮ ಹಲವು, ಕಾಯಕವೇ ಕೈಲಾಸ ತತ್ವ ಅನುಸರಿಸುತ್ತಿದೆ. ಗಡಿಯಾರವೇ ಅಚ್ಚರಿ ಪಡುವಂತೆ ಪೂಜ್ಯ ಶಿವಕುಮಾರ ಸ್ವಾಮೀಜಿಗಳು ಸದಾ ಲವಲವಿಕೆಯಿಂದ ಕಾರ್ಯಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಎಲ್ಲ ಜಾತಿ, ಧರ್ಮಗಳನ್ನು ಒಗ್ಗೂಡಿಸುತ್ತಿದ್ದರು. ನನ್ನನ್ನು ಸೇರಿ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಪೂಜ್ಯರ ಋಣ ಯಾವ ಕಾರಣಕ್ಕೂ ತೀರಿಸಲು ಸಾಧ್ಯವಿಲ್ಲ. ಅವರ ಹೆಸರಿನಲ್ಲಿ ಅಲ್ಪ ಸೇವೆ ಮಾಡುವ ಭಾಗ್ಯ ಸಿಕ್ಕಿz್ದೆÃ ನಮ್ಮ ಪುಣ್ಯ ಎಂದರು.
    ಕಾರ್ಯನಿರತ ಪತ್ರಕರ್ತರ ಸಂಘದ ಜಿ¯್ಲÁಧ್ಯP್ಷÀ ಬಾಬುರಾವ ಯಡ್ರಾಮಿ ಮಾತನಾಡಿ, ಶಿP್ಷÀಣ ಮತ್ತು ದಾಸೋಹವನ್ನು ರೂಢಿಸಿಕೊಂಡಿದ್ದು ಮಠ-ಮಾನ್ಯಗಳು. ಶಿವಕುಮಾರ ಶ್ರೀಗಳು ವಿಶ್ವರತ್ನವಾಗಿz್ದÁರೆ. ದೈವಿ ಪುರುಷರಾಗಿದ್ದ ಅವರ ದರ್ಶನವೇ ನಮ್ಮಂತಹ ಸಾಮಾನ್ಯ ವ್ಯಕ್ತಿಗಳಲ್ಲಿ ಶಕ್ತಿ, ಸ್ಫೂರ್ತಿ ತುಂಬುತ್ತಿತ್ತು ಎಂದು ಸ್ಮರಿಸಿದರು.
    ಪ್ರಮುಖರಾದ ಕಲ್ಯಾಣಪ್ಪ ಪಾಟೀಲ್, ಶ್ರೀಶೈಲ ಘೂಳಿ, ಅಶೋಕ ರಟಕಲ್, ರುದ್ರಮುನಿ ಪುರಾಣಿಕ, ಗುರುನಾಥ ದೇಸಾಯಿ, ಶಿವು ರಾಜೋಳಿ, ವೀರಯ್ಯ ಕನಕಪುರ, ಜಗದೀಶ ಹಲಕರ್ಟಿ ಇತರರಿದ್ದರು. ದೇವಿಂದ್ರಪ್ಪ ಅವಂಟಿ ಸ್ವಾಗತಿಸಿದರು. ಶ್ವೇತಾ ಜಿ. ದೇಸಾಯಿ ಪ್ರಾರ್ಥಿಸಿದರು. ಚನ್ನಬಸಯ್ಯ ಗುರುವಿನ ನಿರೂಪಣೆ ಮಾಡಿದರು.


    ಸಾಧಕರಿಗೆ ಪ್ರಶಸ್ತಿ ಪ್ರದಾನ

    ಪ್ರಗತಿಪರ ಕೃಷಿ ಸಾಧಕಿ ಗುರುಬಾಯಿ ಆಳಂದ ಅವರಿಗೆ ಸಿದ್ಧಗಂಗಾ ಶ್ರೀ, ಶಿP್ಷÀಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಿ.ಎನ್.ಪಾಟೀಲ್ ಅವರಿಗೆ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂದಗೋಕುಲ ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ದೇಣಿಗೆ ನೀಡಲಾಯಿತು. ಮಾಧ್ಯಮ ಕ್ಷೇತ್ರದ ಮಹಿಪಾಲರೆಡ್ಡಿ, ತಾಜುದ್ದೀನ್ ಅಜಾದ್, ಸಹನಾ ವೆಂಕಟೇಶಮೂರ್ತಿ ಅವರನ್ನು ಸನ್ಮಾನಿಸಲಾಯಿತು.


    ಶಿಕ್ಷಣದೊಂದಿಗೆ ಸಂಸ್ಕಾರ, ಸೇವಾಭಾವ ಕಲಿಸಿದ್ದು ಮಠಗಳು. ಮಠ-ಮಂದಿರಗಳಲ್ಲಿ ಕುರ್ಚಿಗೆ ಬೇಡಿಕೆ ಇಡಬಾರದು. ಸೇವೆ ಮಾಡುವ ಅವಕಾಶ ಹುಡುಕಬೇಕು. ಶಿವಕುಮಾರ ಶ್ರೀಗಳು ಪ್ರಸಾದವನ್ನು ತಾವೇ ಮೊದಲು ಸೇವಿಸಿ ನಂತರ ಮಕ್ಕಳಿಗೆ ಬಡಿಸಲು ಹೇಳುತ್ತಿದ್ದರು. ಏನೇ ದೋಷವಿದ್ದರೂ ನನಗೆ ಬರಲಿ ಎಂಬುದು ಪೂಜ್ಯರ ಆಶಯ. ಅವರ ಮಾದರಿ ಜೀವನ ಸದಾ ಸ್ಫೂರ್ತಿದಾಯಕ.
    | ಶ್ರೀ ಅಭಿನವ ಶಿವಲಿಂಗೇಶ್ವರ ಸ್ವಾಮೀಜಿ
    ಮಾದನಹಿಪ್ಪರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts