More

    ‘ಕೃಷಿ ಕಾನೂನುಗಳಲ್ಲಿ ಲೋಪವೇನು ತೋರಿಸಿ’ ಎಂದು ಸವಾಲು ಹಾಕಿದ ತೋಮರ್

    ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ರೈತ ಒಕ್ಕೂಟಗಳು, ವಿರೋಧ ಪಕ್ಷಗಳು ಅವುಗಳಲ್ಲಿ ಒಂದೇ ಒಂದು ತಪ್ಪನ್ನು ತೋರಿಸುವಲ್ಲಿಯೂ ವಿಫಲರಾಗಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ರಾಜ್ಯಸಭೆಯ ಸದನದಲ್ಲಿ ಶುಕ್ರವಾರ ಮಾತನಾಡಿದ ತೋಮರ್, ಕೃಷಿ ಕಾನೂನುಗಳು ಜನಹಿತಕಾರಿಯಾಗಿದ್ದರೂ ತಪ್ಪು ಮಾಹಿತಿ ಹರಡಿ ರೈತರನ್ನು ಪ್ರತಿಭಟನೆ ಮಾಡಲು ಪ್ರಚೋದಿಸಲಾಗುತ್ತಿದೆ ಎಂದಿದ್ದಾರೆ.

    ಬಜೆಟ್ ಅಧಿವೇಶನದ ಆರಂಭದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನದಲ್ಲಿ ರಾಷ್ಟ್ಟಪತಿಗಳ ಭಾಷಣಕ್ಕೆ ವಂದನೆ ಅರ್ಪಿಸುವ ಸಮಯದಲ್ಲಿ ತೋಮರ್ ಈ ಮಾತುಗಳನ್ನಾಡಿದ್ದಾರೆ. ವಿವಾದಕ್ಕೆ ಗುರಿಯಾಗಿರುವ ಮೂರು ಕೃಷಿ ಕಾಯ್ದೆಗಳ ಬಗ್ಗೆ ದೇಶಾದ್ಯಂತ ರೈತರ ವಿರೋಧ ವ್ಯಕ್ತವಾಗಿದೆ ಎಂಬ ವಿರೋಧ ಪಕ್ಷಗಳ ಮಾತಿಗೆ ಉತ್ತರಿಸುತ್ತಾ, “ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆಯು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿದೆ” ಎಂದಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ಪಂಜಾಬಿನ ರೈತ ನಾಯಕರೇ ರೈತ ಪ್ರತಿಭಟನೆಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರುವುದನ್ನು ಸೂಚ್ಯವಾಗಿ ತಿಳಿಸಿ ಈ ರೀತಿಯಾಗಿ ವಿರೋಧ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.

    ಇದನ್ನೂ ಓದಿ: ಕೆಂಪುಕೋಟೆ ಗಲಭೆ ಆರೋಪಿಗಳ ಸುಳಿವು ನೀಡಿದರೆ 1 ಲಕ್ಷ ರೂಪಾಯಿ ಬಹುಮಾನ

    “ಕೃಷಿ ಕಾನೂನಿನಲ್ಲಿ ಮಾರ್ಪಾಡು ಮಾಡಲು ನಾವು ಸಿದ್ಧರಿದ್ದೇವೆ. ಆದರೆ ಅದರರ್ಥ ಅದರಲ್ಲಿ ಲೋಪವಿದೆ ಎಂದಲ್ಲ. ನಾವು ಪ್ರತಿಷ್ಠೆಗಾಗಿ ನಿಂತಿಲ್ಲ. ಈ ಕಾನೂನಿನಲ್ಲಿ ಏನು ಲೋಪವಿದೆ ಎಂದು ತೋರಿಸಿ ಎಂದು ನಾವು ಕೇಳುತ್ತಲೇ ಇದ್ದೇವೆ. ಆದರೆ ಯಾರೂ ಮುಂದೆ ಬರುತ್ತಿಲ್ಲ” ಎಂದಿದ್ದಾರೆ, ತೋಮರ್. “ನೀರಿನಿಂದ ಕೃಷಿ ಮಾಡಲಾಗುತ್ತದೆ ಎಂಬುದು ಜಗತ್ತಿಗೇ ಗೊತ್ತು; ಆದರೆ ಕಾಂಗ್ರೆಸ್ ಮಾತ್ರ ರಕ್ತ ಬಳಸಿ ಕೃಷಿ ಮಾಡುತ್ತಿದೆ” ಎಂದು ಟೀಕಿಸಿದ ಅವರು, ಮೋದಿ ಸರ್ಕಾರವು ರೈತರ ಒಳಿತಿಗೆ ಕಂಕಣಬದ್ಧವಾಗಿದೆ. ಕೃಷಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ 1 ಲಕ್ಷ ಕೋಟಿ ರೂಪಾಯಿಗಳನ್ನು ಆತ್ಮನಿರ್ಭರ್ ಪ್ಯಾಕೇಜ್​ನಡಿ ನೀಡಲಾಗಿದೆ. ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಹೂಡಿಕೆ ತಲುಪುವಂತೆ ಕೂಡ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ.

    ರೈತರ ಜೀವನವನ್ನು ಉತ್ತಮಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಈಗ 100 ಕಿಸಾನ್ ರೈಲುಗಳನ್ನು ಪ್ರಾರಂಭಿಸಲಾಗಿದ್ದು, ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಲು ಸಹಾಯ ಮಾಡುತ್ತದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯನ್ನು ಕೂಡ ಉತ್ಪಾದನಾ ವೆಚ್ಚಕ್ಕಿಂತ ಶೇ. 50ಕ್ಕಿಂತ ಹೆಚ್ಚು ನೀಡುತ್ತಿದ್ದೇವೆ ಎಂದು ತೋಮರ್ ಹೇಳಿದ್ದಾರೆ.

    ಇದನ್ನೂ ಓದಿ: ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸ ಮಾಡಲು ಇಲ್ಲಿದೆ ಸುವರ್ಣಾವಕಾಶ

    ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿರುವ ರೈತರನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಬಿಜೆಪಿ ಸರ್ಕಾರದ ಮೇಲೆ ವಾಕ್​ಪ್ರಹಾರ ನಡೆಸುತ್ತಿವೆ. ಆದರೆ ಸರ್ಕಾರವು ತನ್ನ ಹೊಸ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುತ್ತಾ ಬಂದಿದೆ. ಅತ್ತ ದೆಹಲಿ ಗಡಿಯಲ್ಲಿ ರೈತರ ಹೋರಾಟ ಆರಂಭವಾಗಿ ಇಂದಿಗೆ 72 ದಿನಗಳು ಪೂರೈಸಿವೆ.(ಏಜೆನ್ಸೀಸ್)

    ರೈತರ ಪ್ರತಿಭಟನೆಗೆ ಹಿಂಸಾಚಾರದ ರೂಪ ಕೊಟ್ಟವರು ಇವರೇ ನೋಡಿ… ಬಿಡುಗಡೆಯಾಯ್ತು ಚಿತ್ರ

    5 ರೂಪಾಯಿ ತಿಂಡಿ ಕೇಳಿದ ಮಗುವನ್ನು ಕೊಂದೇ ಬಿಟ್ಟ ಈ ಕ್ರೂರಿ ತಂದೆ !

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts