More

    ಜ್ಞಾನಕ್ಕೂ ತೆರೆದುಕೊಂಡ ಶಿವಮೊಗ್ಗ ದಸರಾ

    ಶಿವಮೊಗ್ಗ: ನಾಗರಿಕ ಸೇವೆ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದು ನಿರಂತರವಾಗಿರಬೇಕು. ಜತೆಗೆ ನಿಖರ ಗುರಿ ಇದ್ದರೆ ಮಾತ್ರ ಸಾಧನೆಯೆಂಬ ಯಶಸ್ಸಿನ ಬೆನ್ನೇರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.

    ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಮಹಾನಗರ ಪಾಲಿಕೆಯಿಂದ ಸಾಂಸ್ಕೃತಿಕ ಕಲಾ ದಸರಾದಡಿ ಮೊದಲ ಬಾರಿಗೆ ಆಯೋಜಿಸಿದ್ದ ಜ್ಞಾನ ದಸರಾ ಉದ್ಘಾಟಿಸಿ ಮಾತನಾಡಿ, ಗುರಿ ನಿರ್ದಿಷ್ಟವಾಗಿದ್ದಾಗ ಮಾತ್ರ ಅಂದುಕೊಂಡ ಸಾಧನೆ ಮಾಡಬಹುದು. ಗುರಿಯೇ ಇಲ್ಲದಿದ್ದರೆ ಸಾಧನೆ ಮಾಡುವುದು ಕನಸಿನ ಮಾತು. ಗುರಿ ಜತೆಗೆ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
    ವಿದ್ಯಾರ್ಥಿಗಳು ತಮ್ಮ ಜೀವನ ಶೈಲಿ, ಗುಂಪು ಓದುವಿಕೆಯಲ್ಲಿ ತಮ್ಮ ಮನಸ್ಸಿನಂತವರೇ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಾಗ ಸಾಮಾಜಿಕ ಒತ್ತಡಗಳನ್ನು ಮೆಟ್ಟಿನಿಲ್ಲಬೇಕು. ಮುಖ್ಯವಾಗಿ ಪರೀಕ್ಷೆ ಇದ್ದಾಗ ಓದದೇ ನಿರಂತರವಾಗಿ ಓದು ಮುಂದುವರಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು.
    ಜೀವನದಲ್ಲಿ ಯಾವ ದಿಕ್ಕಿನೆಡೆ ನಡೆಯಬೇಕೆಂಬುದು ವಿದ್ಯಾರ್ಥಿ ಜೀವನದಿಂದಲೇ ಆರಂಭವಾಗಬೇಕು. ಒಂದು ಹಂತದವರೆಗೆ ಪಾಲಕರು, ಸಂಬಂಧಿಕರ ಆಸೆಗೆ ಒತ್ತು ನೀಡಿದರೆ, ಬುದ್ಧಿಶಕ್ತಿ ಬಂದ ಬಳಿಕ ಸ್ವಯಂ ನಿರ್ಧಾರಗಳಿಗೆ ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಪರಿಶ್ರಮ ಹಾಕಬೇಕು. ಯಾವುದೇ ವಿಷಯವಾದರೂ ಆಳವಾದ ಅಧ್ಯಯನ ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತರಬೇತಿ ಕೇಂದ್ರಗಳಿಗೆ ಹೋಗಲೇಬೇಕಿಲ್ಲ. ಹೋಗದಿದ್ದರೂ ಉತ್ತೀರ್ಣರಾಗಬಹುದು. ಆದರೆ ಅದಕ್ಕೆ ಅಭ್ಯರ್ಥಿಗಳಲ್ಲಿ ಬದ್ಧತೆ, ಸಹನೆ, ಪರಿಶ್ರಮ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳು ಎಂದರೇನು ಎಂಬುದು ಮೊದಲು ಅರ್ಥ ಮಾಡಿಕೊಂಡಿರಬೇಕು ಎಂದರು.
    ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಈ ಬಾರಿ ವಿಶೇಷವಾಗಿ ಜ್ಞಾನ ದಸರಾ ಹಮ್ಮಿಕೊಳ್ಳಲಾಗಿದೆ. ಸಾಂಸ್ಕೃತಿಕ ಕಲಾ ದಸರಾ ಅಡಿ ಕಾರ್ಯಕ್ರಮವನ್ನು ಜೋಡಿಸಿಕೊಳ್ಳಲಾಗಿದೆ. ಶಾರದಾ ಪೂಜೆ ದಿನದಂದು ಜ್ಞಾನದ ದಾಹ ಇಂಗಿಸುವ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷವಾಗಿದೆ. ಒಳ್ಳೆಯ ಕಾರ್ಯದ ಮೂಲಕ ದೇಶ ಕಟ್ಟುವ ಕೆಲಸ ಆಗಬೇಕಿದೆ ಎಂದರು.
    ಕಲಾ ದಸರಾ ಸಮಿತಿ ಅಧ್ಯಕ್ಷೆ ಸುರೇಖಾ ಮುರುಳೀಧರ್ ಅಧ್ಯಕ್ಷತೆ ವಹಿಸಿದ್ದರು. ಎಎಸ್ಪಿ ಅನೀಲ್‌ಕುಮಾರ್ ಭೂಮರಡ್ಡಿ, ಮೇಯರ್ ಎಸ್.ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರ್‌ನಾಯ್ಕ, ಪಾಲಿಕೆ ಸದಸ್ಯರಾದ ಎನ್.ಎಸ್.ಮಂಜುನಾಥ್, ಭಾನುಮತಿ ವಿನೋದಕುಮಾರ್ ಶೇಟ್, ಕಲ್ಪನಾ ರಮೇಶ್, ಸತ್ಯನಾರಾಯಣ ರಾಜು, ಸುವರ್ಣಾ ಶಂಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts