More

    ಸತ್ಯನಾರಾಯಣ ಸತ್ತಾಯಿತು, ಜಯಚಂದ್ರಾನು ಸಾಯ್ತಾನೆ !

    ತುಮಕೂರು: ಕಳೆದ ಬಾರಿ ಅಭಿವೃದ್ಧಿ ಕಾರ್ಯದ ಹೊರತಾಗಿಯೂ ಅನುಕಂಪದ ಮುಂದೆ ತಲೆಬಾಗಿದ್ದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಈ ಬಾರಿ ಬೈಎಲೆಕ್ಷನ್​ನಲ್ಲಿ ವೈರಾಗ್ಯದ ಮಾತುಗಳನ್ನಾಡುತ್ತಿದ್ದಾರೆ.

    ಕಾಲಗರ್ಭದಲ್ಲಿ ಎಲ್ಲರೂ ಸೇರಲೇ ಬೇಕು. ಇವತ್ತು ಸತ್ಯನಾರಾಯಣ ಸತ್ತಿದ್ದಾನೆ. ಜಯಚಂದ್ರನು ಸಾಯಲೇಬೇಕು. ಒಂದಲ್ಲ ಒಂದು ದಿನ ಎಲ್ಲರೂ ಸಾಯಲೇಬೇಕು ಎಂದು ಜಯಚಂದ್ರ ಹೇಳಿರುವ ಮಾತುಗಳು ಎಲ್ಲರ ಹುಬ್ಬೇರುವಂತೆ ಮಾಡಿದೆ.

    ಸತ್ಯನಾರಾಯಣ ಸತ್ತಾಯಿತು, ಜಯಚಂದ್ರಾನು ಸಾಯ್ತಾನೆ !ಶಿರಾ ತಾಲೂಕಿನ ಲಕ್ಕನಹಳ್ಳಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ‘ನಾನು ಮಾಡಿರುವ ಕೆಲಸ ಚಿರಸ್ಥಾಯಿಯಾಗಿ ಉಳಿಯಬೇಕು. ಜಯಚಂದ್ರ ಜನರ‌ ಮನಸಿನಲ್ಲಿ ಶಾಶ್ವತವಾಗಿ ಇರುತ್ತಾನೆ’ ಎಂದು ಜಯಚಂದ್ರ ಹೇಳಿರುವುದು ಸಾಕಷ್ಟು ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ.

    ಕಳೆದ ಚುನಾವಣೆಯಲ್ಲಿ ಸತ್ಯನಾರಾಯಣ, ‘ಇದು ನನ್ನ ಕೊನೆಯ ಚುನಾವಣೆ’ ಅಂತ ಮತದಾರರ ಅನುಕಂಪ ಗಿಟ್ಟಿಸಿಕೊಂಡಿದ್ದನ್ನು ಸ್ಮರಿಸಬಹುದು.

    ಸತ್ಯಣ್ಣ ಸಾವಿನಿಂದ ತೆರವಾದ ಎಂಎಲ್ಎ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್​ನಿಂದ ಟಿ.ಬಿ.ಜಯಚಂದ್ರ ಸ್ಪರ್ಧಿಸಿದ್ದಾರೆ. ಜೆಡಿಎಸ್​ನಿಂದ ದಿ. ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ, ಬಿಜೆಪಿಯಿಂದ ರಾಜೇಶ್​ಗೌಡ ಅಖಾಡಕ್ಕಿಳಿದಿದ್ದಾರೆ. ಈಗಾಗಲೇ ನಾಮಪತ್ರ ಸಲ್ಲಿರುವ ಜಯಚಂದ್ರ, ಗುರುವಾರ ಮತ್ತೊಂದು ಸೆಟ್​ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಡಾ.ಸಿ.ಎಂ.ರಾಜೇಶ್ ಗೌಡ ಬುಧವಾರ ಬೆಳಗ್ಗೆ ನಾಮಪತ್ರ ಸಲ್ಲಿಸಿದ್ದಾರೆ.

    ಅಮ್ಮಾಜಮ್ಮಗೆ ಕರೊನಾ ತಗುಲಿತ್ತು. ಹಾಗಾಗಿ ಅವರ ಪರವಾಗಿ ಸೂಚಕರು ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸುವರು. ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಮೆರವಣಿಗೆ, ಜೆಡಿಎಸ್ ಶಕ್ತಿಪ್ರದರ್ಶನ ನಡೆದಿದೆ.

    12 ಕೋಟಿ ಸಂಪತ್ತಿನ ಒಡತಿ ಕುಸುಮಾ, ಅಫಿಡವಿಟ್​ನಲ್ಲಿ ಪತಿಯ ಹೆಸರನ್ನು ಪ್ರಸ್ತಾಪಿಸಿಯೇ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts