More

    ಶಿವಮೊಗ್ಗದಲ್ಲಿಲ್ಲ ಭಾರತ್ ಜೋಡೋ ಯಾತ್ರೆ: ಎಚ್.ಎಂ.ರೇವಣ್ಣ

    ಶಿವಮೊಗ್ಗ: ಭಾರತ್ ಜೋಡೋ ಯಾತ್ರೆಯು ಶಿವಮೊಗ್ಗ ಜಿಲ್ಲೆಗೆ ಬರುವುದಿಲ್ಲ. ಪಕ್ಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಹಿರಿಯೂರು ಮಾರ್ಗದಲ್ಲಿ ಯಾತ್ರೆ ಸಾಗಲಿದ್ದು, ಸೆ.26 ಮತ್ತು 27ರಂದು ಶಿವಮೊಗ್ಗದಲ್ಲಿ ಭಾರತ್ ಜೋಡೋ ಯಾತ್ರೆಯ ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ಭಾರತ್ ಜೋಡೋ ಯಾತ್ರೆಯ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಎಚ್.ಎಂ.ರೇವಣ್ಣ ಹೇಳಿದರು.
    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿನ ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆಯಿಂದ ಮುಕ್ತಿ ಪಡೆಯಲು, ರಾಜಕೀಯ ಉದ್ವಿಗ್ನತೆ ಸರಿಪಡಿಸುವ ಉದ್ದೇಶದಿಂದ ಎಐಸಿಸಿ ನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,600 ಕಿ.ಮೀ. ಭಾರತ್ ಜೋಡೋ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
    ಮಧು ಬಂಗಾರಪ್ಪ ಅವರಿಗೆ ಅದ್ಧೂರಿ ಸ್ವಾಗತ ನೋಡಿದರೆ ಶಿವಮೊಗ್ಗದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ಎಲ್ಲ ಸ್ಥಾನಗಳನ್ನು ಗೆಲ್ಲುವುದು ಖಚಿತ. ರಾಜ್ಯದಲ್ಲಿ ಶಿವಮೊಗ್ಗ ರಾಜಕೀಯ ಕೇಂದ್ರಸ್ಥಾನ. ಇದು ಸಮಾಜವಾದಿ ನೆಲೆಯಾಗಿದ್ದು, ಅನೇಕ ರಾಜಕೀಯ ದಿಗ್ಗಜರನ್ನು ನೀಡಿದೆ. ಸಾಮಾಜಿಕ ನ್ಯಾಯದ ಕಳಕಳಿ ಹಾಗೂ ಹೋರಾಟಕ್ಕೆ ಒತ್ತು ನೀಡಿದೆ. ಮಧು ಬಂಗಾರಪ್ಪ ಅವರಿಗೆ ರಾಜ್ಯಾದ್ಯಂತ ವರ್ಚಸ್ಸಿದೆ. ಅದನ್ನು ಗಮನಿಸಿದ ಹೈಕಮಾಂಡ್ ಅವರಿಗೆ ಮಹತ್ತರ ಜವಾಬ್ದಾರಿ ನೀಡಿದೆ. ಅವರ ಕಾರ್ಯಕ್ಷೇತ್ರ ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗದೇ ರಾಜ್ಯದೆಲ್ಲೆಡೆ ವಿಸ್ತರಿಸಲಿ ಎಂದು ಆಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts