More

    ಹಿಂದವಿ ಸ್ವರಾಜ್ಯ ಸ್ಥಾಪಿಸಿದ ಶಿವಾಜಿ

    ಹಳಿಯಾಳ: ಯಾರು ಇತಿಹಾಸವನ್ನು ಅರ್ಥ ಮಾಡಿಕೊಳ್ಳುತ್ತಾರೋ ಅವರು ಉತ್ತಮ ಭವಿಷ್ಯ ನಿರ್ಮಾಣ ಮಾಡಲು ಸಾಧ್ಯ ಎಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಹೇಳಿದರು.

    ಪಟ್ಟಣದ ಮರಾಠಾ ಭವನದಲ್ಲಿ ತಾಲೂಕಿನ ವಾರಕರಿ, ವಿವಿಧ ಸಂಘ-ಸಂಸ್ಥೆಗಳು ಹಾಗೂ ಗುರುಪೂರ್ಣಿಮೆ ಸೇವಾ ಸಮಿತಿ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಶ್ರೀ ಛತ್ರಪತಿ ಶಿವಾಜಿ ಮಹಾರಾಜರು ತಮಗಾಗಿ ಸಾಮ್ರಾಜ್ಯ ಸ್ಥಾಪಿಸದೆ, ರಾಷ್ಟ್ರ ಮತ್ತು ಧರ್ಮಕ್ಕಾಗಿ ಹಿಂದವಿ ಸ್ವರಾಜ್ಯ ಸ್ಥಾಪನೆ ಮಾಡಿದ ಅಜರಾಮರ ವಿಶ್ವನಾಯಕರು ಎಂದು ಬಣ್ಣಿಸಿದರು.

    ನಮ್ಮ ಸಂಸ್ಕೃತಿಯನ್ನು ನಾವು ಎಂದಿಗೂ ಮರೆಯಬಾರದು. ನಮ್ಮ ಸನಾತನ ಪರಂಪರೆ ಅತಿ ಶ್ರೇಷ್ಠವಾದದ್ದಾಗಿದೆ ಎಂದರು.

    ಗೋಸಾಯಿ ಮಹಾಸಂಸ್ಥಾನ ಮಠ, ಭವಾನಿ ದತ್ತ ಪೀಠ ಗವಿಪುರಂ ಬೆಂಗಳೂರಿನ ವೇದಾಂತಚಾರ್ಯ ಜಗದ್ಗುರು ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಮಾತನಾಡಿ ‘ದೇಶ ಸುಧಾರಣೆಯಾಗಬೇಕಾದರೆ ರಾಜನೀತಿ, ಜೀವನಶೈಲಿ ಸುಧಾರಣೆಯಾಗಬೇಕು. ಅದರೊಂದಿಗೆ ನಾಯಕರಾದವರು ಎಲ್ಲಿಯವರೆಗೆ ಸತ್ಯ ಒಪ್ಪಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಸುಧಾರಣೆ ಸಾಧ್ಯವಿಲ್ಲ’ ಎಂದರು.

    ಮಠದ ವತಿಯಿಂದ ಹಳಿಯಾಳ ತಾಲೂಕಿನ ಹವಗಿ ಗ್ರಾಮದಲ್ಲಿರುವ 3 ಎಕರೆ ಜಮೀನಿನಲ್ಲಿ ದೇವಸ್ಥಾನ, 1000 ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ, ಗುರುಕುಲ ಮಾದರಿ ಶಾಲೆ, ಆಧುನಿಕ ಗ್ರಂಥಾಲಯ, ಆರೋಗ್ಯ ಕೇಂದ್ರ, ಗೋಶಾಲೆ, ಯಾತ್ರಿ ನಿವಾಸ ಹಾಗೂ ಸಮುದಾಯ ಭವನ ನಿರ್ಮಾಣ ಹಾಗೂ ಇತರ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಆ ಮೂಲಕ ಆಧ್ಯಾತ್ಮಿಕ ಶೈಕ್ಷಣಿಕ, ಸಾಂಸ್ಕೃತಿಕ ಏಳಿಗೆಗಾಗಿ ಎಲ್ಲ ಜನಾಂಗಕ್ಕೆ ಅನುಕೂಲವಾಗುವಂತೆ ಅಭಿವೃದ್ಧಿ ಕಾರ್ಯ ಮಾಡಲು ರೂಪುರೇಷೆ ತಯಾರಿಸಿದ್ದು ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆರ್ಥಿಕ ನೆರವಿನ ಅವಶ್ಯಕತೆ ಇದೆ ಎಂದು ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವರಿಕೆ ಮಾಡಿ ಲಿಖಿತ ಮನವಿ ಸಲ್ಲಿಸಿದರು.

    ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಸ್ವಾಮೀಜಿಯವರು ಕೈಗೊಳ್ಳುವ ಎಲ್ಲ ಸಮಾಜಮುಖಿ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು ಸಹಾಯ ಸಹಕಾರ ಮಾಡುವ ಭರವಸೆ ನೀಡಿದರು.

    ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ, ಡಾ. ಶೇಖರ ಮಾನೆ, ಮಂಗೇಶ ದೇಶಪಾಂಡೆ, ಸುಭಾಷ ಕೋರ್ವೆಕರ, ಮಂಗಲಾ ಕಶೀಲಕರ, ಸುಮಂಗಲಾ ಅಂಗಡಿ, ಕಮಲೇಶ ಪಡತಾರೆ, ನಾರಾಯಣ ಟೋಸುರ, ಎನ್.ಎಸ್. ಜೀವೊಜಿ, ಚೂಡಪ್ಪ ಬೋಬಾಟಿ, ಇತರರು ವೇದಿಕೆಯಲ್ಲಿದ್ದರು. ಕೆಕೆಎಂಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಫಾಕ್ರೆ ಹಾಗೂ ಭಾರತಿ ನಲವಡೆ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts