More

    ಪತ್ರಿಕಾ ವಿತರಕರಿಗೂ ಕಿರು ಸಾಲ ಸೌಲಭ್ಯ

    ಸವಣೂರ: ಕೇಂದ್ರ ಸರ್ಕಾರದ ಡೇ ನಲ್ಮ್ ಯೋಜನೆಯ ಕಿರು ಸಾಲ ಸೌಲಭ್ಯ ಯೋಜನೆಗೆ ಪತ್ರಿಕಾ ವಿತರಕರನ್ನು ಸೇರ್ಪಡೆಗೊಳಿಸಿ ಹೊಸ ಆದೇಶ ಹೊರಡಿಸಲಾಗಿದೆ. ಬೀದಿ ಬದಿ ವ್ಯಾಪಾರಸ್ಥರೊಂದಿಗೆ ಪತ್ರಿಕಾ ವಿತರಕರೂ ಯೋಜನೆಯ ಲಾಭ ಪಡೆಯಬೇಕು ಎಂದು ಜಿಲ್ಲಾ ಕೌಶಲ ಅಭಿವೃದ್ಧಿ ಅಭಿಯಾನ ವ್ಯವಸ್ಥಾಪಕ ವಿನಾಯಕ ಬಾಬು ಹೇಳಿದರು.

    ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕೌಶಲ ಅಭಿವೃದ್ಧಿ ಅಭಿಯಾನ (ಡೇ ನಲ್ಮ್ ಯೋಜನೆ)ದಡಿ ಅರ್ಜಿ ಸ್ವೀಕಾರ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ನಗರದಲ್ಲಿ ಈಗಾಗಲೇ ಸುಮಾರು 400ಕ್ಕೂ ಹೆಚ್ಚು ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಯೋಜನೆಯಡಿ ವಿವಿಧ ಇಲಾಖೆ ವತಿಯಿಂದ ಸೌಲಭ್ಯ ನೀಡಲಾಗುತ್ತಿದೆ. ಪ್ರಮುಖವಾಗಿ ಕಾರ್ವಿುಕ ಇಲಾಖೆ ವತಿಯಿಂದ ಯೋಜನೆಗಳನ್ನು ಪಲಾನುಭವಿಗಳು ಪಡೆಯಲು ಪುರಸಭೆ ನೇತೃತ್ವದಲ್ಲಿ ಕಾರ್ಯಾಗಾರ ಏರ್ಪಡಿಸಲು ದಿನಾಂಕ ನಿಗದಿ ಮಾಡಲು ಸೂಚಿಸಲಾಗಿದೆ ಎಂದರು.

    ಜಿಲ್ಲಾ ಕೌಶಲ ಅಭಿವೃದ್ಧಿ ಅಭಿಯಾನ ವ್ಯವಸ್ಥಾಪಕ ಚಂದ್ರಶೇಖರ ಎಂ.ಬಿ., ಯೋಜನೆ ಕುರಿತು ವಿವರಿಸಿದರು.

    ಡೇ ನಲ್ಮ್ ಯೋಜನೆಯ ವಿಷಯ ನಿರ್ವಾಹಕ ಗುರುನಾಥ ಬೋಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವ್ಯವಸ್ಥಾಪಕ ಮಹೇಶ ದೊಡ್ಡಣ್ಣನವರ ಹಾಗೂ ಇತರರು ಪಾಲ್ಗೊಂಡಿದ್ದರು. ಸಿಬ್ಬಂದಿ ಮಂಜುಳಾ ಭೋವಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts