More

    ಪೌರಕಾರ್ಮಿಕರ ಕೊರತೆ, ಬಾಡಿಗೆ ವಸೂಲಿಗೆ ಕ್ರಮ

    ಶನಿವಾರಸಂತೆ: ಪೌರಕಾರ್ಮಿಕರ ಕೊರತೆ ನೀಗಿಸುವುದು ಹಾಗೂ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿ ಮಾಡುವ ಬಗ್ಗೆ ಮಂಗಳವಾರ ಆಯೋಜಿಸಿದ್ದ ಶನಿವಾರಸಂತೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

    ನೂತನ ಅಧ್ಯಕ್ಷರಾದ ಫರ್ಜಾನ್ ಶಾಹಿದ್ ಖಾನ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸದಸ್ಯರು ಗ್ರಾ.ಪಂ. ಅಭಿವೃದ್ಧಿ ಕುರಿತು ಚರ್ಚಿಸಿದರು.
    ಪಟ್ಟಣದ ಕೆಆರ್‌ಸಿ ವೃತ್ತದಲ್ಲಿರುವ ಗ್ರಾ.ಪಂ. ವಾಣಿಜ್ಯ ಸಂಕೀರ್ಣದ 3 ಮಳಿಗೆಗಳ ಬಾಡಿಗೆ ಅವಧಿ ಮೀರಿದ್ದರೂ ಬಾಡಿಗೆದಾರರು ಹಣವನ್ನು ಪಾವತಿಸಿರುವುದಿಲ್ಲ. ಈ ಕೂಡಲೇ ಹಣ ಪಾವತಿಗೆ ಸೂಚಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.

    ಪಟ್ಟಣದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗದಿರುವ ಕುರಿತು ನಡೆದ ಚರ್ಚೆಯಲ್ಲಿ, ಕಾರ್ಮಿಕರ ಕೊರತೆಯಿದೆ. ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವಂತೆ ಕೆಲವು ಸದಸ್ಯರು ಸಲಹೆ ನೀಡಿದರು. ಜತೆಗೆ ಗ್ರಾ.ಪಂ. ಸ್ವಚ್ಛತಾ ಸಮಿತಿ ರಚಿಸುವಂತೆ ತೀರ್ಮಾನಿಸಲಾಯಿತು.

    ಉದ್ಯೋಗ ಖಾತ್ರಿ ಯೋಜನೆಯಿಂದ ಬಾಕಿ ಉಳಿದಿರುವ ಕಾಮಗಾರಿ ಮುಂದುವರಿಸುವುದು, ನನೆಗುದಿಗೆ ಬಿದ್ದಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಚುರುಕುಗೊಳಿಸುವಂತೆ ಸೂಚಿಸಲಾಯಿತು.


    ಆಡಳಿತ ಮಂಡಳಿಯ ಸಭೆಗಳಲ್ಲಿ ತೀರ್ಮಾನಿಸುವ ಹಲವಾರು ಅಭಿವೃದ್ಧಿ ಕಾಮಗಾರಿಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಕೇವಲ ಸಭೆಯಲ್ಲಿ ಚರ್ಚೆ ಮಾಡಿದರೆ ಸಾಲಲ್ಲ. ಚರ್ಚೆಯಾಗಿ ತೀರ್ಮಾನಿಸಲಾದ ಕಾಮಗಾರಿಗಳು ಅನುಷ್ಠಾನವಾಗಬೇಕಿದೆ ಎಂದು ಸದಸ್ಯ ಸರ್ದಾರ್ ಅಹಮ್ಮದ್, ಎಸ್.ಎನ್.ರಘು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts