More

    ಶಿರಾ, ಆರ್​ಆರ್​ ನಗರ ಉಪ ಚುನಾವಣೆಯಲ್ಲಿ ಗೆಲುವು ಯಾರಿಗೆ? ಇಲ್ಲಿದೆ ಕಾಂಗ್ರೆಸ್​ ಇಂಟರ್ನಲ್​ ರಿಪೋರ್ಟ್​

    ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಸಮರ ಕಾವೇರಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
    ಮೂರು ಪಕ್ಷಕ್ಕೂ ಈ ಚುನಾವಣೆಯಲ್ಲಿನ ಗೆಲುವು ಪ್ರತಿಷ್ಠೆಯಾಗಿದ್ದು, ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿವೆ. ಈ ನಡುವೆ ಕಾಂಗ್ರೆಸ್​ ಇಟರ್ನಲ್​ ರಿಪೋರ್ಟ್​ಗೆ ರಾಜ್ಯದ ಕೈ ನಾಯಕರು ಶಾಕ್ ಆಗಿದ್ದಾರೆ.

    ಎರಡು ಕೇತ್ರದ ಉಭಯ ಚುನಾವಣೆಗಳಲ್ಲಿ ಕಾಂಗ್ರೆಸ್​ ಪಾಲಿಗೆ ಒಂದು ಪ್ಲಸ್, ಒಂದು ಮೈನಸ್ ಆಗಲಿದೆ ಎಂದು ಪಕ್ಷದ ಇಂಟರ್ನಲ್​ ವರದಿ ಹೇಳಿದೆ. ಶಿರಾದಲ್ಲಿ ಕಾಂಗ್ರೆಸ್​ಗೆ ಪ್ಲಸ್, ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್​ಗೆ ಮೈನಸ್ ಇದೆ!

    ಆರ್​ ಆರ್​ ನಗರ ಕ್ಷೇತ್ರದಲ್ಲಿ ಸ್ಥಳೀಯ ಕಾರ್ಯಕರ್ತರ ಕೊರತೆಯೇ ಕಾಂಗ್ರೆಸ್​ಗೆ ಹಿನ್ನಡೆ ಆಗಲಿದೆ. ಮುನಿರತ್ನ ಹಿಂದೆಯೇ ಬಿಜೆಪಿಯತ್ತ ಸ್ಥಳೀಯ ಕಾಂಗ್ರೆಸ್ ಮುಖಂಡರು ಮುಖಮಾಡಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಗುರುವಾರ ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯಿಸಿದ ಡಿಕೆಶಿ, ‘ಎರಡೂ ಕ್ಷೇತ್ರದಲ್ಲೂ ಗೆಲುವು ನಮ್ಮದೆ’ ಎಂದರು.

    ಇನ್ನು ಬುಧವಾರ ಶಿರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿಕೆಶಿ, ಶಿರಾ ಉಪಸಮರದಲ್ಲಿ ಮಾಧ್ಯಮಗಳೇ ಜಯಚಂದ್ರ ಮೊದಲನೇ ಸ್ಥಾನದಲ್ಲಿದ್ದಾರೆ ಎಂದು ಬಿಂಬಿಸುತ್ತಿವೆ, ಅದರ ಅರ್ಥ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಅಲ್ಲವೇ. ನಮ್ಮಲ್ಲಿಯೂ ಗುಪ್ತಚರ ವರದಿ ಇದೆ. ಅದರಂತೆ ಚಲಾವಣೆಗೊಳ್ಳುವ ಮತಗಳಲ್ಲಿ ಶೇ.44ಕ್ಕೂ ಹೆಚ್ಚು ಮತಗಳನ್ನು ಕಾಂಗ್ರೆಸ್​ ಗಳಿಸಲಿದೆ. ಉಳಿದೆರಡೂ ಪಕ್ಷಗಳು ಶೇ.22 ಮತ್ತು 21 ಮತಗಳಿಸಲಿವೆ ಎಂದಿದ್ದರು.

    ‘ಧಮ್ಕಿಗಿಮ್ಕಿ ಹಾಕಿದ್ರೆ ಪೊಲೀಸ್​ ಸ್ಟೇಷನ್​ ಮುಂದೆಯೇ ಚುನಾವಣೆ! ಮುನಿರತ್ನಗೆ ಇದು ಕೊನೇ ವಾರ್ನಿಂಗ್​’

    ಯಜಮಾನರನ್ನು ಕಳೆದುಕೊಂಡು ತುಂಬಾ ಸಂಕಟದಲ್ಲಿದ್ದೇನೆ, ನನ್ನನ್ನು ನಿಮ್ಮ ಮನೆ ಮಗಳೆಂದು ಭಾವಿಸಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts