More

    ಗಿರಿಜಾ ಕಲ್ಯಾಣೋತ್ಸವಕ್ಕೆ ಸಜ್ಜುಗೊಳ್ಳದ ಶಿವಗಂಗೆ, ಮುಜರಾಯಿ ಇಲಾಖೆ ವಿರುದ್ಧ ಜನರ ಆಕ್ರೋಶ 14ಕ್ಕೆ ನಿಗದಿಯಾಗಿರುವ ಕಾರ್ಯಕ್ರಮ

    ದಾಬಸ್‌ಪೇಟೆ: ಶಿವಗಂಗೆಯಲ್ಲಿ ಜ.14 ರಂದು ನಡೆಯುವ ಗಿರಿಜಾ ಕಲ್ಯಾಣೋತ್ಸವಕ್ಕೆ ಮುಜರಾಯಿ ಇಲಾಖೆ ಸಿದ್ಧತೆಗೆ ಮುಂದಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ಭಕ್ತರ ವಾಹನ ನಿಲುಗಡೆಗೆ ಏರ್ಪಾಡು ಮಾಡಲಾಗಿಲ್ಲ. ಈ ಹಿಂದೆ ಹಿಪ್ಪೆ ತೋಪಿನಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಇತ್ತು. ಈಗ ಈ ಪ್ರದೇಶದಲ್ಲಿ ಸಾರ್ವಜನಿಕರು ಕಲ್ಲು, ಮಣ್ಣು ಮತ್ತಿತರ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸುರಿದಿದ್ದಾರೆ. ಇದನ್ನು ತೆರವುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸಾವಿರಾರು ಜನ ಸೇರುವ ಕಾರ್ಯಕ್ರಮ ಎರಡ್ಮೂರು ದಿನಗಳಿದ್ದರೂ ಸಿದ್ಧತೆಗೆ ಮುಂದಾಗದ ಅಧಿಕಾರಿಗಳ ಬೇಜವಾಬ್ದಾರಿತನ ಜನರ ಆಕ್ರೋಶಕ್ಕೆ ಎಡೆಮಾಡಿದೆ.

    ತೋಪಿನ ಪಕ್ಕದಲ್ಲೇ ಮರಿಯಮ್ಮ ದೇವಸ್ಥಾನ ಇದೆ. ಇಲ್ಲಿ ಕಟ್ಟಡ ಸಾಮಗ್ರಿ ಸುರಿದಿರುವುದರಿಂದ, ಶಿವಗಂಗೆಯ ಅಂದವೇ ಹಾಳಾಗಿದೆ ಎಂದು ಶಿವಗಂಗೆ ಗ್ರಾಪಂ ಮಾಜಿ ಸದಸ್ಯ ಎಸ್.ಟಿ.ಸಿದ್ದರಾಜು ಬೇಸರಿಸಿದ್ದಾರೆ.

    ನಾವು ಶಿವಗಂಗೆಗೆ ಬಂದಾಗ ಮರಿಯಮ್ಮ ದೇವಸ್ಥಾನದಲ್ಲಿ ದರ್ಶನ ಪಡೆದು, ದೇಗುಲದ ಹಿಂಬದಿಯಲ್ಲಿ ಊಟ ಮಾಡುತ್ತಿದ್ದೆವು. ಈಗ ಅಲ್ಲಿ ಕಟ್ಟಡ ಸಾಮಗ್ರಿಗಳನ್ನು ಸುರಿಯಲಾಗಿದೆ. ಇದರಿಂದ, ಊಟ ಮಾಡಲು ಸ್ಥಳ ಇಲ್ಲವಾಗಿದೆ. ಇನ್ನಾದರೂ ಗ್ರಾಪಂ ಅಥವಾ ಮುಜರಾಯಿ ಇಲಾಖೆ ಅಧಿಕಾರಿಗಳು ಅದನ್ನು ತೆರವುಗೊಳಿಸಲಿ.
    ಮಹೇಶ್, ಭಕ್ತ

    ಹಿಪ್ಪೆ ತೋಪಿನಲ್ಲಿ ಸುರಿದಿರುವ ಕಟ್ಟಡ ಸಾಮಗ್ರಿಗಳನ್ನು ಆದಷ್ಟು ಬೇಗ ತೆರವುಗೊಳಿಸಲು ಕಟ್ಟಡದ ಮಾಲೀಕರಿಗೆ ಸೂಚಿಸಲಾಗಿದೆ. ಇಲ್ಲವಾದರೆ, ನಾವೇ ಅದನ್ನು ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
    ಕೆ.ಕೆ.ರಮ್ಯಾ, ಮುಜರಾಯಿ ಕಾರ್ಯನಿರ್ವಹಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts