More

    ಶಿವಾಜಿ ಮಹಾರಾಜರ ಹೋರಾಟ ಪ್ರತಿ ಭಾರತೀಯನಿಗೆ ಮಾದರಿ

    ಹುಬ್ಬಳ್ಳಿ : ಹಿಂದು ಸಮಾಜ ಮತ್ತು ಧರ್ಮ ರಕ್ಷಣೆಗೆ ಛತ್ರಪತಿ ಶಿವಾಜಿ ಮಹಾರಾಜರು ಮಾಡಿದ ಹೋರಾಟ ಪ್ರತಿಯೊಬ್ಬ ಭಾರತೀಯನಿಗೂ ಮಾದರಿ. ಶಿವಾಜಿ ಎಂಬ ಹೆಸರೇ ಯುವಕರಿಗೆ ಆದರ್ಶಪ್ರಾಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ಮರಾಠಾಶ್ರೀ ಭಾರತಿಮಠ ಟ್ರಸ್ಟ್ ವತಿಯಿಂದ ಮರಾಠಾ ಗಲ್ಲಿಯಲ್ಲಿ ಸೋಮವಾರ ಆಯೋಜಿಸಿದ್ದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾಯಕ್ರಮದಲ್ಲಿ ಅವರು ಮಾತನಾಡಿದರು.

    ನೌಕಾಪಡೆಯನ್ನು ಪ್ರಥಮವಾಗಿ ಸ್ಥಾಪಿಸಿದ ಕೀರ್ತಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರವನ್ನು ನೌಕಾಪಡೆಯ ಧ್ವಜದ ಮೇಲೆ ಬಳಸುವಂತೆ ಸೂಚನೆ ನೀಡಿದ್ದಾರೆ ಎಂದು ಸಚಿವ ಜೋಶಿ ತಿಳಿಸಿದರು.

    ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಓದಿದವರು ಜೀವನದಲ್ಲಿ ಎಂದಿಗೂ ಮಾನಸಿಕವಾಗಿ ಕುಗ್ಗುವುದಿಲ್ಲ. ಶಿವಾಜಿ ಮಹಾರಾಜರು ಅತಿ ಸಣ್ಣ ವಯಸ್ಸಿನಲ್ಲಿಯೇ ಹಿಂದವೀ ಸಾಮ್ರಾಜ್ಯ ಸ್ಥಾಪಿಸಿ ಮೊಘಲರು, ನಿಜಾಮರು ಸೇರಿದಂತೆ ಹಲವರನ್ನು ಸದೆ ಬಡಿದಿದ್ದಾರೆ. ಯಾವುದೇ ಸಾಮ್ರಾಜ್ಯ ಇಲ್ಲದಿದ್ದರೂ ಸ್ವಂತ ಬಲದ ಮೇಲೆ ರಾಜರಾಗಿ ಮೆರೆದ ಖ್ಯಾತಿ ಶಿವಾಜಿ ಮಹಾರಾಜರಿಗಿ ಸಲ್ಲುತ್ತದೆ. ಸ್ವರಾಜ್ಯ ಎಂಬ ಪದ ಹುಟ್ಟು ಹಾಕಿ ನ್ಯಾಯ, ಧರ್ಮ ಪರಿಪಾಲನೆಯ ಜತೆಗೆ ಸಚ್ಚಾರಿತ್ರ್ಯ ಉಳ್ಳ ಶಿವಾಜಿ ಮಹಾರಾಜರನ್ನು ಸಮರ್ಥ ರಾಮದಾಸ ಸ್ವಾಮೀಜಿಯೂ ಕೊಂಡಾಡಿದ್ದಾರೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸಂತೋಷ ಲಾಡ್ ಮಾತನಾಡಿ, ಶಿವಾಜಿ ಮಹಾರಾಜರು ಯಾವತ್ತೂ ಮುಸ್ಲಿಮರನ್ನು ವಿರೋಧಿಸಿದವರಲ್ಲ. ಆದರೆ, ಕೆಲವರು ಶಿವಾಜಿ ಮಹಾರಾಜರು ಮುಸ್ಲಿಂರ ವಿರೋಧಿಯಾಗಿದ್ದರು ಎಂಬಂತೆ ತಪ್ಪಾಗಿ ಬಿಂಬಿಸುತ್ತಿದ್ದಾರೆ ಎಂದು ತಿಳಿಸಿದರು.

    ನಂತರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಮರಾಠಾಗಲ್ಲಿಯಿಂದ ಹೊರಟ ಭೃಹತ್ ಮೆರವಣಿಗೆ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ, ಮರಳಿ ಮರಾಠಾಗಲ್ಲಿ ತಲುಪಿತು.

    ಮರಾಠಾ ಸಮಾಜದ ಅಧ್ಯಕ್ಷ ಸುನೀಲ ದಳವಿ, ಪ್ರಮುಖರಾದ ಶಿವಕುಮಾರ ಸಿಂಧೆ, ಅಪ್ಪಾಸಾಹೇಬ ಚೌಹಾನ್, ಅರುಣ ಶಿರ್ಕೆ, ರಾಮಚಂದ್ರ ಜಾಧವ, ಶ್ಯಾಮರಾಜ ಶಂಧೆ, ಅರವಿಂದ ಮಾನೆ, ನಾರಾಯಣ ವೈದ್ಯ, ಸಚಿನ ಕಾಮಕರ, ಸಂಬಾಜಿ ದಳವಿ, ದಯಾನಂದ ಚೌಹಾನ್, ವಿನೋದ ಪಡತರೆ, ಶಿವಾಜಿ ವೈದ್ಯ, ಶಶಿಕಾಂತ ಗಾಯಕವಾಡ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts