More

    ಪದಾರ್ಪಣೆ ಪಂದ್ಯದಲ್ಲೇ ಶ್ರೇಯಸ್ ಸೆಂಚುರಿ; ಬಾಲ್ಯದ ಕೋಚ್ ಹಾದಿಯಲ್ಲೇ ಸಾಗಿದ ಮುಂಬೈ ಆಟಗಾರ

    ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಶ್ರೇಯಸ್ ಅಯ್ಯರ್ ಕೇಂದ್ರ ಬಿಂದುವಾದರು. ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಗ್ರೀನ್ ಪಾರ್ಕ್ ಅಂಗಳದಲ್ಲಿ ಎಲ್ಲರ ಗಮನಸೆಳೆದರು. ಮುಂಬೈ ಆಟಗಾರ ಶ್ರೇಯಸ್ ಅಯ್ಯರ್ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ 16ನೇ ಬ್ಯಾಟರ್ ಎನಿಸಿಕೊಂಡರು. ಅಲ್ಲದೆ, ಶ್ರೇಯಸ್ ಅಯ್ಯರ್, ತವರಿನಲ್ಲಿ ಪದಾರ್ಪಣೆ ಟೆಸ್ಟ್‌ನಲ್ಲೇ ಶತಕ ಸಿಡಿಸಿದ 10ನೇ ಬ್ಯಾಟರ್ ಎನಿಸಿಕೊಂಡರು. ವಿಶೇಷ ಎಂದರೆ ಮುಂಬೈ ಮೂಲದ ಶ್ರೇಯಸ್ ಅಯ್ಯರ್, ಅವರ ಬಾಲ್ಯದ ಕೋಚ್ ಪ್ರವೀಣ್ ಆಮ್ರೆ ಕೂಡ 1992ರಲ್ಲಿ ದಕ್ಷಿಣ ಆಫ್ರಿಕಾ ಎದುರು ಈ ಸಾಧನೆ ಮಾಡಿದ್ದರು. ಇದೀಗ ತಮ್ಮ ಕೋಚ್ ಹಾದಿಯಲ್ಲೇ ಶ್ರೇಯಸ್ ಸಾಗಿದ್ದಾರೆ.

    ಶ್ರೇಯಸ್ ಅಯ್ಯರ್ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಹಲವು ದಾಖಲೆಗಳ ಒಡೆಯನಾದರು. ಇದಕ್ಕೂ ಮೊದಲು ಲಾಲಾ ಅಮರ್‌ನಾಥ್ (118, ಇಂಗ್ಲೆಂಡ್ ಎದುರು, 1933), ದೀಪಕ್ ಶೋಧನ್ (110, ಪಾಕ್ ಎದುರು, 1952), ಎಜಿ ಕ್ರಿಪಾಲ್ ಸಿಂಗ್ (100*, ನ್ಯೂಜಿಲೆಂಡ್ ಎದುರು, 1955), ಅಬ್ಬಾಸ್ ಅಲಿ ಬೇಗ್ (112, ಇಂಗ್ಲೆಂಡ್ ಎದುರು, 1959), ಹನುಮಂತ್ ಸಿಂಗ್ (105, ಇಂಗ್ಲೆಂಡ್ ಎದುರು, 1964), ಜಿ.ಆರ್.ವಿಶ್ವನಾಥ್ (137, ಆಸ್ಟ್ರೇಲಿಯಾ ಎದುರು, 1969), ಸುರೀಂದರ್ ಅಮರ್‌ನಾಥ್ (124, ನ್ಯೂಜಿಲೆಂಡ್ ಎದುರು, 1976), ಮೊಹಮದ್ ಅಜರುದ್ದೀನ್ (110, ಇಂಗ್ಲೆಂಡ್ ಎದುರು, 1984), ಪ್ರವೀಣ್ ಆಮ್ರೆ (103, ದ.ಆಫ್ರಿಕಾ ಎದುರು 1992), ಸೌರವ್ ಗಂಗೂಲಿ (131, ಇಂಗ್ಲೆಂಡ್ ಎದುರು, 1996), ವೀರೇಂದ್ರ ಸೆಹ್ವಾಗ್ (105, ದ.ಆಫ್ರಿಕಾ ಎದುರು, 2001), ಸುರೇಶ್ ರೈನಾ (120, ಶ್ರೀಲಂಕಾ ಎದುರು, 2010), ಶಿಖರ್ ಧವನ್ (187, ಆಸ್ಟ್ರೇಲಿಯಾ ಎದುರು, 2013), ರೋಹಿತ್ ಶರ್ಮ (177, ವೆಸ್ಟ್ ಇಂಡೀಸ್ ಎದುರು, 2013), ಪೃಥ್ವಿ ಷಾ (134, ವೆಸ್ಟ್ ಇಂಡೀಸ್ ಎದುರು, 2018) ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಸಾಧಕರು.

    * 6: ಶ್ರೇಯಸ್ ಅಯ್ಯರ್, ಈ ಶತಮಾನದಲ್ಲಿ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ 6ನೇ ಬ್ಯಾಟರ್ ಎನಿಸಿಕೊಂಡರು. ವೀರೇಂದ್ರ ಸೆಹ್ವಾಗ್ (2001), ಸುರೇಶ್ ರೈನಾ (2010), ಶಿಖರ್ ಧವನ್ (2013), ರೋಹಿತ್ ಶರ್ಮ (2013), ಪೃಥ್ವಿ ಷಾ (2018) ಮೊದಲ ಐವರು. ಶ್ರೇಯಸ್ ಅಯ್ಯರ್, ದಿಗ್ಗಜ ಜಿಆರ್ ವಿಶ್ವನಾಥ್ ಬಳಿಕ ಕಾನ್ಪುರದಲ್ಲಿ ಪರ್ದಾಪಣೆ ಟೆಸ್ಟ್‌ನಲ್ಲೇ ಶತಕ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

    ಪದಾರ್ಪಣೆ ಪಂದ್ಯದಲ್ಲೇ ಶ್ರೇಯಸ್ ಶತಕದ ಸಂಭ್ರಮ; ಭಾರತಕ್ಕೆ ಕಿವೀಸ್ ದಿಟ್ಟ ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts