More

    ಆರೋಗ್ಯದಿಂದ ಆತ್ಮ ಶುದ್ಧಿ

    ಅಳವಂಡಿ: ದುಶ್ಚಟಗಳು ಮನುಷ್ಯನ ಅಮೂಲ್ಯ ಜೀವನವನ್ನು ಹಾಳು ಮಾಡುತ್ತವೆ. ದುಶ್ಚಟ ಕಲಿತರೆ ಜೀವನ ನಶ್ವರವಾಗಲಿದ್ದು, ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಮೈನಳ್ಳಿ-ಬಿಕನಳ್ಳಿಯ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

    ದುಶ್ಚಟಗಳಿಂದ ಮನುಷ್ಯನ ಜೀವನ ಹಾಳು

    ಸಮೀಪದ ಮುರ್ಲಾಪುರ ಗ್ರಾಮದಲ್ಲಿ ಶ್ರೀದೇವಿ ಪುರಾಣ ಮಂಗಲದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಭಕ್ತ ಹಿತಚಿಂತನ ಸಭೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಮನುಷ್ಯ ಆರೋಗ್ಯವಾಗಿದ್ದರೆ ಮಾತ್ರ ಆತ್ಮ, ಮನಸು ಶುದ್ಧವಾಗಿರುತ್ತದೆ. ಜತೆಗೆ ಮನುಷ್ಯ ಜೀವನದಲ್ಲಿ ಒಳ್ಳೆಯ ಆಲೋಚನೆ ಹಾಗೂ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು.ಇದರಿಂದ ಮನಃಶಾಂತಿ, ಆತ್ಮ ಸಂತೃಪ್ತಿ ಸಿಗಲಿದೆ ಎಂದರು.

    ಇದನ್ನೂ ಓದಿ: ವಿಶ್ವಕಪ್​ನಲ್ಲಿ ಭಾರತದ ಯಶಸ್ಸಿನ ಹಿಂದಿರುವ ಅಸಲಿ ಸೀಕ್ರೆಟ್ ಬಿಚ್ಚಿಟ್ಟ ಮೊಹಮ್ಮದ್​ ಸಿರಾಜ್​! ​​

    ಅಳವಂಡಿ ಸಿದ್ದೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯ ಮಾತನಾಡಿ, ಪರಿವರ್ತನೆಯಾಗಲು ಪುರಾಣ, ಪ್ರವಚನ ಆಲಿಸಬೇಕು. ಅದರಲ್ಲಿ ಬರುವ ನೀತಿಪಾಠ, ಆದರ್ಶ, ಚಿಂತನೆಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ನಿವಾರಿಸಿಕೊಳ್ಳಬಹುದು. ಬದುಕಿನ ಅರ್ಥ, ಸಾರ್ಥಕತೆ ತಿಳಿದುಕೊಳ್ಳಲು ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳಿ ಎಂದರು.

    ವಕೀಲ ಗುರುಬಸವರಾಜ ಹಳ್ಳಿಕೇರಿ, ಪ್ರಮುಖರಾದ ಅಂದಾನಗೌಡ ಪೋಲಿಸಪಾಟೀಲ, ಬಸವರಾಜ ಹಾರೋಗೇರಿ, ಸುರೇಶ ಚನ್ನಳ್ಳಿ, ಶಿವರಡ್ಡಿ ಮೇಗಳಮನಿ, ಸುರೇಶ ಮೇಗಳಮನಿ, ಕೊಟ್ರೇಶ ಮೇಗಳಮನಿ, ದೇವರಾಜ ವಾಲಿಕಾರ, ರಮೇಶ ವಾಲಿಕಾರ, ದೇವಪ್ಪ ವಾಲಿಕಾರ, ಉಮೇಶಗೌಡ ಪೋಲಿಸಪಾಟೀಲ, ಉಮೇಶಗೌಡ, ಬಸವರಾಜ ಮೇಟಿ, ಉಮೇಶ ಬೆಣಕಲ್, ನಾಗಬಸಯ್ಯ, ಹೇಮಣ್ಣ ಅಂಗಡಿ, ದೇವಪ್ಪ, ಅಂದಪ್ಪ, ಶಿವನಗೌಡ, ಅಂದಪ್ಪ, ಬಸವರಾಜ, ಮೀನಾಕ್ಷಿ, ಸುಶೀಲಮ್ಮ, ಶಾಂತಮ್ಮ, ಅಂದಪ್ಪ, ಮಹಾಂತೇಶ, ಅಂದಪ್ಪ, ಶ್ರೀಧರ, ಅಂಬರೀಶ, ಅನ್ನಪೂರ್ಣ, ಪುಷ್ಪಾ, ಜ್ಯೋತಿ, ಸುಮಂಗಲಾ, ಜಯಶ್ರೀ, ಮಂಜುನಾಥ, ಗೋಣೇಶ, ದೇವಮ್ಮ, ದೇವೆಂದ್ರ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts