More

    ಕೃಷಿ ಕಾಯ್ದೆ ರೈತರ ಮೇಲೆ ಹೇರಿಕೆಯಲ್ಲ, ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ

    ಉಡುಪಿ: ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಕೃಷಿ ಕಾಯ್ದೆ ತಿದ್ದುಪಡಿ ರೈತರ ಮೇಲೆ ಒತ್ತಾಯ, ಹೇರಿಕೆ ಇರುವುದಿಲ್ಲ, ಕಾಯ್ದೆಯಿಂದ ಮುಕ್ತವಾಗಿಯೂ ರೈತರು ವ್ಯವಹರಿಸಬಹುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

    ಬಿಜೆಪಿ ಸರ್ಕಾರವವನ್ನು ವಿರೋಧಿಸುವ ಉದ್ದೇಶದಿಂದ ರೈತಪರ ಕಾಯ್ದೆಯನ್ನು ವಿರೋಧಿಸಲಾಗುತ್ತಿದೆ. ಎಪಿಎಂಸಿ ರೈತರ ರಕ್ತ ಹೀರುತ್ತಿದೆ. ಈ ಹಿಂದೆ ಕಾಂಗ್ರೆಸ್ ಎರಡು ಬಾರಿ ಕಾಯ್ದೆ ಜಾರಿಗೆ ತರಲು ಪ್ರಯತ್ನಿಸಿತ್ತು. ಈಗ ಬಿಜೆಪಿ ಈ ಕಾಯ್ದೆ ತರಲು ಮುಂದಾದರೆ ಕಾಂಗ್ರೆಸ್ ವಿರೋಧ ಮಾಡುವ ಮೂಲಕ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ಕಾಯ್ದೆಯಿಂದ ರೈತರಿಗೆ ಸಮಸ್ಯೆಯಾಗುವುದಿಲ್ಲ. ಎಪಿಎಂಸಿ ಇರುತ್ತದೆ. ರೈತರು ಬೇಕಾದಲ್ಲಿ ಎಪಿಎಂಸಿ ಮೂಲಕ ವ್ಯವಹಾರ ನಡೆಸಬಹುದು. ಎಪಿಎಂಸಿ ಹೊರತಾಗಿಯೂ ವ್ಯವಹಾರ ನಡೆಸಬಹುದು. ಕಾಂಟ್ರಾಕ್ಟ್ ಫಾರ್ಮಿಂಗ್ ಹೊಸದೇನಲ್ಲ, ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ದೇಶದಲ್ಲಿ ಈ ಪದ್ಧತಿ ಚಾಲ್ತಿಯಲ್ಲಿದೆ. ಈ ಕಾಯ್ದೆ ಕಾಂಟ್ರಾಕ್ಟ್ ಫಾರ್ಮಿಂಗ್‌ಗೆ ಕಾನೂನು ಚೌಕಟ್ಟು ರೂಪಿಸಿ ರೈತರಿಗೆ ಭದ್ರತೆ ನೀಡುವುದು. ಕಾಂಟ್ರಾಕ್ಟ್ ಫಾರ್ಮಿಂಗನ್ನು ರೈತರ ಮೇಲೆ ಹೇರಿಕೆ ಮಾಡುತ್ತಿಲ್ಲ. ಕಾಂಟ್ರಾಕ್ಟ್ ಫಾರ್ಮಿಂಗ್ ಅನುಸರಿಸುವ ಕೆಲವು ರೈತರಿಗೆ ಈ ಕಾಯ್ದೆ ರಕ್ಷಣೆ ನೀಡಲಿದೆ ಎಂದು ತಿಳಿಸಿದರು.

    ಮಧ್ಯವರ್ತಿಗಳ ಹಿತಕ್ಕಾಗಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ರೈತರ ಕಾಳಜಿಯಿಂದಲ್ಲ. ಪಂಜಾಬ್ ರಾಜ್ಯದಲ್ಲಿ ಎಪಿಎಂಸಿ ಲಾಬಿ ಮಿತಿ ಮೀರಿದೆ. ರೈತರ ಕಲ್ಯಾಣಕ್ಕಾಗಿ ಜಾರಿಗೆ ತಂದ ಈ ಮಸೂದೆ ಮಧ್ಯವರ್ತಿಗಳಿಗೆ ಕಂಟಕವಾಗಿ ಪರಿಣಮಿಸಿದೆ ಎಂದು ಶೋಭಾ ಹೇಳಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕ ಕೆ.ರಘುಪತಿ ಭಟ್, ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಪ್ರಮುಖರಾದ ಕುತ್ಯಾರು ನವೀನ್ ಶೆಟ್ಟಿ, ಗುರುಪ್ರಸಾದ್, ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

    ಡಿವೈಎಸ್‌ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅದರ ಹಿಂದಿರುವ ಎಲ್ಲಾ ಸತ್ಯಾಂಶಗಳನ್ನು ಕುಲಂಕಷವಾಗಿ ತನಿಖೆ ನಡೆಸಬೇಕು. ಆತ್ಮಹತ್ಯೆ ನಿಖರ ಕಾರಣ ಬಗ್ಗೆ ನಿಖರವಾದ ತನಿಖೆ ನಡೆಸುವಂತೆ ಗೃಹ ಸಚಿವರಿಗೆ, ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ.
    -ಶೋಭಾ ಕರಂದ್ಲಾಜೆ, ಸಂಸದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts