More

    ಶೂಟಿಂಗ್​ಗೆ ಹೊರಟರು ಬಡೆ ಮಿಯಾ, ಚೋಟೆ ಮಿಯಾ …

    ಮುಂಬೈ: ಬಾಲಿವುಡ್​ನಲ್ಲಿ ‘ಬಡೆ ಮಿಯಾ ಚೋಟೆ ಮಿಯಾ’ ಎಂದರೆ ಮೊದಲಿಗೆ ನೆನಪಿಗೆ ಬರುವುದು 90ರ ದಶಕದಲ್ಲಿ ಬಿಡುಗಡೆಯಾದ ಅಮಿತಾಭ್​ ಬಚ್ಚನ್​ ಮತ್ತು ಗೋವಿಂದ ಅಭಿನಯದ ಚಿತ್ರ. ಈಗ ಅದೇ ಹೆಸರಿನ ಚಿತ್ರವೊಂದು ತಯಾರಾಗುತ್ತಿದ್ದು, ಈ ಬಾರಿ ‘ಬಡೆ ಮಿಯಾ, ಚೋಟೆ ಮಿಯಾ’ ಆಗಿ ಅಕ್ಷಯ್​ ಕುಮಾರ್ ಮತ್ತು ಟೈಗರ್​ ಶ್ರಾಫ್​ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಫೆ.17ಕ್ಕೆ ಬಿಡುಗಡೆಯಾಗಲಿದೆ ಅಕ್ಷಿತ್​ – ಅದಿತಿ ಅಭಿನಯದ ‘ಖೆಯೊಸ್​’

    ಮೊದಲ ಚಿತ್ರದ ತರಹ ಇದು ಕಾಮಿಡಿ ಚಿತ್ರವಲ್ಲ. ಇದೊಂದು ಪಕ್ಕಾ ಆಕ್ಷನ್​ ಚಿತ್ರವಾಗಿದ್ದು, ಇದುವರೆಗೂ ಭಾರತೀಯ ಚಿತ್ರರಂಗದ ಯಾವುದೇ ಚಿತ್ರದಲ್ಲೂ ನೋಡಿರದ ಸ್ಟಂಟ್​ಗಳನ್ನು ಈ ಚಿತ್ರದಲ್ಲಿ ನೋಡಬಹುದಾಗಿದೆಯಂತೆ. ಅದಕ್ಕಾಗಿಯೇ ಅಕ್ಷಯ್​ ಕುಮಾರ್​ ಮತ್ತು ಟೈಗರ್​ ಶ್ರಾಫ್​ ಸಾಕಷ್ಟು ತಯಾರಿ ಮಾಡಿಕೊಂಡು, ಇದೀಗ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ.

    ವಿಶೇಷವೆಂದರೆ, ಮೊದಲ ಚಿತ್ರವನ್ನು ನಿರ್ಮಿಸಿದ್ದು ಪೂಜಾ ಫಿಲಂಸ್​ನ ವಾಶು ಭಾಗ್ನಾನಿ. ಈಗ ಈ ಚಿತ್ರವನ್ನೂ ಅವರೇ ನಿರ್ಮಿಸುತ್ತಿದ್ದು, ಅಬ್ಬಾಸ್​ ಅಲಿ ಜಫರ್​ ನಿರ್ದೇಶನದ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಮತ್ತೊಮ್ಮೆ ‘ಬೊಂಬಾಟ್​ ಭೋಜನ’ ಬಡಿಸಲು ಬರುತ್ತಿದ್ದಾರೆ ಸಿಹಿಕಹಿ ಚಂದ್ರು

    ‘ಬಡೆ ಮಿಯಾ, ಚೋಟೆ ಮಿಯಾ’ ಚಿತ್ರದಲ್ಲಿ ಮಲಯಾಳಂ ಸೂಫರ್​ಸ್ಟಾರ್ ಪೃಥ್ವಿರಾಜ್ ಸುಕುಮಾರನ್​ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಮಿಕ್ಕಂತೆ ಮಾನುಷಿ ಚಿಲ್ಲರ್​, ಆಲಯಾ, ಸೋನಾಕ್ಷಿ ಸಿನ್ಹಾ, ರೋನಿತ್​ ರಾಯ್​ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ಕನ್ನಡಕ್ಕೆ ನನ್ನ ಮೊದಲ ಪ್ರಾಶಸ್ತ್ಯ; ಮನದ ಮಾತು ಬಿಚ್ಚಿಟ್ಟ ಸಪ್ತಮಿ ಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts