More

    ಜಗಮಗಿಸುವ ಮೈಸೂರಲ್ಲಿ ‘ಪೆಟ್ರೊಮ್ಯಾಕ್ಸ್’ ಹಿಡಿದ ನೀನಾಸಂ ಸತೀಶ್​-ಹರಿಪ್ರಿಯಾ..!

    ಬೆಂಗಳೂರು: ಮೈಸೂರಿನಲ್ಲಿ ನಟ ನೀನಾಸಂ ಸತೀಶ್​, ನಟಿ ಹರಿಪ್ರಿಯಾ, ನಿರ್ದೇಶಕ ವಿಜಯಪ್ರಸಾದ್ ‘ಪೆಟ್ರೊಮ್ಯಾಕ್ಸ್​’ ಹಿಡಿದು ಓಡಾಡುತ್ತಿದ್ದಾರೆ. ದಸರಾ ಸಂಭ್ರಮದಲ್ಲಿ ಜಗಮಗಿಸುತ್ತಿರುವ ಮೈಸೂರಲ್ಲಿ ಇವರ್ಯಾಕೆ ‘ಪೆಟ್ರೊಮ್ಯಾಕ್ಸ್’ ಹಿಡಿದರು?!

    ‘ಪೆಟ್ರೊಮ್ಯಾಕ್ಸ್’ ಎಂದಾಕ್ಷಣ ಸಾಮಾನ್ಯವಾಗಿ ನೆನಪಿಗೆ ಬರುವುದು ಹಳೇ ಕಾಲದಲ್ಲಿ ಬೆಳಕಿಗಾಗಿ ಬಳಸುತ್ತಿದ್ದ ಲಾಟೀನು ಅಥವಾ ದಶಕಗಳ ಹಿಂದೆ ಸಿನಿಮಾವೊಂದರಲ್ಲಿ ಅನಂತ್​ನಾಗ್ ಹೇಳಿದ್ದ ಆ ಪೆಟ್ರೊಮ್ಯಾಕ್ಸ್. ಆದರೆ ಇಲ್ಲೀಗ ‘ಪೆಟ್ರೊಮ್ಯಾಕ್ಸ್​’ ಎಂಬುದು ಸಿನಿಮಾ ಟೈಟಲ್​. ಅಂದರೆ, ವಿಜಯಪ್ರಸಾದ್​ ನಿರ್ದೇಶನ ಹಾಗೂ ನೀನಾಸಂ ಸತೀಶ್​-ಹರಿಪ್ರಿಯಾ ಅಭಿನಯದ ‘ಪೆಟ್ರೊಮ್ಯಾಕ್ಸ್’ ಸಿನಿಮಾಗೆ ಮೈಸೂರಲ್ಲಿ ಇಂದು ಮುಹೂರ್ತ ನಡೆದಿದೆ.

    ಜಗಮಗಿಸುವ ಮೈಸೂರಲ್ಲಿ 'ಪೆಟ್ರೊಮ್ಯಾಕ್ಸ್' ಹಿಡಿದ ನೀನಾಸಂ ಸತೀಶ್​-ಹರಿಪ್ರಿಯಾ..!

    ಒಟ್ಟಿನಲ್ಲಿ ಹರಿಪ್ರಿಯಾ ಹಾಗೂ ಸತೀಶ್ ಇಬ್ಬರಿಗೂ ಇದು ವಿಶೇಷ ಎನಿಸಿಕೊಂಡಿದೆ. ಏಕೆಂದರೆ ವಿಜಯಪ್ರಸಾದ್​ ನಿರ್ದೇಶನದಲ್ಲಿ ಹರಿಪ್ರಿಯಾ ನಟಿಸಿದ್ದ ‘ನೀರ್​ದೋಸೆ’ ಸಿನಿಮಾ ಯಶಸ್ವಿಯಾಗಿದ್ದು, ಸಿನಿಪ್ರಿಯರಿಗೆ ಉತ್ತಮ ರಂಜನೆ ನೀಡಿತ್ತು. ಇದೀಗ ಅದೇ ನಿರ್ದೇಶಕರ ಆ್ಯಕ್ಷನ್​-ಕಟ್​ಗೆ ಹರಿಪ್ರಿಯಾ ಮತ್ತೊಮ್ಮೆ ಅಭಿನಯಿಸುತ್ತಿದ್ದರೆ, ನೀನಾಸಂ ಸತೀಶ್​ಗೆ ಇದೇ ಮೊದಲ ಸಲ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ.

    ಜಗಮಗಿಸುವ ಮೈಸೂರಲ್ಲಿ 'ಪೆಟ್ರೊಮ್ಯಾಕ್ಸ್' ಹಿಡಿದ ನೀನಾಸಂ ಸತೀಶ್​-ಹರಿಪ್ರಿಯಾ..!

    ಇನ್ನು ನೀನಾಸಂ ಸತೀಶ್​ ಅವರ ಅಭಿನಯದ ಎರಡೂ ಸಿನಿಮಾಗೆ ಇವತ್ತೇ ಮುಹೂರ್ತ ನಡೆದಿದೆ. ರಚಿತಾ ರಾಮ್​ ಜತೆ ಅಭಿನಯಿಸುತ್ತಿರುವ ‘ಮ್ಯಾಟ್ನಿ’ ಹಾಗೂ ಹರಿಪ್ರಿಯಾ ಜತೆಗಿನ ‘ಪೆಟ್ರೊಮ್ಯಾಕ್ಸ್’ ಎರಡಕ್ಕೂ ಒಂದೇ ದಿನ ಮುಹೂರ್ತ ನಡೆದಿರುವ ಬಗ್ಗೆ ನೀನಾಸಂ ಖುಷಿ ಹಂಚಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts