More

    ಟಿಪ್ಪು ಸುಲ್ತಾನ್ ದೇಶದ್ರೋಹಕ್ಕೆ ಹೆಸರುವಾಸಿ: ಶಾಸಕ ಈಶ್ವರಪ್ಪ

    ಶಿವಮೊಗ್ಗ: ಕೆಂಪೇಗೌಡರ ಆದರ್ಶ ಪರಿಪಾಲನೆ ಆಗಬಾರದೆಂಬ ಉದ್ದೇಶದಿಂದ ಕೆಲ ದೇಶದ್ರೋಹಿಗಳು ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪಿಸುವುದಾಗಿ ಹೇಳುತ್ತಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
    ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡರು ಇಡೀ ದೇಶಕ್ಕೆ ಆದರ್ಶಪ್ರಾಯರಾಗಿದ್ದು ಅವರ ಹೆಸರಲ್ಲಿ 108 ಅಡಿ ಎತ್ತರ ಕಂಚಿನ ಪ್ರತಿಮೆ ನಿರ್ಮಿಸುವುದರಲ್ಲಿ ಅರ್ಥವಿದೆ. ಆದರೆ ಟಿಪ್ಪು ಸುಲ್ತಾನ್ ದೇಶದ್ರೋಹಕ್ಕೆ ಹೆಸರುವಾಸಿ. ಆತನ 100 ಅಡಿ ಪುತ್ಥಳಿ ನಿರ್ಮಿಸುತ್ತೇವೆಂದು ಹೇಳುವವರು ದೇಶದ್ರೋಹಿಗಳೇ ಆಗಿರುತ್ತಾರೆ ಎಂದು ಗುಡುಗಿದರು.
    ದೇಶ ಭಕ್ತರ ವಿಚಾರ ಬೇಗ ಜನರಿಗೆ ತಲುಪಬಾರದೆಂಬ ಕಾರಣದಿಂದ ಶಾಸಕ ತನ್ವಿರ್ ಸೇಠ್‌ನಂತವರು ಕೆಂಪೇಗೌಡರ ಪ್ರತಿಮೆಯಂತೆ ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ಸ್ಥಾಪಿಸುವುದಾಗಿ ಹೇಳುತ್ತಿದ್ದಾರೆ ಎಂದರು.
    ಕೆಂಪೇಗೌಡ ಅವರು ಅತ್ಯಂತ ಒಳ್ಳೆಯ ಆಡಳಿತಗಾರ. ಅವರು ಕೇವಲ ಕರ್ನಾಟಕಕ್ಕೆ ಸೀಮಿತವಾದವರಲ್ಲ. ಕೆರೆಕಟ್ಟೆ ನಿರ್ಮಾಣ, ಪಾರ್ಕ್, ರಸ್ತೆ ನಿರ್ಮಾಣ, ಕುಡಿಯುವ ನೀರು ಹೀಗೆ ನಾಗರಿಕರಿಗೆ ಸಾಮಾನ್ಯ ಸೌಲಭ್ಯ ನೀಡಿದ್ದರು. ದೇಶದಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ಈ ಹಿಂದೆ ಒಳ್ಳೆಯ ಕೆಲಸ ಮಾಡಿದ ಮಹಾನ್ ಪುರುಷನ ಪ್ರತಿಮೆ ಅನಾವರಣಗೊಳ್ಳುತ್ತಿರುವುದು ಸಂತಸ ವಿಷಯ ಎಂದು ಹೇಳಿದರು.
    ಹಿಂದು-ಹಿಂದೂತ್ವಕ್ಕೆ ಅಪಮಾನ: ಕೆಲವರು ಧರ್ಮ ಉಳಿಸುತ್ತಾರೆ. ಧರ್ಮದ ಸಿದ್ಧಾಂತ ಸಾಮಾನ್ಯ ಜನವರಿಗೆ ತಿಳಿಸುವ ಮೂಲಕ ಪ್ರಖ್ಯಾತಿ ಆಗಿದ್ದಾರೆ. ಮಹರ್ಷಿ ವಾಲ್ಮೀಕಿ ರಾಮಾಯಣ ಬರೆದು ಇಡಿ ಪ್ರಪಂಚಕ್ಕೆ ಪ್ರಖ್ಯಾತಿ ಆಗಿದ್ದಾರೆ. ಅಂತಹ ವಾಲ್ಮೀಕಿ ರಕ್ತ ಹಂಚಿಕೊಂಡು ಜನಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ರಾಮಾಯಣ ಮತ್ತು ಮಹಾಭಾರತಕ್ಕಷ್ಟೇ ಈ ದೇಶದ ಹಿಂದು-ಹಿಂದೂತ್ವಕ್ಕೆ ಅಪಮಾನ ಮಾಡಿದ್ದಾರೆ ಎಂದು ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
    ಹಿಂದು ಪದ ಅಶ್ಲೀಲವಾಗಿದೆ ಎಂಬ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದ ಸತೀಶ್ ಜಾರಕಿಹೊಳಿ, ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರಿಗೆ ಮಣಿದು ಕ್ಷಮೆ ಕೇಳಿದ್ದಾಗಿ ಹೇಳಿದ್ದಾರೆ. ಇದನ್ನು ಹೇಳುವುದಕ್ಕೆ ಅವರಿಗೆ ನಾಚಿಕೆಯಾಗಬೇಕು. ಇಂತಹ ಹೇಳಿಕೆಗಳಿಂದಲೇ ಕಾಂಗ್ರೆಸ್ ದೇಶದಲ್ಲಿ ಮೂಲೆಗುಂಪು ಆಗಲಿದೆ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts