More

    ಕರೊನಾ ಪಿಡುಗಿನ ವಾತಾವರಣದಲ್ಲಿ ದವಸಧಾನ್ಯಗಳನ್ನು ಸ್ಯಾನಿಟೈಸ್​ ಮಾಡುವುದು ಹೇಗೆಂಬ ಚಿಂತೆಯೇ…? ಅದಕ್ಕೆ ಇಲ್ಲಿದೆ ಪರಿಹಾರ!

    ನವದೆಹಲಿ: ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ಕೈಗಳನ್ನು ಪದೇಪದೆ ತೊಳೆದುಕೊಂಡು ಸ್ವಚ್ಛಗೊಳಿಸಿಕೊಳ್ಳುವುದು, ಖರೀದಿಸಿದ ತರಕಾರಿ, ಹಣ್ಣುಗಳನ್ನು ಬಿಸಿನೀರಿನಲ್ಲಿ ತೊಳೆದು ಬಳಸುವುದನ್ನು ಮಾಡುತ್ತಿದ್ದೇವೆ. ಯಾವುದೇ ನಂಜುಕಾರಕ ಅಂಶ ಆಹಾರದ ಮೂಲಕ ದೇಹವನ್ನು ಸೇರಬಾರದು ಎಂಬುದು ಈ ಎಚ್ಚರಿಕೆಗೆ ಕಾರಣ.

    ಇದರ ಜತೆಗೆ ಹೊರಗೆ ಹೋದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಮಾಸ್ಕ್​ಗಳನ್ನು ಕಡ್ಡಾಯವಾಗಿ ಧರಿಸುತ್ತಿದ್ದೇವೆ. ಆದರೆ, ಮುಂದಿನ ದಿನಗಳಲ್ಲಿ ದವಸಧಾನ್ಯಗಳು, ಕರೆನ್ಸಿ ನೋಟುಗಳು ಮತ್ತಿತರ ವಸ್ತುಗಳ ಮೂಲಕ ಕೋವಿಡ್​ ಸೋಂಕು ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಆದರೆ, ಸೋಂಕು ತಡೆಗಟ್ಟುವ ಸಲುವಾಗಿ ದವಸಧಾನ್ಯ, ಕರೆನ್ಸಿ ನೋಟುಗಳನ್ನು ತೊಳೆಯಲು ಸಾಧ್ಯವಿಲ್ಲ. ಹಾಗಾದರೆ ಏನು ಮಾಡುವುದು…?

    ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಅದು ಟ್ರಂಕ್​ ಗಾತ್ರದ ಸಾಧನವನ್ನು ಸಿದ್ಧಪಡಿಸಿದೆ. ಈ ಟ್ರಂಕ್​ನಲ್ಲಿ ನೇರಳಾತೀತ ರೋಗಾಣುಹಾರಕ ಪ್ರದೀಪನ (ಅಲ್ಟ್ರಾವೈಲೆಟ್​ ಜರ್ಮಿಸಿಡಲ್​ ಇರೇಡಿಏಷನ್​) ತಂತ್ರಜ್ಞಾನವನ್ನು ಅಳವಡಿಸಿದೆ.

    ದವಸಧಾನ್ಯ, ಕರೆನ್ಸಿ ನೋಟುಗಳು, ವಾಚ್​ ಮತ್ತಿತರ ಸಾಧನಗಳನ್ನು ಈ ಟ್ರಂಕ್​ ಗಾತ್ರದ ಸಾಧನದಲ್ಲಿ ಕೆಲ ಸೆಕೆಂಡ್​ಗಳವರೆಗೆ ಇರಿಸುವುದರಿಂದ ಅವೆಲ್ಲವೂ ಎಲ್ಲ ಬಗೆಯ ವೈರಾಣು ಮತ್ತು ಸೂಕ್ಷ್ಮಾಣುಗಳಿಂದ ಮುಕ್ತವಾಗುತ್ತವೆ. ಹಾಗಾಗಿ, ಮನೆಯೊಳಗೆ ಕೋವಿಡ್​ 19ನಂಥ ಸೋಂಕುಗಳ ಪ್ರವೇಶವನ್ನು ನಿರ್ಬಂಧಿಸಬಹುದು ಎಂದು ಐಐಟಿ ಹೇಳಿದೆ.

    ಟ್ರಂಕ್​ ಗಾತ್ರದ ಈ ಸಾಧನವನ್ನು ಮನೆಗಳ ಬಾಗಿಲಲ್ಲಿ ಅಳವಡಿಸಬಹುದು. ಪ್ರತಿಯೊಂದು ವಸ್ತುವನ್ನು ಇದರಲ್ಲಿ ಇರಿಸಿ, ವೈರಾಣು ಮತ್ತು ಸೂಕ್ಷ್ಮಾಣು ಮುಕ್ತಗೊಳಿಸಿ ಮನೆಯೊಳಗೆ ಕಂಡೊಯ್ಯಬಹುದು ಎಂದು ವಿವರಿಸಿದೆ.

    ಕೋವಿಡ್​ 19ನ ಜಾಗತಿಕ ಕೇಂದ್ರ ಬಿಂದು ವುಹಾನ್​ನಲ್ಲಿ ಕರೊನಾ ವೈರಸ್​ ಬಳಿಕ ‘ಬಾಡಿಗೆ‘ಯ ಹೊಸ ತಲೆನೋವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts