More

    ಹಿಂದು ಸಾಮ್ರಾಜ್ಯದ ದೊರೆ ಶಿವಾಜಿ ಮಹಾರಾಜ್

    ವಿಜಯವಾಣಿ ಸುದ್ದಿಜಾಲ ಹೊಸಕೋಟೆ
    ಹನ್ನೆರಡನೇ ವಯಸ್ಸಿಗೆ ಹಿಂದು ಸಾಮ್ರಾಜ್ಯದ ಒಗ್ಗೂಡಿಸುವಿಕೆ ಹಾಗೂ ಮರು ಸ್ಥಾಪನೆಗೆ ತಯಾರಿ ಮಾಡಿಕೊಂಡು ಧರ್ಮ ಸ್ಥಾಪನೆಗೆ ಒತ್ತು ನೀಡಿದ ದೊರೆ ಛತ್ರಪತಿ ಶಿವಾಜಿ ಎಂದು ತಹಸೀಲ್ದಾರ್ ಎಂ.ವಿಜಯಕುಮಾರ್ ಹೇಳಿದರು.
    ನಗರದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ಮರಾಠ ಸಂಘಟನೆಯಿಂದ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿವಾಜಿ ತನ್ನ 16ನೇ ವಯಸ್ಸಿನಲ್ಲಿ ಗಿರಿಜನರ ಶಕ್ತಿಯನ್ನು ಕಂಡು ಅವರನ್ನು ತಮ್ಮೊಟ್ಟಿಗೆ ಸೇರಿಸಿಕೊಂಡು ಹಲವು ಕೋಟೆಗಳನ್ನು ವಶಪಡಿಸಿಕೊಂಡು ಅಖಂಡ ಹಿಂದು ರಾಷ್ಟ್ರ ಕಲ್ಪನೆಗೆ ಮುಂದಾಗಿದ್ದರು. ತನ್ನ ತಂಡದೊಂದಿಗೆ ದಂಡೆತ್ತಿ ಬಂದು ರಾಜ್ಯಗಳನ್ನು ವಶಪಡಿಸಿಕೊಳ್ಳುತಿದ್ದ ಸುಲ್ತಾನರ ವಿರುದ್ಧ ಹೋರಾಟ ಮಾಡಿದ ಕೀರ್ತಿ ಶಿವಾಜಿ ಅವರದ್ದಾಗಿದೆ. ಶಿವಾಜಿ ತನ್ನ ಬಾಲ್ಯದ 12 ವರ್ಷ ಬೆಂಗಳೂರಿನಲ್ಲೇ ಕಳೆದಿದ್ದು ಹೆಮ್ಮೆಯ ವಿಚಾರ ಎಂದರು.
    ಮುಖಂಡ ವೆಂಕೋಬರಾವ್ ಮಾತನಾಡಿ, ಹಿಂದು ರಾಷ್ಟ್ರವನ್ನು ಹಾಗೂ ಇಲ್ಲಿಯ ಸಂಸ್ಕೃತಿಯನ್ನು ಹಾಳು ಮಾಡುವ ಸುಲ್ತಾನರ ವಿರುದ್ಧ ತನ್ನದೇ ಸೈನ್ಯ ಕಟ್ಟಿಕೊಂಡು ಹೋರಟ ಮಾಡಿದ ಮಹಾನ್ ನಾಯಕ ಶಿವಾಜಿ ಎಂದರು.
    ನಗರದಲ್ಲಿರುವ ವಿಠ್ಠಲ ದೇವಾಲಯ ಮತ್ತು ಕಾಂಪೌಂಡ್ ಶೀತಲಗೊಂಡಿದ್ದು ಮುಜರಾಯಿ ಇಲಾಖೆಯಿಂದ ಪುನರ್ ನಿರ್ಮಾಣ ಕಾಮಗಾರಿ ಹಾಗೂ ನಗರದಲ್ಲಿ ಶಿವಾಜಿ ಪುತ್ಥಳಿ ಸ್ಥಾಪನೆಗೆ ಮನವಿ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts