More

    ವಧು-ವರನ ಕಡೆಯವರು ಲಾಕ್‌ಡೌನ್ ನಿಯಮ ಪಾಲಿಸದಿರುವುದರಿಂದ ನವದಂಪತಿಗೆ ಕ್ವಾರಂಟೈನ್

    ಶ್ರೀನಿವಾಸಪುರ: ಮದುವೆಗೆ ರೆಡ್‌ಝೋನ್ ವ್ಯಾಪ್ತಿಯ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಿಂದ ನೆಂಟರು ಬಂದಿದ್ದಕ್ಕೆ ಹಾಗೂ ವಧು-ವರನ ಕಡೆಯವರು ಲಾಕ್‌ಡೌನ್ ನಿಯಮ ಪಾಲಿಸದಿರುವುದರಿಂದ ಹಸೆಮಣೆ ಏರಿದ್ದ ದಂಪತಿ ಕ್ವಾರಂಟೈನ್‌ಗೆ ಒಳಗಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಕೋಲಾರದ ವರ ಹಾಗೂ ಶ್ರೀನಿವಾಸಪುರ ತಾಲೂಕಿನ ಆರಿಕರೆ ಗ್ರಾಮದ ವಧುವಿನ ಮದುವೆ ಏ.30ಕ್ಕೆ ಆರಿಕರೆ ಯಾತ್ರಿ ನಿವಾಸದಲ್ಲಿ ನಿಗದಿಯಾಗಿತ್ತು. ಗೌರಿಬಿದನೂರು ತಹಸೀಲ್ದಾರ್ ಗಮನಕ್ಕೆ ತರದೆ 6 ಮಂದಿ ಸಂಬಂಧಿಕರು ಚೆಕ್‌ಪೋಸ್ಟ್ ದಾಟಿ ಬಂದಿದ್ದರು.

    ವಿಷಯ ತಿಳಿದ ಡಿಸಿ ಸಿ.ಸತ್ಯಭಾಮ ಡಿಎಚ್‌ಒ ಡಾ.ವಿಜಯಕುಮಾರ್ ಹಾಗೂ ಶ್ರೀನಿವಾಸಪುರ ತಾಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರಿ ಅವರಿಗೆ ವಿಷಯ ಮುಟ್ಟಿಸಿ ಕ್ರಮಕ್ಕೆ ಸೂಚಿಸಿದ್ದರು. ಯಾತ್ರಿ ನಿವಾಸಕ್ಕೆ ತೆರಳಿ ಪರಿಶೀಲಿಸಿ ಗೌರಿಬಿದನೂರು ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿ ಅಲ್ಲಿಂದ ಬಂದಿದ್ದವರನ್ನು ವಾಪಸ್ ಕಳುಹಿಸಿದ್ದಾರೆ.

    ಗುರುವಾರ ನಿಗದಿಯಾಗಿದ್ದ ಮದುವೆಗೆ 14 ಜನರಿಗೆ ಅವಕಾಶ ನೀಡಲಾಗಿತ್ತು. ಆದರೆ ವರ ಮತ್ತು ವಧುವಿನ ಕಡೆಯಿಂದ 60 ಮಂದಿ ಪಾಲ್ಗೊಂಡಿದ್ದರು. ಕಲ್ಯಾಣ ಮಂಟಪಕ್ಕೆ ಅಧಿಕಾರಿಗಳು ಭೇಟಿ ನೀಡುತ್ತಿದ್ದಂತೆಯೇ ಅಡುಗೆಯವರೂ ಸೇರಿ ಹಲವರು ಕಾಲ್ಕಿತ್ತಿದ್ದಾರೆ. ಮದುವೆ ಮುಗಿದ ನಂತರ ಶ್ರೀನಿವಾಸಪುರದಲ್ಲೇ ವಧು-ವರರು ಸೇರಿ ಉಳಿದ 14 ಮಂದಿಯ ರಕ್ತದ ಮಾದರಿ ಮತ್ತು ಗಂಟಲು ದ್ರವ ಪಡೆಯಲಾಗಿದೆ. ವಧು-ವರರನ್ನು ಕೋಲಾರದ ಕುವೆಂಪು ನಗರ, 9 ಜನರನ್ನು ಕೋಲಾರದಲ್ಲಿ ಹಾಗೂ ವಧುನಿನ ಕಡೆಯ 5 ಜನರನ್ನು ಶ್ರೀನಿವಾಸಪುರದಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿದೆ.

    ಹೊಸಬಾಲಿನ ಕನಸಿನೊಂದಿಗೆ ಹಸೆಮಣೆ ಏರಿದ್ದ ದಂಪತಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದರಿಂದ ಹೋಂ ಕ್ವಾರಂಟೈನ್‌ನಲ್ಲಿ ಉಳಿಯುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts