More

    ಮಹಾನಗರ ಪಾಲಿಕೆ ಆಯವ್ಯಯ ಮಂಡನೆ, ಬೀದಿ ದೀಪಗಳ ಬಗ್ಗೆ ಗಮನ ಸೆಳೆದ ಶಿವರುದ್ರ ಬಾಗಲಕೋಟ

    ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ 26515 ವಿದ್ಯುತ್ ಕಂಬಗಳಿದ್ದು 7824 ಕಂಬಗಳಿಗೆ ವಿದ್ಯುತ್ ಬಲ್ಬ್ ಅಳವಡಿಕೆಯಾಗಿಲ್ಲ. 20284 ಬೀದಿ ದೀಪಗಳು ಸಾಂಪ್ರದಾಯಿಕ ವಿಧಾನದ ಮುಖಾಂತರ ಬೆಳಗಿಸಲಾಗುತ್ತಿದೆ. ಹೀಗಾಗಿ ವಿದ್ಯುತ್ ದೀಪಗಳನ್ನು ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ)ದಡಿ ನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ಸದಸ್ಯ ಶಿವರುದ್ರ ಬಾಗಲಕೋಟ ಒತ್ತಾಯಿಸಿದರು.

    ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಮಂಡನೆಯಾದ ಚೊಚ್ಚಲ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಕಳೆದ 4-5 ವರ್ಷಗಳಲ್ಲಿ ಸುಮಾರು 40 ಹೊಸ ಬಡವಾಣೆಗಳು ಅನುಮೋದನೆಗೊಂಡಿವೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿ ದೀಪಗಳ ವಿದ್ಯುತ್ ಬಿಲ್ ಪ್ರತಿ ತಿಂಗಳು ಸುಮಾರು 75 ಲಕ್ಷ ರೂ.ಗಳಾಗುತ್ತಿದೆ. ಈಗಿರುವ ಸಂಪ್ರದಾಯಿಕ ವಿಧಾನದಲ್ಲಿ ಸುಮಾರು 36 ಲೈನ್‌ಮನ್‌ಗಳು, ವಾಹನ ಚಾಲಕರು, ಮ್ಯಾನೇಜರ್‌ಗಳು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಆ ಖಾಸಗಿ ಸಂಸ್ಥೆಗಳಿಗೆ ಪ್ರತಿ ತಿಂಗಳು 12 ಲಕ್ಷ ರೂಪಾಯಿ ವ್ಯಯವಾಗುತ್ತಿದೆ. ಹೊಸ ಬಡಾವಣೆ ಹೊರತುಪಡಿಸಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಿದ್ಯುತ್ ದೀಪಗಳ ನಿರ್ವಹಣೆಗೆ ಪ್ರತಿ ವರ್ಷ 12.5 ರಿಂದ 15 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಆದ್ದರಿಂದ ಈಗಾಗಲೇ ಬಳ್ಳಾರಿ ಹಾಗೂ ಮೈಸೂರಿನಲ್ಲಿರುವಂತೆ ವಿಜಯಪುರ ಮಹಾನಗರ ಪಾಲಿಕೆಯಲ್ಲಿಯೂ ಪಿಪಿಪಿ ಮಾದರಿಯಲ್ಲಿ ವಿದ್ಯುತ್ ನಿರ್ವಹಣೆಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.

    ಬೇಗಂ ತಾಲಾಬ್ ಕೆರೆಗೆ ಸಣ್ಣ ನೀರಾವರಿ ಇಲಾಖೆಯಿಂದ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಈವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇಲ್ಲ. ಅಲ್ಲಿ ಬೋಟ್ ವ್ಯವಸ್ಥೆ ಆಗಬೇಕು. ಫುಡ್ ಕೋರ್ಟ್ ಆಗಬೇಕು. ಆಟಿಕೆ ಸಾಮಗ್ರಿಗಳನ್ನು ಅಳವಡಿಸಿ ಮಕ್ಕಳಿಗೆ ಅವಕಾಶ ಕಲ್ಪಿಸಬೇಕು ಎಂದರು.

    ಮಹಾಪೌರ ಮಾಹೇಜಬಿನ್ ಅಬ್ದುಲ್ ರಜಾಕ್ ಹೊರ್ತಿ, ಉಪಮೇಯರ್ ದಿನೇಶ ಹಳ್ಳಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts