More

    ವಕೀಲರ ಕಿರುಕುಳದಿಂದ ಶಿರಸ್ತೆದಾರ ಆತ್ಮಹತ್ಯೆ

    ಹಿರೇಕೆರೂರ: ವಕೀಲರ ಮಾನಸಿಕ ಕಿರುಕುಳ ಸಹಿಸಲಾರದೆ ನ್ಯಾಯಾಲಯದ ಶಿರಸ್ತೆದಾರರೊಬ್ಬರು ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡ ಆತ್ಮಹತ್ಯೆಗೆ ಶರಣಾದ ಘಟನೆ ಪಟ್ಟಣದ ನೌಕರರ ಭವನದಲ್ಲಿ ಭಾನುವಾರ ರಾತ್ರಿ ನಡೆದಿದೆ.

    ಬಾದಾಮಿ ತಾಲೂಕಿನ ಕಟಗೇರೆ ಗ್ರಾಮದ, ಹಿರೇಕೆರೂರಿನ ತಂಬಾಕದ ನಗರದ ನಿವಾಸಿ, ಮಲ್ಲಿಕಾರ್ಜುನ ಶಂಕ್ರಪ್ಪ ಭರಗಿ (42) ಆತ್ಮಹತ್ಯೆ ಮಾಡಿಕೊಂಡ ಶಿರಸ್ತೆದಾರ.

    ಸೆ. 18 ರಂದು ಮಧ್ಯಾಹ್ನ 2.15ರ ಸುಮಾರಿಗೆ ತನ್ನ ಮನೆಯವರಿಗೆ ಧ್ಯಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಮಲ್ಲಿಕಾರ್ಜುನ, ರಾತ್ರಿ 7.15ರ ಸುಮಾರಿಗೆ ನ್ಯಾಯಾಲಯದ ಪಕ್ಕದಲ್ಲಿರುವ ನೌಕರರ ಭವನದ ಕೊಠಡಿಯಲ್ಲಿನ ಫ್ಯಾನ್​ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ವಕೀಲರಾದ ಹಸೀನಾ ಮೂಲಿಮನಿ ಅವರು 4 ವರ್ಷಗಳಿಂದ ದೂರವಾಣಿ ಕರೆ ಮಾಡಿ ಮೆಸೇಜ್ ಮಾಡಿ, ಫೋಟೋ ಕಳುಹಿಸಿ, ಮಾನಸಿಕ ಚಿತ್ರ ಹಿಂಸೆ ನೀಡುತ್ತಾ ಬಂದಿದ್ದಾರೆ. ವಕೀಲರಾದ ಕೆಂಚಪ್ಪ ಕುರಿಯವರ, ಜಿ.ವಿ. ಕುಲಕರ್ಣಿ, ವಾಸೀಂ ಈ ಮೂವರು ನ್ಯಾಯಾಲಯದಲ್ಲಿ ಮಾನಸಿಕವಾಗಿ ನೊಂದುಕೊಳ್ಳುವಂತೆ ಮಾತನಾಡುತ್ತಿದ್ದರು. ಇದರಿಂದ ಮನನೊಂದು ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ಆರೋಪಿತ 4 ವಕೀಲರು ಕಾರಣರು. ಅವರಿಗೆ ಜಯವಾಗಲಿ ಎಂದು ನನ್ನ ಪತಿ ತಮ್ಮ ಮೊಬೈಲ್ ವಾಟ್ಸ್​ಆಪ್​ನಲ್ಲಿ ಸ್ಟೇಟಸ್ ಹಾಕಿಕೊಂಡು ನೇಣಿಗೆ ಶರಣಾಗಿದ್ದಾರೆ. ನನ್ನ ಪತಿ ಸಾವಿಗೆ ಈ ನಾಲ್ವರು ಆರೋಪಿಗಳು ಕಾರಣ ಎಂದು ಮೃತನ ಪತ್ನಿ ಭಾರತಿ ಪಟ್ಟಣದ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts