More

  ಸಂಸ್ಕಾರ ರಹಿತ ಶಿಕ್ಷಣ ಪ್ರಯೋಜನವಿಲ್ಲ: ಸಿದ್ಧರಾಮ ಶ್ರೀಗಳು

  ವಿಜಯವಾಣಿ ಸುದ್ದಿಜಾಲ ಗದಗ
  ಶಿಕ್ಷಣವು ವ್ಯಕ್ತಿಯ ಬದುಕಿಗೆ ಬೆಳಕನ್ನು ಕೊಡುವಂಥದ್ದಾಗಿದೆ. ಶಿಕ್ಷಣ ಇಲ್ಲದಿದ್ದರೆ ವ್ಯಕ್ತಿ ಅನಾಗರಿಕನಾಗಿ ದಾರಿದ್ರ್ಯದಿಂದ ಬಳಲುತ್ತಾನೆ. ಹಾಗಾಗಿ ಸಾರ್ವಜನಿಕ ಸೇವಾಸಂಸ್ಥೆಗಳು ವಿದ್ಯಾಥಿರ್ಗಳಿಗೆ, ಶಿಕ್ಷಕರಿಗೆ ಪ್ರೋತ್ಸಾಹ ನೀಡುತ್ತಿವೆ ಎಂದು ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು ಹೇಳಿದರು.
  ಡಾ. ಎಚ್​.ಎ್​ ಕಟ್ಟೀಮನಿ ಪ್ರೌಢಶಿಣ ಪ್ರತಿಷ್ಠಾನ ವತಿಯಿಂದ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಜರುಗಿದ “ಶಿಕ್ಷಣ ಪರಿಶ್ರಮ ಹಿರಿಮೆಗೆ ಮನ್ನಣೆಯ’ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಡಾ. ಎಚ್​. ಕಟ್ಟಿಮನಿ ಪ್ರತಿಷ್ಠಾನ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿ, ಠೇವಣಿ ಇರಿಸಿ ಅದರಿಂದ ನೆರವು ನೀಡುವಂಥ ಕಾರ್ಯ ಮಾಡುತ್ತಿದೆ. ಕಲಿಕಾ ಕೌಶಲ್ಯವನ್ನು ಕಲಿಸಿಕೊಡುವ ಕಾರ್ಯವನ್ನು ಮಾಡುತ್ತಿದೆ. ಮಕ್ಕಳ ಭವಿಷ್ಯವನ್ನು ಉಜ್ವಲಗೊಳಸಬೇಕಾದರೆ ಗುಣಮಟ್ಟದ ಶಿಣವನ್ನು ನೀಡಬೇಕಾಗಿರುವುದು ಅವಶ್ಯ. ಶಿಣ ಗುಣಮಟ್ಟದಿಂದ ಕೂಡಿರಬೇಕು ಮತ್ತು ಸಂಸ್ಕಾರದಿಂದ ಕೂಡಿರಬೇಕು. ಸಂಸ್ಕಾರರಹಿತ ಶಿಣ ಪ್ರಯೋಜನವಿಲ್ಲ ಎಂದರು.
  ನಿವೃತ್ತ ಡಿಡಿಪಿಐ ಐ. ಬಿ. ಬೆನಕೊಪ್ಪ ಉಪನ್ಯಾಸ ನೀಡಿ, ಮಗು ಚೈತನ್ಯಶಿಲನಾಗಬೇಕಾದರೆ ದಿನದಿಂದ ದಿನಕ್ಕೆ ಸಮಯದಿಂದ ಸಮಯಕ್ಕೆ ಗುಣಮಟ್ಟದ ಶಿಕ್ಷಣ ಬದಲಾಗಿ, ಗುಣಾತ್ಮಕ ಶಿಣವಾಗಬೇಕಯ. ಇದು ನಿರಂತರ ಪ್ರಕ್ರಿಯೆಯಾಗಿದೆ. ಶಿಕ್ಷಣ ಗುಣಾತ್ಮಕವಾಗಿ ಕಲಿಸಬೇಕಾಗಿದೆ. ಮಕ್ಕಳಿಗೆ ಪ್ರಗತಿಯ ಹಾದಿಯನ್ನು ಕಲಿಸುವುದು ಶಿಕನ ಕರ್ತವ್ಯವಾಗಿದೆ. ಅದಕ್ಕಾಗಿ ಶಿಕ್ಷಕರು ಸದಾ ಓದುಗರಾಗಬೇಕು. ಹಾಡು, ನೃತ್ಯ, ಭಾಷಣ, ಆಟಗಳಲ್ಲಿ ಸೃಜನಶೀಲತೆ ತುಂಬಿ ಮಕ್ಕಳಿಗೆ ಕಲಿಕೆ ನೀಡಬೇಕು ಎಂದರು.
  ವಿಶ್ರಾಂತ ಉಪನಿರ್ದೇಶಕ ಎ. ಎನ್​. ನಾಗರಳ್ಳಿ ಮಾತನಾಡಿ, ಮಕ್ಕಳ ಬಗ್ಗೆ ಶಿಕ್ಷಕರು ಅಲಕ್ಷ$್ಯ ಮಾಡಬಾರದು ಎಂದು ತಿಳಿಸಿದರು. ಎಂ.ಡಿ. ಬಳ್ಳಾರಿ, ಶಿವಶಂಕರ ಹಿರೇಮಠ, ಡಯಟ್​ ಪ್ರಾಚಾರ್ಯ ಜಿ. ಎಲ್​. ಬಾರಾಟಕ್ಕೆ ಮಾತನಾಡಿದರು. ಎಸ್​ಎಸ್​ಎಲ್​ಸಿ, ಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲಾ, ತಾಲೂಕು ಶಿಕರು ಹಾಗೂ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾಥಿರ್ಗಳಿಗೆ ಪುಸ್ತಕ ಹಾಗೂ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
  ವಿ. ವಿ. ನಡುವಿನಮನಿ, ರುದ್ರಪ್ಪ ಹುರಳಿ, ಜಿ. ಎಂ. ಮುಂದಿನಮನಿ, ಗಂಗಾಧರ ಅಣ್ಣೀಗೇರಿ, ಮಹಾದೇವಿ ಮಾಡಲಗೇರಿ, ಎಸ್​. ಬಿ. ಕೊಡ್ಲಿ, ಶಿವಾನಂದ ಗಿಡ್ನಂದಿ, ಆರ್​. ಜಿ. ಕವಲಗೇರಿ, ಚಂದ್ರಕಾಂತ ಕಬಾಡಿ ಉಪಸ್ಥಿತರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts