More

    ಡಿಜೆ ಹಳ್ಳಿ ಗಲಭೆ ಪ್ರಕರಣ: ಪೊಲೀಸರು ನಿಧಾನ ಮಾಡಬಾರದಿತ್ತು ಎಂದ್ರು ಸಿದ್ದರಾಮಯ್ಯ

    ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯನವರು ಇಂದು ಡಿಜೆ ಹಳ್ಳಿಗೆ ಭೇಟಿ ನೀಡಿದರು. ಗಲಭೆ ಸಂದರ್ಭದಲ್ಲಿ ಹಾನಿಗೊಳಗಾದ ಅಖಂಡ ಶ್ರೀನಿವಾಸ್​ ಅವರ ಮನೆ, ಪೊಲೀಸ್​ ಠಾಣೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

    ಡಿಸಿಪಿ ಶರಣಪ್ಪ ಸೇರಿ ಹಲವು ಪೊಲೀಸ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿ, ಗಲಭೆ ಬಗ್ಗೆ ವಿವರ ಪಡೆದುಕೊಂಡರು. ನಂತರ ಮಾತನಾಡಿ, ನಾನು ಆಸ್ಪತ್ರೆಯಲ್ಲಿ ಇದ್ದುದ್ದರಿಂದ ಡಿಜೆ ಹಳ್ಳಿಗೆ ಬರಲು ಸಾಧ್ಯವಾಗಲಿಲ್ಲ. ಘಟನೆಯಲ್ಲಿ ಪಾಪ ನಾಲ್ವರು ಮೃತಪಟ್ಟಿದ್ದಾರೆ.

    ನವೀನ್​ ಎಂಬಾತ ಅವಹೇಳನಕಾರಿ ಪೋಸ್ಟ್​ ಹಾಕಿದ್ದ. ಇದರಿಂದ ನೊಂದವರು ದೂರು ಕೊಟ್ಟರು. ತಕ್ಷಣವೇ ಎಫ್​​ಐಆರ್​ ದಾಖಲಾಗಬೇಕು, ಆತನನ್ನು ಕೂಡಲೇ ಬಂಧಿಸಬೇಕು ಎಂಬುದು ಮನವಿದಾರರ ಆಗ್ರಹವಾಗಿತ್ತು. ಆದರೆ ಪೊಲೀಸರು ನಿಧಾನ ಮಾಡಿದ್ದರಿಂದ ಇಷ್ಟೆಲ್ಲ ಆಗಿದೆ ಎಂದು ಹೇಳಿದರು. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಆಗಲಿ. ಆದರೆ ಬಂಧನವಾಗಿರುವವರಲ್ಲಿ ಅಮಾಯಕರಿದ್ದಾರೆ. ತನಿಖೆ ಮಾಡುವಾಗ ಸಾಕ್ಷಿ ಸಿಕ್ಕಿಲ್ಲವೆಂದರೆ ಅವರನ್ನು ಬಿಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನೂ ಓದಿ: ಕರೊನಾ ಭೀತಿಯಲ್ಲಿ ಸ್ಯಾನಿಟೈಸರ್‌ ಮೊರೆ ಹೋಗಿರುವಿರಾ? ಹಾಗಿದ್ದರೆ ಇದನ್ನೊಮ್ಮೆ ಓದಿಬಿಡಿ…

    ಅಖಂಡ ಶ್ರೀನಿವಾಸಮೂರ್ತಿಯವರ ಮನೆ ಸುಟ್ಟಿದೆ. ವಾಹನಗಳೂ ಸುಟ್ಟಿವೆ. ಸರ್ಕಾರ ಪರಿಹಾರ ಕೊಡಬೇಕು. ತನಿಖೆ ಶೀಘ್ರವೇ ಮುಗಿಯಬೇಕು. ಪ್ರಕರಣದ ಎಲ್ಲ ಸತ್ಯವೂ ಹೊರಬರಬೇಕು. ಹೈಕೋರ್ಟ್​ ಜಡ್ಜ್​​ರಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

    ಕರೊನಾದ ನಡುವೆಯೂ 22 ಸಾವಿರ ಅಡಿ ಮೇಲೇರಿ ಬಾವುಟ ಹಾರಿಸಿದ ಸಾಹಸಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts