More

    ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಮಸ್ಯೆಗಳ ಪ್ರಸ್ತಾಪ

    ಶಿವಮೊಗ್ಗ: ನಗರ ಪಾಲಿಕೆ ಬಜೆಟ್ ಪೂರ್ವಭಾವಿಯಾಗಿ ಆಯೋಜಿಸಿದ್ದ ಎರಡನೇ ಸಭೆಯಲ್ಲೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪಾಲಿಕೆ ಆಡಳಿತ ವೈಫಲ್ಯವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಹಿಂದಿನ ಬಜೆಟ್‌ಗಳಲ್ಲಿ ಮೀಸಲಿಟ್ಟ ಅನುದಾನವನ್ನೇ ಸದ್ಬಳಕೆ ಮಾಡಿಕೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
    ಇದೇ ತಿಂಗಳ 6ರಂದು ನಡೆದ ಪೂರ್ವಭಾವಿ ಸಭೆ ಅಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಎರಡನೇ ಸಭೆ ನಡೆಯಿತು. ಸಭೆಯಲ್ಲಿ ನೀರು ಶುದ್ಧೀಕರಣದಲ್ಲಿನ ವೈಫಲ್ಯ, ತ್ಯಾಜ್ಯ ನೀರು ತುಂಗಾ ನದಿಗೆ ಸೇರುತ್ತಿರುವುದು, ಆಸ್ತಿ ತೆರಿಗೆ ಸಂಗ್ರಹದಲ್ಲಿನ ಹಿನ್ನಡೆ, ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ನಗರ ಪಾಲಿಕೆ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆಗೈದರು. ಪೋಸ್ಟರ್‌ಗಳನ್ನು ಪ್ರದರ್ಶಿಸಿದರು.
    ಸಭೆಯ ಆರಂಭದಲ್ಲೇ ಕುಡಿಯುವ ನೀರಿನ ಶುದ್ಧೀಕರಣದಲ್ಲಿ ಪಾಲಿಕೆ ವಿಫಲವಾಗಿರುವುದಕ್ಕೆ ನಾಗರಿಕ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳಾದ ಕೆ.ವಿ.ವಸಂತಕುಮಾರ್ ಹಾಗೂ ಡಾ.ಎ.ಸತೀಶ್‌ಕುಮಾರ್ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
    ನೀರಿನ ತೆರಿಗೆ ಹೆಚ್ಚಳ ಮಾಡಿರುವ ಪಾಲಿಕೆ ನೀರು ಶುದ್ಧೀಕರಣ ಘಟಕದ ಆಧುನೀಕರಣಕ್ಕೆ ಮುಂದಾಗಿಲ್ಲ. ಮಾನದಂಡದ ಪ್ರಕಾರ ನೀರು ಶುದ್ಧೀಕರಣವಾಗುತ್ತಿಲ್ಲ. ಸರಿಯಾದ ಲ್ಯಾಬ್ ಇಲ್ಲ. ಅಲ್ಲಿ ಸೂಕ್ತ ತಂತ್ರಜ್ಞರನ್ನೂ ನೇಮಕ ಮಾಡಿಲ್ಲ. ಜನರು ಕುಡಿಯುತ್ತಿರುವ ನೀರಿನ ಗುಣಮಟ್ಟದ ಬಗ್ಗೆ ಯಾವುದೇ ಖಾತ್ರಿ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಡಬ್ಲುೃಎಚ್‌ಒ ಹಾಗೂ ಇಂಡಿಯನ್ ಸ್ಟಾಂಡರ್ಡ್‌ನಂತೆ ನೀರಿನ ಪರೀಕ್ಷೆಯಾಗುತ್ತಿಲ್ಲ. ಸರಿಯಾಗಿ ಕ್ಲೋರಿನ್ ಟ್ರೀಟ್‌ಮೆಂಟ್ ನಡೆಯುತ್ತಿಲ್ಲ. ಸುಸಜ್ಜಿತ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಕಳೆದ ಬಜೆಟ್‌ನಲ್ಲಿ 15 ಲಕ್ಷ ರೂ. ಮೀಸಲಿರಿಸಿದ್ದರೂ ಒಂದು ರೂ. ಖರ್ಚು ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
    ಮೇಯರ್ ಎಸ್.ಶಿವಕುಮಾರ್, ಆಯುಕ್ತ ಕೆ.ಮಾಯಣ್ಣ ಗೌಡ, ಕಂದಾಯಾಧಿಕಾರಿ ಸುಜಾತಾ, ಅಧೀಕ್ಷಕ ಅಭಿಯಂತರ ನಟೇಶ್ ಉಪಸ್ಥಿತರಿದ್ದರು.
    ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಎಸ್.ಬಿ.ಅಶೋಕಕುಮಾರ್, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ರವಿಕಿಶನ್, ಪ್ರಾಧ್ಯಾಪಕ ಡಾ.ನಾಗರಾಜ ಪರಿಸರ ಮುಂತಾದವರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts