More

    ಲಾಕ್​ಡೌನ್​ನಲ್ಲಿ ಚಿತ್ರೀಕರಣವಾಯ್ತು ಕರೊನೋತ್ತರ ಕಾಲದ ಕಿರುಚಿತ್ರ

    ಕರೊನಾ ಕುರಿತಾಗಿ ಜಾಗೃತಿ ಮೂಡಿಸುವ ಸಲುವಾಗಿ ಲಾಕ್​ಡೌನ್​ ಸಂದರ್ಭದಲ್ಲಿ ಹಲವು ಕಿರುಚಿತ್ರಗಳು ಮತ್ತು ಹಾಡುಗಳು ಬಿಡುಗಡೆಯಾಗಿವೆ. ಈ ಮಧ್ಯೆ ರಮೇಶ್​ ಬೇಗಾರ್​ ಅವರ ನಿರ್ದೇಶನದಲ್ಲಿ ಶೃಂಗೇರಿಯ ರಂಗಭೂಮಿಯ ಗೆಳೆಯರೆಲ್ಲಾ ಸೇರಿ, ‘ಶುದ್ಧ ಸಾವೇರಿ’ ಎಂಬ ಕಿರುಚಿತ್ರವನ್ನು ಮಾಡಿದ್ದಾರೆ. ಈಗಾಗಲೇ ಈ ಕಿರುಚಿತ್ರವು, ಯೂಟ್ಯೂಬ್​ನ ರಮೇಶ್​ ಬೇಗಾರ್​ ಸ್ಕ್ರೀನ್ಸ್​ ಚಾನಲ್​ನಲ್ಲಿ ಲಭ್ಯವಿದೆ.

    ರಮೇಶ್​ ಬೇಗಾರ್​ ಈ ಹಿಂದೆ ಕಿರುತೆರೆ, ರಂಗಭೂಮಿ ಮತ್ತು ಯಕ್ಷಗಾನ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಸುಮಾರು ಹತ್ತು ವರ್ಷಗಳ ಹಿಂದೆ ಜೀ ಕನ್ನಡಕ್ಕಾಗಿ ‘ಏಕೆ ಹೀಗೆ ನಮ್ಮ ನಡುವೆ’ ಎಂಬ ಧಾರಾವಾಹಿಯನ್ನು ನಿರ್ದೇಶಿಸಿದ್ದರು. ಈಗ ಶೃಂಗೇರಿಯ ರಂಗಭೂಮಿ ಪ್ರತಿಭೆಗಳನ್ನು ಸೇರಿಸಿ ಒಂದು ಕಿರುಚಿತ್ರ ಮಾಡಿದ್ದಾರೆ.

    ಇದನ್ನೂ ಓದಿ: ಆಗಸದಲ್ಲಿ ರಾರಾಜಿಸಲಿದ್ದಾರೆ ಸುಶಾಂತ್​ ಸಿಂಗ್​ ರಜಪೂತ್​…!

    ಈ 42 ನಿಮಿಷದ ಕಿರುಚಿತ್ರ ಮಲೆನಾಡಿನ ಒಂದು ಕುಟುಂಬದ ಸುತ್ತ ಸುತ್ತುತ್ತದೆ. ಕೆಲಸ ಅರಸಿ ದೂರದೂರುಗಳಿಗೆ ಹೋಗಿರುವ ಒಬ್ಬ ರೈತನ ಮಕ್ಕಳು, ಕರೊನಾ ಭಯದಿಂದ ಕುಟುಂಬ ಸಮೇತ ವಾಪಸ್ಸು ಬಂದು ಹಳ್ಳಿ ಸೇರಿಕೊಳ್ಳುತ್ತಾರೆ. ಮಕ್ಕಳು-ಮೊಮ್ಮಕಳಿಂದ ದೂರವಿರುವ ಆ ಕೃಷಿಕ, ಅವರೆಲ್ಲಾ ಬಂದಾಗ ಸಾಕಷ್ಟು ಸಂತೋಷಪಡುತ್ತಾನೆ. ಆದರೆ, ಆ ಸಂತೋಷ ಬಹಳ ದಿನ ಇರುವುದಿಲ್ಲ. ಮುಂದೇನಾಗುತ್ತದೆ ಎಂಬ ಕುತೂಹಲಕ್ಕೆ ಕಿರುಚಿತ್ರ ನೋಡಬೇಕು.

    ಲಾಕ್​ಡೌನ್​ ಸಮಯದಲ್ಲಿ ಇಂಥದ್ದೊಂದು ಕಿರುಚಿತ್ರ ನಿರ್ದೇಶಿಸಿದ ಕುರಿತಾಗಿ ಮಾತನಾಡುವ ರಮೇಶ್​ ಬೇಗಾರ್​, ‘ಬೇಸಿಗೆಯ ಮೂರು ತಿಂಗಳ ಕಾಲ ರಂಗಭೂಮಿ ಕಲಾವಿದರು ಬಹಳ ಬ್ಯುಸಿಯಾಗಿರುವ ಸಮಯ. ಆದರೆ, ಈ ಬಾರಿ ಕರೊನಾದಿಂದ ಎಲ್ಲಾ ಚಟುವಟಿಕೆಗಳು ನಿಲ್ಲುವಂತಾಯಿತು. ಇದರಿಂದ ನಮ್ಮಲ್ಲೇ ನಾವು ಕಳೆದು ಹೋಗುತ್ತೀವೇನೋ ಎಂಬ ಭಯದಿಂದ ಸಮಾನಮನಸ್ಕರೆಲ್ಲಾ ಸೇರಿ ಈ ‘ಶುದ್ಧ ಸಾವೇರಿ’ ಎಂಬ ಕಿರುಚಿತ್ರ ಮಾಡಿದ್ದೇವೆ. ಅದನ್ನು ಸೋಷಿಯಲ್​ ಮೀಡಿಯಾ ಮೂಲಕ ಬಿಡುಗಡೆ ಮಾಡಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ’ ಎನ್ನುತ್ತಾರೆ.

    ಇದನ್ನೂ ಓದಿ: ರಣಬೀರ್​ ಕಪೂರ್​ ಜತೆ ಇರುವ ಈ ಹೊಸ ಹುಡುಗಿ ಯಾರು?

    ‘ಈ ಕಿರುಚಿತ್ರದ ಮೂಲಕ ಕರೊನೋತ್ತರ ಕಾಲದ ಒಟ್ಟು ಸಾಮಾಜಿ ಸಂಘರ್ಷವನ್ನು ಇಟ್ಟುಕೊಂಡು ನೈಜತೆ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಶೃಂಗೇರಿ ಸುತ್ತಮುತ್ತಲಿನ ಪರಿಸರ, ಸಂಸ್ಕೃತಿ, ಆಡುಭಾಷೆಯಲ್ಲಿ ಈ ಚಿತ್ರವನ್ನು ಚಿತ್ರೀಕರಣ ಮಾಡಿದ್ದೇವೆ. ಇಲ್ಲಿನ ರಂಗಭೂಮಿಯ ಹಲವು ಕಲಾವಿದರು ಮತ್ತು ತಂತ್ರಜ್ಱರು ಈ ಕೆಲಸದಲ್ಲಿ ಜತೆಯಾಗಿದ್ದಾರೆ. ಶಿಶಿರ ಶೃಂಗೇರಿ ಛಾಯಾಗ್ರಹಣ ಮಾಡಿದರೆ, ಶ್ರೀನಿಧಿ ಕೊಪ್ಪ ಸಂಗೀತ ಸಂಯೋಜಿಸಿದ್ದಾರೆ. ಬಿ.ಎಲ್​. ರವಿಕುಮಾರ್, ಶೃಂಗೇರಿ ಸುಬ್ಬಣ್ಣ, ಸಸಿಮನೆ ಕೃಷ್ಣಮೂರ್ತಿ, ವಿಶ್ವನಾಥ್​, ನಾಟ್ಯ, ನಾಗಶ್ರೀ ಮುಂತಾದವರು ನಟಿಸಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ ಅವರು.

    ಕೆಲಸ ಇಲ್ಲದೆ ಕಿರುತೆರೆಯತ್ತ ಹೊರಟರೆ ಬ್ರಹ್ಮಾನಂದಂ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts