More

    ಮಹಾರಾಷ್ಟ್ರದಲ್ಲಿ ಕೋವಿಡ್​ 19 ರಾಜಕೀಯ, ಅಧಿಕಾರಿಗಳೊಂದಿಗಿನ ರಾಜ್ಯಪಾಲರ ಸಭೆ ಖಂಡಿಸಿದ ಶಿವಸೇನೆ

    ನವದೆಹಲಿ: ಕರೊನಾ ಪಿಡುಗಿನಿಂದ ಜರ್ಝರಿತವಾಗಿರುವ ಮಹಾರಾಷ್ಟ್ರದಲ್ಲಿ ಈಗ ಕೋವಿಡ್​ 19 ರಾಜಕೀಯ ಆರಂಭವಾಗಿದೆ. ಒಂದೆಡೆ ರಾಜ್ಯಪಾಲ ಭಗತ್​ಸಿಂಗ್​ ಕೋಶಿಯಾರಿ ರಾಜ್ಯದಲ್ಲಿ ಕರೊನಾ ಸೋಂಕು ತಡೆಗಟ್ಟುವ ಬಗ್ಗೆ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಅಂತೆಯೇ ರಾಜ್ಯಪಾಲರ ಈ ಕ್ರಮಕ್ಕೆ ಶಿವಸೇನೆ ನೇತೃತ್ವದ ಸರ್ಕಾರದ ಮಿತ್ರಪಕ್ಷ ಎನ್​ಸಿಪಿ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೊಂದೆಡೆ ಶಿವಸೇನೆ ಇದು ಸಮನಾಂತರ ಸರ್ಕಾರ ನಡೆಸುವ ಹುನ್ನಾರ ಎಂದು ಆಕ್ಷೇಪಿಸಿದೆ.

    ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ರಾಜ್ಯಪಾಲರ ಕ್ರಮವನ್ನು ಖಂಡಿಸಿರುವ ಶಿವಸೇನೆ, ರಾಜ್ಯದಲ್ಲಿ ಯುದ್ಧದಂಥ ಪರಿಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ಆಡಳಿತ ವರ್ಗಕ್ಕೆ ಸಲಹೆಸೂಚನೆಗಳನ್ನು ನೀಡಲು ರಾಜ್ಯದಲ್ಲಿ ಕೇವಲ ಒಂದು ಸರ್ಕಾರ ಇದ್ದರೆ ಒಳ್ಳೆಯದು. ಅದುಬಿಟ್ಟು ಹಲವು ಸರ್ಕಾರಗಳು ನಿರ್ದೇಶನ ನೀಡಲು ಮುಂದಾದರೆ ಗೊಂದಲ ಏರ್ಪಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ.

    ಕೇಂದ್ರದಲ್ಲಿ ಪ್ರಧಾನಿ, ರಾಜ್ಯದಲ್ಲಿ ಮುಖ್ಯಮಂತ್ರಿಗಳು ಮಾತ್ರ ಆಡಳಿತ ವರ್ಗಕ್ಕೆ ನಿರ್ದೇಶನ ನೀಡುವಂತಿರಬೇಕು. ಪ್ರಧಾನಿ ನರೇಂದ್ರ ಮೋದಿ ಬುಧವಾರ ನಡೆಸಿದ ವಿಡಿಯೋ ಕಾನ್ಫರೆನ್ಸ್​ನಲ್ಲಿ ಎನ್​ಸಿಪಿ ನಾಯಕ ಶರದ್​ ಪವಾರ್​, ಪ್ರಧಾನಿ ನೇತೃತ್ವದಲ್ಲಿನ ಕೋವಿಡ್​ ವಿರುದ್ಧದ ಹೋರಾಟದಲ್ಲಿ ಇಡೀ ದೇಶವೇ ಒಗ್ಗಟ್ಟಾಗಿದೆ ಎಂದು ಹೇಳಿದ್ದರು ಎಂದು ಶಿವಸೇನೆ ತಿಳಿಸಿದೆ.

    ರಾಜ್ಯದಲ್ಲಿನ ಕೊವಿಡ್​ 19 ಪರಿಸ್ಥಿತಿ ನಿಭಾಯಿಸುವಲ್ಲಿ ಸಿಎಂ ಉದ್ಧವ್​ ಠಾಕ್ರೆ ಚೆನ್ನಾಗಿ ಕೆಲಸ ಮಾಡುತ್ತಿರುವುದಾಗಿ ಪವಾರ್​ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಈ ವಿಷಯವಾಗಿ ರಾಜ್ಯಪಾಲರು ತೋರುತ್ತಿರುವ ಆಸಕ್ತಿ ಮತ್ತು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಕೊಂಡಾಡಿದ್ದರು. ಹಿರಿಯ ಮುಖಂಡರೊಬ್ಬರ ಇಂಥ ಇಬ್ಬಗೆ ನೀತಿಯಿಂದ ರಾಜ್ಯದಲ್ಲಿ ಗೊಂದಲವುಂಟಾಗುವ ಸಾಧ್ಯತೆ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ ಪವಾರ್​ ಅವರ ನಿಲುವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

    ರಾಜ್ಯಪಾಲ ಭಗತ್​ಸಿಂಗ್​ ಕೋಶಿಯಾರಿ ಈ ವಾರದ ಆರಂಭದಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಹಾರಾಷ್ಟ್ರದ ಎಲ್ಲ ಜಿಲ್ಲಾಧಿಕಾರಿಗಳ ಜತೆ ಸಂವಾದ ನಡೆಸಿ, ರಾಜ್ಯದಲ್ಲಿನ ಕೋವಿಡ್​ 19 ಪರಿಸ್ಥಿತಿ, ಅದರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಇದು ಶಿವಸೇನೆಯ ಅಸಮಾಧಾನಕ್ಕೆ ಕಾರಣವಾಗಿದೆ.

    ಕರೊನಾ ಪಿಡುಗಿನ ವಾತಾವರಣದಲ್ಲಿ ದವಸಧಾನ್ಯಗಳನ್ನು ಸ್ಯಾನಿಟೈಸ್​ ಮಾಡುವುದು ಹೇಗೆಂಬ ಚಿಂತೆಯೇ…? ಅದಕ್ಕೆ ಇಲ್ಲಿದೆ ಪರಿಹಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts