ನಾಗವಾರ ಜನತೆಗೆ ಆಸರೆಯಾದ ಶಿವಣ್ಣ ಬಾಯ್ಸ್ …

blank

ಬೆಂಗಳೂರು: ಕರೊನಾ ಎರಡನೆಯ ಅಲೆಯಿಂದ ಉಂಟಾಗಿರುವ ಲಾಕ್​ಡೌನ್​ನಿಂದ ಜನ ತೀವ್ರ ಸಂಕಷ್ಟಕ್ಕೆ ಎದುರಾಗಿದ್ದಾರೆ. ಅದರಲ್ಲೂ ಕಾರ್ಮಿಕರ ಪರಿಸ್ಥಿತಿ ಅತಂತ್ರವಾಗಿದೆ. ಈ ನಿಟ್ಟಿನಲ್ಲಿ ಕನ್ನಡದ ಹಲವು ನಟ-ನಟಿಯರು ಕಾರ್ಮಿಕರ ರಕ್ಷಣೆಗೆ ಬಂದಿದ್ದಾರೆ. ಅವರಿಗೆ ಅಗತ್ಯವಿರುವ ದವಸ-ಧಾನ್ಯಗಳಲ್ಲದೆ, ಕೆಲವರು ನಿತ್ಯ ಆಹಾರ ಸರಬರಾಜು ಮಾಡುತ್ತಿದ್ದಾರೆ.

ನಾಗವಾರ ಜನತೆಗೆ ಆಸರೆಯಾದ ಶಿವಣ್ಣ ಬಾಯ್ಸ್ …

ಇದನ್ನೂ ಓದಿ: ಶಂಕರ್ ನಿರ್ದೇಶನದ ಚಿತ್ರಗಳನ್ನು ನಿಲ್ಲಿಸಲು ಲೈಕಾ ಪ್ರೊಡಕ್ಷನ್ಸ್ ಪ್ರಯತ್ನ

ಈಗ ಹ್ಯಾಟ್ರಿಕ್​ ಹೀರೋ ಶಿವರಾಜಕುಮಾರ್​ ಮತ್ತು ಗೀತಾ ಶಿವರಾಜಕುಮಾರ್​ ಸಹ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಅಭಿಮಾನಿ ಬಳಗವಾದ ಶಿವಣ್ಣ ಬಾಯ್ಸ್​ ಜತೆಗೆ ಸೇರಿಕೊಂಡು, ತಾವು ನೆಲೆಸಿರೋ ನಾಗವಾರ ಏರಿಯಾದಲ್ಲಿ ಪ್ರತಿ‌ನಿತ್ಯ 500 ಜನರಿಗೆ ಊಟ, ತಿಂಡಿ ,ಹಾಗೂ ಟೀ ವ್ಯವಸ್ಥೆಯನ್ನ ಮಾಡಿದ್ದಾರೆ‌ ಶಿವಣ್ಣ. ಈ ಸೇವೆಗೆಂದೇ ಶಿವಣ್ಣ ಬೊಲೇರೋ ಕಾರ್​ ಆರೇಂಜ್ ಮಾಡಿದ್ದು, ಈ ವಾಹನದಲ್ಲೇ ಊಟ-ತಿಂಡಿ‌ ಸರಬರಾಜಾಗುತ್ತಿದೆ.

ಇದನ್ನೂ ಓದಿ: ದಿ ಫ್ಯಾಮಿಲಿ ಮ್ಯಾನ್ ರಿಲೀಸ್ ಡೇಟ್ ಕೊನೆಗೂ ಫಿಕ್ಸ್ ಆಯ್ತು

“ಆಸರೆ” – ಹಸಿದ ಹೊಟ್ಟೆಗೆ ಕೈ ತುತ್ತು ಅನ್ನೋ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿರೋ ಈ ಕಾರ್ಯಕ್ರಮ, ಸದ್ಯ 10ದಿನದವರೆಗೂ  ಮುಂದುವರೆಯಲಿದೆ. ಲಾಕ್​ಡೌನ್ ಹೀಗೆ ಮುಂದುವರೆದಲ್ಲಿ‌ ಸುಮಾರು 1000 ಜನಕ್ಕೆ ಪ್ರತಿ ದಿನ ಅನ್ನ ದಾಸೋಹ ಮಾಡೋದಕ್ಕೆ ಯೋಜನೆಯನ್ನೂ ಶಿವಣ್ಣ ರೂಪಿಸಿಕೊಂಡಿದ್ದಾರೆ.

ಹಾಲಿವುಡ್ ನಟಿಯ ಹಾಸಿಗೆಯ ಮೇಲೆ ಟಾಲಿವುಡ್ ನಿರ್ದೇಶಕ

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…