More

    ಜ್ಞಾನದೊಂದಿಗೆ ಕೌಶಲ ವೃದ್ಧಿಸುವುದೇ ನೈಜ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಸಮಾರೋಪದಲ್ಲಿ ನಾಗರಾಜ್ ಕೆ.ಪಿ. ಅಭಿಪ್ರಾಯ

    ಮಂಗಳೂರು: ಜ್ಞಾನದ ಜತೆಗೆ ಕೌಶಲ ವೃದ್ಧಿಸಿಕೊಂಡಾಗ ಶಿಕ್ಷಣಕ್ಕೆ ನಿಜವಾದ ಅರ್ಥ ಬರುವುದು. ಆದ್ದರಿಂದ ಇವುಗಳು ನಾಣ್ಯದ ಎರಡು ಮುಖಗಳು ಎಂದು ಮಹೇಂದ್ರ ಫೈನಾನ್ಸ್‌ನ ಪ್ರಾದೇಶಿಕ ಮ್ಯಾನೆಜರ್ ಬೋಳೂರು ನಾಗರಾಜ್ ಕೆ.ಪಿ. ಹೇಳಿದರು.

    ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕುರಿತು ಜರುಗಿದ ತರಬೇತಿ ಕಾರ್ಯಕ್ರಮದ ಸಮಾರೋಪ ಸಭೆ ಉದ್ಧೇಶಿಸಿ ಅವರು ಮಾತನಾಡುತ್ತಿದ್ದರು.

    ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಪ್ರತಿಯೊಂದು ಕ್ಷೇತ್ರದಲ್ಲೂ ನಿಪುಣತೆ ಗಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

    ಶ್ಲಾಘ್ಯ ಇನ್ಸಿಟಿಟ್ಯೂಟ್ ನಿರ್ದೇಶಕಿ ರಕ್ಷಾ ಶೆಟ್ಟಿ ಮಾರ್ಗದರ್ಶನ ನೀಡಿದರು. ಕಾಲೇಜಿನ ಸಂಚಾಲಕ ವಸಂತ ಕಾರಂದೂರು ವಿದ್ಯಾರ್ಥಿಗಳಿಗೆ ಮತ್ತು ತರಬೇತುದಾರರಾದ ಆಯೆಶಾ ರೂಸ್ನ, ಶ್ವೇತಾ ಕೆ ಮತ್ತು ನೀಮಾ ಶೆಟ್ಟಿ ಅವರನ್ನು ಅಭಿನಂದಿಸಿದರು. ಪ್ರಾಂಶುಪಾಲೆ ಡಾ.ಆಶಾಲತಾ ಎಸ್. ಸುವರ್ಣ ಸ್ವಾಗತಿಸಿದರು. ಡೀನ್ ಅಕಾಡೆಮಿಕ್ ಡಾ.ಉಮ್ಮಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಯರಾಮ್ ಕಾರಂದೂರು ಉಪಸ್ಥಿತರಿದ್ದರು.

    ಕಾಲೇಜಿನ ವಿದ್ಯಾರ್ಥಿ ಸಂಘ ಮತ್ತು ಪ್ಲೇಸ್‌ಮೆಂಟ್ ಕೋಶ ಕಾರ್ಯಕ್ರಮವನ್ನು ಆಯೋಜಿಸಿತ್ತು. ದೀಪ್ತಿ ಕಾರ್ಯಕ್ರಮ ನಿರ್ವಹಿಸಿದರು. ರಕ್ಷಿತಾ ನಾಯಕ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts