More

    ವಿಜಯೇಂದ್ರ ಡಿಫ್ಯಾಕ್ಟೋ ಸಿಎಂ ಎಂದ ಸಿದ್ದರಾಮಯ್ಯ

    ಚಿತ್ರದುರ್ಗ: ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಅವರ ಸಹೋದರ ವಿಜಯ್ ಕುಲಕರ್ಣಿ ವಶಕ್ಕೆ ಪಡೆದು,ಸಿಬಿಐ ನಡೆಸುತ್ತಿರುವ ವಿಚಾರಣೆ ರಾಜಕೀಯ ಪ್ರೇರಿತವಾದದ್ದೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ವಿನಯ್ ಜತೆ ನಾನೂ ಮಾತನಾಡಿದ್ದೇನೆ. ನಾನೇನೂ ತಪ್ಪು ಮಾಡಿಲ್ಲವೆಂದು ನನ್ನ ಬಳಿ ಹೇಳಿದ್ದಾನೆ. ಮುಕ್ತಾಯವಾಗಿದ್ದ ಪ್ರಕರಣವನ್ನು ಸಿಬಿಐ ಮತ್ತೆ ಆರಂಭಿಸಿ ವಿಚಾರಣೆ ನಡೆಸುತ್ತಿದೆ. ಈ ಹಂತದಲ್ಲಿ ನಾನು ಹೆಚ್ಚಿಗೆ ಏನೂ ಹೇಳು ವುದಿಲ್ಲ.

    ಸಿಬಿಐನ ಎಲ್ಲ ವಿಚಾರಣೆಗಳು ರಾಜಕೀಯ ಪ್ರೇರಿತವೆಂದು ನಾನೆಲ್ಲಿ ಹೇಳಿದ್ದೇನೆ? ಅನೇಕ ಸಾರಿ ಸಿಬಿಐಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ರಾಜ್ಯಬಿಜೆಪಿ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್‌ಗೆ ಮೆಚ್ಯುರಿಟಿ ಇಲ್ಲವೆಂದು, ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

    ಹೊಸದಿಲ್ಲಿಯ ಮಾಹಿತಿ ಆಧರಿಸಿ ಸಿಎಂ ಬದಲಾಗುತ್ತಾರೆ ಎಂದು ಹೇಳಿದ್ದೇನೆ,ಯಾವುದು ಸತ್ಯವೆಂಬುದನ್ನು ಕಾದು ನೋಡೋಣ. ರಾಜ್ಯವಿಧಾನಸಭಾ ಚುನಾವಣೆ ಇನ್ನು ಎರಡೂವರೆ ವರ್ಷ ಬಾಕಿ ಇದೆ. ಈಗಲೇ ಸಿಎಂ ಯಾರೆಂಬ ಚರ್ಚೆ ಅನಗತ್ಯ. ನನ್ನ ಅಭಿಮಾನಿ ಗಳು ಸಿದ್ದರಾಮಯ್ಯ ಮುಂದಿನ ಸಿಎಂ ಎಂದಿದ್ದಾರೆ.

    ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತೇವೆ. ಉಪ ಚುನಾವಣೆಯಲ್ಲಿ ಹಣ ಖರ್ಚು ಮಾಡದೆ ಗೆಲುವಿನ ಸಮೀಪ ಬಂದಿದ್ದೇವೆ ಎಂದು ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸತ್ಯಹರಿಶ್ಚಂದ್ರರೆಂದು ಗೇಲಿ ಮಾಡಿದರು.

    ಕರೊನಾ ವಿರುದ್ಧ ಲಸಿಕೆ ಬರುವವರೆಗೆ ಗ್ರಾಪಂ ಚುನಾವಣೆಗಳ ಅಗತ್ಯವಿಲ್ಲವೆಂದು ಪ್ರತಿಪಾದಿಸಿದರು. ಈ ಸಂದರ್ಭದಲ್ಲಿ ಶಾಲಾ ಕಾಲೇಜುಗಳ ಆರಂಭವೂ ಸೂಕ್ತವಲ್ಲ,ಇದೊಂದು ವರ್ಷ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಿ. ಕರೊನಾ ಸಂದರ್ಭ ವಿದ್ಯುತ್ ದರ ಏರಿಕೆ ಸರಿಯಲ್ಲವೆಂದು ಸಿದ್ದರಾಮಯ್ಯ,ರಾಜ್ಯದ ಹಣಕಾಸು ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಸಂಬಳಕ್ಕೂ ಹಣವಿಲ್ಲದಂತಾಗಿದೆ,ತೆರಿಗೆ ವಸೂಲಾಗುತ್ತಿಲ್ಲ ಎಂದರು.

    ಡಿಫ್ಯಾಕ್ಟೋ ಸಿಎಂ: ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಹುಟ್ಟು ಹಬ್ಬ ದಿನದಂದು ಮಾಜಿ ಸಿಎಂ ಸಿದ್ದರಾಮಯ್ಯ,ಡಿಫ್ಯಾಕ್ಟೋ ಸಿಎಂ ಎಂಬ ಬಿರುದಿನ ಉಡುಗೊರೆಯನ್ನು ಅವರಿಗೆ ನೀಡಿದರು. ರಾಜ್ಯದಲ್ಲಿ ಇಬ್ಬರು ಸಿಎಂಗಳಿದ್ದಾರೆ. ಯಡಿಯೂರಪ್ಪ ಸಿಎಂ,ಇವರು ಡಿ ಫ್ಯಾಕ್ಟೋ ಸಿಎಂ ಎನ್ನುವ ಮೂಲಕ ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪ ನಡೆದಿದೆ ಎಂದು ಪರೋಕ್ಷವಾಗಿ ಹೇಳಿದರು. ವಿಜಯೇಂದ್ರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಅವರು ಇನ್ನು ರಾಜಕೀಯವಾಗಿ ಕಣ್ಣು ಬಿಡುತ್ತಿದ್ದಾರೆ ಎಂದರು.

    ಕೇಂದ್ರದಿಂದ ರಾಜಕೀಯ ಒತ್ತಡ: ಕೇಂದ್ರ ಸರ್ಕಾರ ರಾಜ್ಯದ ಕಾಂಗ್ರೆಸ್ ಮುಖಂಡರ ಮೇಲೆ ಪದೆ,ಪದೇ ರಾಜಕೀಯ ಒತ್ತಡವನ್ನು ಹೇರುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ದೂರಿದರು. ಸುದ್ದಿಗಾರರ ಜತೆ ಮಾತನಾಡಿ,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮತ್ತಿತರ ಪಕ್ಷದ ನಾಯಕರ ಮೇಲೆ,ಸಿಬಿಐ, ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯ ಮೂಲಕ ಒತ್ತಡ ಹೇರುತ್ತಿದೆ. ಉಪ ಚುನಾವಣೆಗಳ ಮೊದಲು ಡಿ.ಕೆ.ಶಿವಕುಮಾರ್ ಮನೆ ದಾಳಿ ನಡೆಸಿದ್ದ ಸಿಬಿಐ ಬರಿಗೈಲಿ ವಾಪಸಾಗಿದೆ. ಬಿಜೆಪಿ ಸಿಬಿಐ ಮುಂದಿಟ್ಟುಕೊಂಡು ನಮ್ಮ ನಾಯ ಕರನ್ನು ಬೆದರಿಸುವ ತಂತ್ರ ಮಾಡುರ‌್ತಿದೆ. ಕೇಂದ್ರದಲ್ಲಿ ದುರಾಡಳಿತ ನಡೆದಿದ್ದು,ಬಿಪಿ ಪಿಕ್ ಆ್ಯಂಡ್ ಚ್ಯೂಸ್ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts