More

    “ಸ್ವ ಇಚ್ಛೆಯಿಂದ ರಾಜಕಾರಣಕ್ಕೆ ಬರುತ್ತಿದ್ದೇನೆ” ರಾಜಕೀಯಕ್ಕೆ ಬರಲಿರುವ ಸಿದ್ದು ಮೊಮ್ಮಗ

    ಬೆಂಗಳೂರು: ದಿಗ್ವಿಜಯ ನ್ಯೂಸ್ ಜತೆ ಮಾತನಾಡಿರುವ ಸಿದ್ದರಾಮಯ್ಯ ಮೊಮ್ಮಗ ಧವನ್, “ನನ್ನ ಸ್ವ ಇಚ್ಛೆಯಿಂದ ರಾಜಕಾರಣಕ್ಕೆ ಬರುತ್ತಿದ್ದೇನೆ” ಎಂದಿದ್ದಾರೆ.

    ಸುದ್ದಿಗಾರರ ಬಳಿ ಮಾತನಾಡಿದ ಸಿದ್ದು ಮೊಮ್ಮಗ, “ನನ್ನ ರಾಜಕೀಯ ಪ್ರವೇಶ ಮನೆಯವರೆಲ್ಲರಿಗೂ ಖುಷಿ ಕೊಟ್ಟಿದೆ. ತಾತನ ಪತವಾಗಿ ಪ್ರಚಾರ ಮಾಡುತ್ತೇನೆ. ನಾಮಪತ್ರ ಸಲ್ಲಿಕೆ ವೇಳೆ ಕೂಡ ಭಾಗವಹಿಸುತ್ತೇನೆ. ತಾತ ಅವರಿಗೆ ವೋಟ್ ಕೊಡಿ ಅಂತ ಎಲ್ಲರನ್ನು ಕೇಳಿಕೊಳ್ಳುತ್ತೇನೆ” ಎಂದು ಸಿದ್ದರಾಮಯ್ಯ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.

    “ಚಿಕ್ಕಪ್ಪ ನನ್ನ ಜೀವನದಲ್ಲಿ ಅಪ್ಪನ ಸ್ಥಾನ ತುಂಬಿದರು”

    “ಮೊದಲಿನಿಂದಲೂ ನನಗೆ ರಾಜಕೀಯ ಅಂದ್ರೆ ಆಸಕ್ತಿ. ತಂದೆ ರಾಕೇಶ್ ಮನೆಯಲ್ಲಿ ರಾಜಕೀಯದ ಬಗ್ಗೆ ಮಾತನಾಡುವಾಗ ಆಸಕ್ತಿಯಿಂದ ಕೇಳುತ್ತಿದ್ದೆ. ನನ್ನ ತಂದೆಯನ್ನ ಸದಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಚಿಕ್ಕಪ್ಪ ಯತೀಂದ್ರ ಅವರು ನನ್ನ ಜೀವನದಲ್ಲಿ ತಂದೆಯ ಸ್ಥಾನವನ್ನು ತುಂಬಿದ್ದಾರೆ. ಅವರು ಕೂಡ ರಾಜಕಾರಣದ ಬಗ್ಗೆ ಹೇಳುತ್ತಿರುತ್ತಾರೆ. ನನಗೆ 25 ವರ್ಷ ತುಂಬಲಿ. ಆಗ ಚುನಾವಣೆ ಸ್ಪರ್ಧೆಗೆ ಕ್ವಾಲಿಫೈ ಆಗುತ್ತೇನೆ. ನಂತರ ಅದರ ಬಗ್ಗೆ ಚರ್ಚೆ ಮಾಡೋಣ.

    “ಮೊದಲು ವಿದ್ಯಾಭ್ಯಾಸ, ಆಮೇಲೆ ರಾಜಕಾರಣ’

    ತಾತ ಹಾಗೂ ಚಿಕ್ಕಪ್ಪ ಮೊದಲು ಓದುವಂತೆ ಹೇಳಿದ್ದಾರೆ. ತಾತನಂತೆ ನಾನೂ ಕೂಡ ಕಾನೂನನ್ನು ಕಲಿಯುತ್ತೇನೆ. ಸಂವಿಧಾನದ ಬಗ್ಗೆ ಹೆಚ್ಚು ಹೇಳಿಕೊಡುತ್ತಿದ್ದಾರೆ. ವರುಣದಲ್ಲಿ ಸ್ನೇಹಿತರನ್ನು ಮಾಡಿಕೊಳ್ಳಬೇಕು. ಬಹಳ ದಿನಗಳು ಆಗಿತ್ತು ಇಲ್ಲಿಗೆ ಬಂದು” ಎಂದು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts