More

    ಪರಿಸರ ರಕ್ಷಣೆ, ಸ್ವಚ್ಛತೆ ಪ್ರತಿಯೊಬ್ಬರ ಹೊಣೆ: ಕಾರಟಗಿ ತಾಪಂ ಇಒ ಡಿ.ಮೋಹನ್ ಅಭಿಮತ

    ಸಿದ್ದಾಪುರ: ಸಮೀಪದ ಉಳೇನೂರು ಗ್ರಾಪಂಗೆ ತಾಪಂ ಇಒ ಡಿ.ಮೋಹನ್ ಶುಕ್ರವಾರ ಭೇಟಿ ನೀಡಿ ಚಿಲುಮೆ-2 ಅಭಿಯಾನ ಅಂಗವಾಗಿ ಕೈಯಲ್ಲಿ ಸಲಿಕೆ, ಪೊರಕೆ ಹಿಡಿದು ಸುತ್ತಲೂ ಸ್ವಚ್ಛತಾ ಕಾರ್ಯಕೈಗೊಂಡು ಬಳಿಕ ತ್ಯಾಜ್ಯ ವಿಲೇವಾರಿ ಟ್ರಾೃಕ್ಟರ್ ಚಲಾಯಿಸಿದರು.

    ಸಾರ್ವಜನಿಕರಿಗೆ ಸ್ವಚ್ಛತಾ ಜಾಗೃತಿ ಮೂಡಿಸಲು ಪ್ರತಿ ಶುಕ್ರವಾರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾನು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಸುತ್ತ್ತಲಿನ ವಾತಾವರಣ ಸ್ವಚ್ಛತೆ ಹಾಗೂ ಪರಿಸರ ರಕ್ಷಣೆ ಎಲ್ಲರ ಹೊಣೆಯಾಗಿದೆ. ಅಂಗನವಾಡಿ, ಬಸ್ ನಿಲ್ದಾಣ, ದೇವಸ್ಥಾನಗಳು, ಸರ್ಕಾರಿ ಕಚೇರಿ ಆವರಣ, ಶಾಲೆ, ಕಲ್ಯಾಣಿಗಳು, ಸಾರ್ವಜನಿಕ ಸ್ಥಳಗಳು, ಸಂಘ-ಸಂಸ್ಥೆಗಳ ಜಾಗಗಳಲ್ಲಿ ಗ್ರಾಮಸ್ಥರ ಒಗ್ಗೂಡಿಸುವಿಕೆಯೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು. ಸರ್ವರೂ ಸಹಕಾರ ನೀಡಿ ಚಿಲುಮೆ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಇಒ ಮೋಹನ್ ಕೋರಿದರು.

    ಗ್ರಾಪಂ ಪಿಡಿಒ ನಾಗರಾಜ್, ತಾಂತ್ರಿಕ ಸಂಯೋಜಕ ಅಕ್ಷಯ ಅರ್ಲೂರು, ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ತಾಂತ್ರಿಕ ಸಹಾಯಕ ರಾಜ ಹೂಲಿ, ಸದಸ್ಯರಾದ ಕನಕರಾಯ ಪಾಟೀಲ್, ವೆಂಕಟೇಶ್, ಹನುಮಂತಪ್ಪ, ಸಣ್ಣ ದೇವಣ್ಣ, ಮಾರೆಪ್ಪ, ಗ್ರಾಪಂ ಕಾರ್ಯದರ್ಶಿ ವೆಂಕೋಬ, ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts