More

    ಸಚಿವ ಸ್ಥಾನ ಹಂಚಿಕೆಯಲ್ಲೂ ಸಿಎಂ ಸಿದ್ದು ಮೇಲುಗೈ: ಬಿ.ಕೆ. ಹರಿಪ್ರಸಾದ್ ಮಂತ್ರಿಗಿರಿಗೂ ಅಡ್ಡಗಾಲು!?

    ಬೆಂಗಳೂರು: ಭಾರೀ ಪೈಪೋಟಿ ನಡೆಸಿ ಮುಖ್ಯಮಂತ್ರಿ ಸ್ಥಾನ ಪಡೆಯುವಲ್ಲಿ ಮೇಲುಗೈ ಸಾಧಿಸಿದ ಸಿದ್ದರಾಮಯ್ಯ, ಇದೀಗ ಸಚಿವ ಸಂಪುಟ ವಿಸ್ತರಣೆಯಲ್ಲೂ ತಮ್ಮ ಪ್ರಭಾವ ಬೀರಿದ್ದಾರೆ.

    ಸಚಿವ ಸ್ಥಾನದ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ ಮೇಲುಗೈ ಸಾಧಿಸಿದೆ. ತಮ್ಮ 14 ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಸಿದ್ದು ಯಶಸ್ವಿ ಆಗಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ತಮ್ಮ 10 ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಿದ್ದಾರೆ.

    7 ಸಚಿವ ಸ್ಥಾನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಣಕ್ಕೆ ಹಂಚಿಕೆಯಾಗಿದೆ. ಎಐಸಿಸಿ‌ ಅಧ್ಯಕ್ಷರಾಗಿದ್ರು ತಮ್ಮ ಬೆಂಬಲಿಗರನ್ನು ಖರ್ಗೆ ಕೈಬಿಡಲಿಲ್ಲ.

    ಇದನ್ನೂ ಓದಿ: ಐಫೋನ್​ ಗಿಫ್ಟ್​ ಕೊಡಲು ನಿರಾಕರಿಸಿದ ಬಾಯ್​ಫ್ರೆಂಡ್​ಗೆ ಬಿಗ್​ ಶಾಕ್​ ಕೊಟ್ಟ ಗರ್ಲ್​ಫ್ರೆಂಡ್​!

    ಸಿದ್ದರಾಮಯ್ಯ ಅಡ್ಡಗಾಲು

    ಬಿ.ಕೆ. ಹರಿಪ್ರಸಾದ್ ಮಂತ್ರಿಗಿರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡಗಾಲು ಹಾಕಿದರು ಎನ್ನಲಾಗಿದೆ. ಹರಿಪ್ರಸಾದ್ ಪರ ಡಿಕೆಶಿ ಲಾಬಿ ನಡೆಸಿದ್ದರು. ಈಡಿಗ ಕೋಟಾದಡಿ ಮಧುಬಂಗಾರಪ್ಪ ಹಾಗೂ ಬಿ.ಕೆ. ಹರಿಪ್ರಸಾದ್ ಹೆಸರು ಪಟ್ಟಿಯಲ್ಲಿತ್ತು. ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಧು ಬಂಗಾರಪ್ಪಗೆ ನೀಡುವಂತೆ ಸಿದ್ದರಾಮಯ್ಯ ಸಲಹೆ ನೀಡಿದರು. ಸಿದ್ದರಾಮಯ್ಯ ಪಟ್ಟಿನಿಂದ ಇಕ್ಕಟ್ಟಿಗೆ ಸಿಲುಕಿದ ಹೈಕಮಾಂಡ್, ಕೊನೆಗೂ ಮಧು ಬಂಗಾರಪ್ಪ ಹೆಸರನ್ನು ಪಟ್ಟಿಯಲ್ಲಿ ಸೇರಿಸಿತು. ಬಿ.ಕೆ. ಹರಿಪ್ರಸಾದ್ ಸಂಪುಟಕ್ಕೆ ಸೇರಿದರೆ ಡಿಕೆಶಿ ಬಲ ಹೆಚ್ಚಾಗಲಿದೆ ಎಂಬ ಕಾರಣದಿಂದ ಹರಿಪ್ರಸಾದ್ ಸಂಪುಟ ಸೇರ್ಪಡೆಗೆ ಸಿದ್ದರಾಮಯ್ಯ ಅಡ್ಡಗಾಲು ಹಾಕಿದರು ಎಂಬ ಚರ್ಚೆ ಕಾಂಗ್ರೆಸ್​ ಪಾಳಯದಲ್ಲಿ ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್​)

    ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ಕೊಡದಿದ್ರೆ ಕಾಂಗ್ರೆಸ್​ ಕಚೇರಿ ಮುಂದೆ ಸಾಯ್ತೀನಿ! ಅಭಿಮಾನಿಯ ಪತ್ರ ವೈರಲ್​

    ಸಚಿವ ಸಂಪುಟ ವಿಸ್ತರಣೆ: ವಲಸಿಗರಿಗೆ ಮಣೆ ಹಾಕದ ಕಾಂಗ್ರೆಸ್ ಹೈಕಮಾಂಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts