ಕೋಮು ಪ್ರಚೋದನೆ ಸಿದ್ದರಾಮಯ್ಯ ಕಾರಣ

blank

ಕೊಪ್ಪಳ: ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡುವ ಮೂಲಕ‌ ರಾಜ್ಯದಲ್ಲಿ ಕೋಮು ಪ್ರಚೋದನೆ ಕೊಟ್ಟರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು‌.


ಕೊಪ್ಪಳದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.


ಮುಸ್ಲಿಮರಲ್ಲಿ ವ್ಯಕ್ತಿ ಪೂಜೆ ಇಲ್ಲ. ಯಾವ ಮುಸ್ಲಿಮರು ಟಿಪ್ಪು ಜಯಂತಿ ಕೇಳಿರಲಿಲ್ಲ. ಆದರೂ ಜಯಂತಿ ಮಾಡಿದರು. ವೀರಶೈವ ಲಿಂಗಾಯತರನ್ನ ಒಡೆಯಲು ಯತ್ನಿಸಿದರು. ಶಾಲಾ ಮಕ್ಕಳಲ್ಲಿ ಜಾತಿ ತಂದರು. ಕೇವಲ ಒಂದು ವರ್ಗಕ್ಕೆ ಶಾದಿ ಭಾಗ್ಯ ಕೊಟ್ಟರು. ಯಾಕೆ ಅವರದೇ ಸಮುದಾಯ ಅಥವಾ ಇತರರಲ್ಲಿ ಬಡ ಜನರು ಇಲ್ಲವಾ ? ಅವರಿಗೇಕೆ ನೀಡಲಿಲ್ಲ. ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿದ್ದ ಪಿಎಫ್ಐ ಕಾರ್ಯಕರ್ತರನ್ನ ಬಿಡುಗಡೆ ಮಾಡಿದರು. ಮತಕ್ಕಾಗಿ ಓಲೈಕೆ ರಾಜಕಾರಣ ಮಾಡಿದರು. ನಾವದನ್ನು ತಿಳಿ ಮಾಡುತ್ತಿದ್ದೇವೆ ಎಂದು ವಾಗ್ದಾಳಿ ನಡೆಸಿದರು.


ಎಲ್ಲ ಪಕ್ಷಗಳಿಗೆ ಅವರದೇ ಆದ ಸಿದ್ಧಾಂತಗಳಿವೆ. ಅದಕ್ಕೆ ತಕ್ಕಂತೆ ಮಾತನಾಡಬೇಕು. ಯಾರೇ ಆಗಲಿ ಕೊಲ್ಲುವ ಮಾತಾಡಬಾರದು. ಅದನ್ನು ಒಪ್ಪುವುದಿಲ್ಲ.
ಇದು ನಮ್ಮಪಕ್ಷದ ಸಿದ್ದಾಂತ ಅಲ್ಲ ಎಂದು ಸಚಿವ ಅಶ್ವತ್ಥ ನಾರಾಯಣ ಸಿದ್ದರಾಮಯ್ಯನನ್ನು ಟಿಪ್ಪುವಿನಂತೆ ಮುಗಿಸಬೇಕೆಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು. 

  ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಸರಿಡುವುದು ವಿವಾದ ಆಗಬಾರದು. ಅಭಿವೃದ್ಧಿ ಬಗ್ಗೆ ಚರ್ಚಿಸೋಣ. ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

Share This Article

7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದ್ರೆ ದೇಹ, ಮನಸ್ಸಿನ ಮೇಲೆ ಪರಿಣಾಮ!  ಸಂಶೋಧನೆಯಿಂದ ಬಹಿರಂಗ.. Sleeping  

Sleeping : ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯ. ನಿದ್ರೆಯ ಕೊರತೆಯು ದೇಹದಲ್ಲಿ ಅನೇಕ ರೋಗಗಳನ್ನು ಉಂಟುಮಾಡುತ್ತದೆ.…

Beauty Tips: ಲಿಪ್‌ಸ್ಟಿಕ್ ಹೆಚ್ಚು ಬಳಸುತ್ತೀರಾ? ಹುಷಾರಾಗಿರಿ.. ಇಲ್ಲಿದೆ ನೋಡಿ ಬೆಚ್ಚಿ ಬೀಳಿಸೋ ವರದಿ

Beauty Tips : ಹುಡುಗಿಯರು ಬಳಸುವ ಸೌಂದರ್ಯವರ್ಧಕಗಳಲ್ಲಿ ಲಿಪ್‌ಸ್ಟಿಕ್ ಕೂಡ ಒಂದು. ತುಟಿಗಳು ಸುಂದರವಾಗಿ ಮತ್ತು…

ಬಿಸಿ ಮಾಡದೆ ಹಾಲನ್ನು ಹಸಿಯಾಗಿ ಕುಡಿಯಲೇಬಾರದು! Raw Milkನಿಂದಾಗುವ ಸಮಸ್ಯೆ ಎದುರಿಸೋಕೆ ರೆಡಿಯಾಗಿ!

Raw Milk : ಗ್ರಾಮೀಣ ಪ್ರದೇಶದ ಜನರು ಹಸು ಅಥವಾ ಎಮ್ಮೆ ಹಾಲನ್ನು ಸೇವಿಸುತ್ತಾರೆ. ಆದರೆ…