More

    ಶಿವಮೊಗ್ಗ ಡಿಸಿಸಿ ಬ್ಯಾಂಕ್ ದಾಖಲೆಯ ಸಾಧನೆ

    ಶಿವಮೊಗ್ಗ: ಬೆಂಗಳೂರು ವಲಯದಲ್ಲಿ 2021-22ನೇ ಸಾಲಿಗೆ ಶಿವಮೊಗ್ಗ ಡಿಸಿಸಿ (ಜಿಲ್ಲಾ ಸಹಕಾರ ಕೇಂದ್ರ) ಬ್ಯಾಂಕ್ 22.99 ಕೋಟಿ ರೂ. ನಿವ್ವಳ ಲಾಭ ಗಳಿಸುವ ಮೂಲಕ ಅತಿ ಹೆಚ್ಚು ಲಾಭಗಳಿಸಿರುವ ವಲಯದ ಎರಡನೇ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ತಿಳಿಸಿದರು.
    ಬ್ಯಾಂಕ್‌ನ 70 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 2021-22ನೇ ಸಾಲಿನಲ್ಲಿ ಒಟ್ಟು 31.14 ಕೋಟಿ ರೂ. ಲಾಭವಾಗಿತ್ತು. ಇದರಲ್ಲಿ 8.15ಕೋಟಿ ರೂ. ತೆರಿಗೆ ಪಾವತಿಸಲಾಗಿದೆ. 22.99 ಕೋಟಿ ರೂ. ನಿವ್ವಳ ಲಾಭ ಪಡೆದಿದ್ದೇವೆ ಎಂದು ಹೇಳಿದರು.
    ಸೋಮವಾರ ಬ್ಯಾಂಕ್‌ನ 2023ನೇ ಸಾಲಿನ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್‌ನಿಂದ 1.12 ಲಕ್ಷ ರೈತರಿಗೆ ಒಟ್ಟು 1,218 ಕೋಟಿ ರೂ. ಕೃಷಿ ಸಾಲ ನೀಡಲಾಗಿದೆ. ಇದು ಬೆಂಗಳೂರು ವಿಭಾಗದಲ್ಲೇ ಅತಿ ಹೆಚ್ಚು ಮೊತ್ತದ ಸಾಲವಾಗಿದೆ ಎಂದರು.
    ಈ ಸಾಲಿನಲ್ಲಿ 6,546 ಹೊಸ ರೈತ ಸದಸ್ಯರಿಗೆ 69 ಕೋಟಿ ರೂ., ಎಸ್ಸಿ, ಎಸ್ಟಿ ರೈತ ಸದಸ್ಯರಿಗೆ 86.49 ಕೋಟಿ ರೂ. ಅಲ್ಪಾವಧಿ ಬೆಳೆ ಸಾಲ ವಿತರಿಸಲಾಗಿದೆ. ಕೃಷಿ ಹಾಗೂ ಕೃಷಿಯೇತರ ಸಾಲ ಸೇರಿ ಒಟ್ಟು 1,684 ಕೋಟಿ ರೂ. ಸಾಲ ವಿತರಿಸಿದ್ದೇವೆ ಎಂದು ತಿಳಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts