More

    ಸತ್ಯ ಮತ್ತು ಅಹಿಂಸೆ ಪ್ರಬಲ ಅಸ್ತ್ರಗಳು: ಡಾ. ತೋಂಟದ ಸಿದ್ಧರಾಮ ಶ್ರೀಗಳು

    ವಿಜಯವಾಣಿ ಸುದ್ದಿಜಾಲ ಗದಗ
    ಮಹಾತ್ಮಾ ಎಂದು ಎಲ್ಲರನ್ನು ಕರೆಯಲು ಸಾಧ್ಯವಿಲ್ಲ. ಮಹಾತ್ಮಾ ಗಾಂಧೀಜಿ ಮತ್ತು ಲಾಲಬಹದ್ದೂರು ಶಾಸ್ತ್ರೀಜಿಯವರು ನಿಜವಾದ ಅರ್ಥದಲ್ಲಿ ಮಹಾತ್ಮರು ಎನಿಸಿಕೊಂಡವರು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
    ಲಿಂಗಾಯತ ಪ್ರಗತಿಶೀಲ ವತಿಯಿಂದ ಇತ್ತೀಚೆಗೆ ಜರುಗಿದ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಗಾಂಧೀಜಿಯವರು ಸತ್ಯವೇ ದೇವರು ಎಂದು ಬದುಕಿದವರು. ಶರಣರ, ಸಂತರ, ಮಹಾತ್ಮರ ನಡೆ ನುಡಿಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. ಸತ್ಯ ಮತ್ತು ಅಹಿಂಸೆ ಎರಡು ಪ್ರಬಲವಾದ ಅಸ್ತ್ರಗಳು. ಅಹಿಂಸೆ ಇದ್ದಲ್ಲಿ ಹಿಂಸೆಯ ತ್ಯಾಗ ಇದ್ದೇ ಇರುತ್ತದೆ. ಗಾಂಧೀಜಿಯವರ ಕರೆಗೆ ಇಡೀ ದೇಶವೇ ಓಗೊಡುತ್ತಿತ್ತು. ಇಡೀ ಬದುಕನ್ನೆ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದರು ಎಂದು ಶ್ರೀಗಳು ಹೇಳೀದರು.
    ಚಿಂತಕ ಜೆ.ಕೆ. ಜಮಾದಾರ ಉಪನ್ಯಾಸ ನೀಡಿ, ಗಾಂಧೀಜಿಯವರು ಚಿಂತನೆ ಮಾಡದ ವಿಷಯಗಳೇ ಇಲ್ಲ. ಪತ್ರಿಕೋದ್ಯಮ, ಪರಿಸರ, ಮಹಿಳಾ ಅಭಿವೃದ್ಧಿ, ವಿಶ್ವಶಾಂತಿ, ಕೈಗಾರಿಕೋದ್ಯಮ ಪ್ರತಿಯೊಂದು ೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಸತ್ಯ, ಶಾಂತಿ, ಅಹಿಂಸೆ ಗಾಂಧೀಜಿಯವರ ತತ್ವಗಳಾಗಿದ್ದವು ಎಂದರು.
    ತೋಂಟದಾರ್ಯ ಮಠ ವಿದ್ಯಾಪಿಠದ ಕಾರ್ಯದಶಿರ್ ಶಿವಾನಂದ ಪಟ್ಟಣಶೆಟ್ಟರ ಮಾತನಾಡಿ, ಗಾಂಧೀಜಿಯವರನ್ನು ಗದುಗಿಗೆ ಕರೆದುಕೊಂಡು ಬಂದ ಕೀತಿರ್ ಅಂದಾನಪ್ಪ ದೊಡ್ಡಮೇಟಿ ಮತ್ತು ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರಿಗೆ ಸಲ್ಲುವುದು. ಶ್ರೀಗಳು ಹರ್ಡೇಕರ ಮಂಜಪ್ಪನವರ ಮತ್ತು ದೊಡ್ಡಮೇಟಿ ಅಂದಾನಪ್ಪನವರ ಜೀವನ ಚರಿತ್ರೆಗಳನ್ನು ಪ್ರಕಟಿಸಿ ಮತ್ತು ಮಂಜಪ್ಪನವರ ಸ್ಮಾರಕವನ್ನು ನಿಮಿರ್ಸಿದ್ದಲ್ಲದೆ, ಗದುಗಿನ ಮುಖ್ಯರಸ್ತೆಗೆ ದೊಡ್ಡಮೇಟಿಯವರ ಹೆಸರನ್ನು ನಾಮಕರಣ ಮಾಡಿಸಿ ಅವರ ಹೆಸರನ್ನು ಚಿರಸ್ಥಾಯಿಗೊಳಿಸಿದ್ದಾರೆ ಎಂದರು.
    ಶಿವಾನುಭವದಲ್ಲಿ ಗಾಂಧೀಜಿ ಹಾಗೂ ಲಾಲಬಹದ್ದೂರ ಶಾಸ್ತ್ರಿಗಳು ಜಯಂತೋತ್ಸವ ಆಚರಿಸಲಾಯಿತು. ಜಿಲ್ಲಾ ಸಹಕಾರಿ ಯೂನಿಯನ್​ಗೆ ನಿರ್ದೇಶಕರಾಗಿ ಆಯ್ಕೆಯಾದ ಎಸ್​.ಎಸ್​. ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
    ಮಾಜಿ ಶಾಸಕ ಡಿ.ಆರ್​. ಪಾಟೀಲ, ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್​, ವಿವೇಕಾನಂದಗೌಡ ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts