More

    ಕೃಷ್ಣ ಮಠದಲ್ಲಿ ರಥೋತ್ಸವ ಸಿದ್ಧತೆ

    ಉಡುಪಿ: ಶ್ರೀಕೃಷ್ಣ ಮಠದಲ್ಲಿ ಉತ್ಥಾನ ದ್ವಾದಶಿಯಂದು (ನ.27) ಆರಂಭಗೊಳ್ಳುವ ಉತ್ಸವ ಪೂರ್ವಭಾವಿಯಾಗಿ ರಥಗಳ ಜೋಡಣೆ ಕೆಲಸ ಭರದಿಂದ ನಡೆಯುತ್ತಿದೆ. ಮರದ ಶಿಲ್ಪಗಳ (ಜಿಡ್ಡೆ) ಮೇಲ್ಭಾಗದಲ್ಲಿ ಬರುವ ವರ್ಣ ಚಿತ್ರಗಳು ಹಿರಿಯ ಕಲಾವಿದ ಪುರುಷೋತ್ತಮ ಅಡ್ವೆ ನೇತೃತ್ವದಲ್ಲಿ ರಚನೆಯಾಗುತ್ತಿವೆ.

    ಕೃಷ್ಣ ಮಠದಲ್ಲಿ ಸಂಪ್ರದಾಯದಂತೆ ಭಾಗೀರತಿ ಜಯಂತಿಯಂದು ಉತ್ಸವ ಮೂರ್ತಿಯನ್ನು ಗರ್ಭಗುಡಿಯಲ್ಲಿರಿಸಿ ರಥೋತ್ಸವಗಳು ಕೊನೆಗೊಳ್ಳುತ್ತವೆ. ನಂತರ ಉತ್ಥಾನ ದ್ವಾದಶಿ ದಿನದಂದು ಉತ್ಸವ ಮೂರ್ತಿ ಗರ್ಭಗುಡಿಯಿಂದ ಹೊರತಂದು ಮಹಾಪೂಜೆ ರಥ ಹಾಗೂ ಗರುಡ ರಥದಲ್ಲಿ ಉತ್ಸವ ಆರಂಭವಾಗಿ ನಿತ್ಯೋತ್ಸವ ನಡೆಯುತ್ತದೆ.
    ಜ.14ರಂದು ಮಕರ ಸಂಕ್ರಮಣ ದಿನ ಬ್ರಹ್ಮರಥ ಸೇರಿ ಮೂರು ರಥಗಳ ಉತ್ಸವ ನಡೆಯಲಿದೆ. ಶುಕ್ರವಾರ ತೈಲ ಕಲಾಚಿತ್ರಗಳನ್ನು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಅವಲೋಕಿಸಿದರು. ಈ ಸಂದರ್ಭ ಪರ್ಯಾಯ ಮಠದ ವ್ಯವಸ್ಥಾಪಕ ಗೋವಿಂದರಾಜ್, ಕಲಾವಿದ ಪುರುಷೋತ್ತಮ ಆಡ್ವೆ, ರೋಹಿತ್ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts