More

    ಜಯಚಂದ್ರ ಕೇಳಿದ್ದನ್ನ ಡಿಕೆಶಿ ಕೊಡ್ಲಿಲ್ವಂತೆ… ಅದಕ್ಕೆ ಶಿರಾದಲ್ಲಿ ಕಾಂಗ್ರೆಸ್​ ಸೋಲ್ತಂತೆ!

    ಬೆಂಗಳೂರು: ಉಪಸಮರದಲ್ಲಿ ಕಾಂಗ್ರೆಸ್​ ಹೀನಾಯ ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಎಂದಿದ್ದರು. ಶಿರಾದಲ್ಲಿ ನಮ್ಮ ಲೆಕ್ಕಾಚಾರ ತಪ್ಪಾಗಿದೆ. ಅಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ನಮ್ಮ ಪಕ್ಷದ ಎಲ್ಲ ಮುಖಂಡರೂ ನಿರೀಕ್ಷಿಸಿದ್ದೆವು. ಅಲ್ಲಿ ಬಿಜೆಪಿಗೆ ಹೊಸದಾಗಿ ಅಷ್ಟು ಮತ ಹೋಗಿರುವುದು ಅಚ್ಚರಿ ತಂದಿದೆ ಎಂದೂ ಬೇಸರ ವ್ಯಕ್ತಪಡಿಸಿದ್ದರು. ಆದರೆ. ಶಿರಾದಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷದ ಅಭ್ಯರ್ಥಿಯಾಗಿದ್ದ ಟಿ.ಬಿ.ಜಯಚಂದ್ರರೇ ಕಾರಣ ಎಂದು ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಮತದಾನ ಸಮೀಪಿಸುತ್ತಿದ್ದಂತೆ ಕೊನೆಯ ಎರಡು ದಿನ ಜಯಚಂದ್ರ ಹಣ ಖರ್ಚು ಮಾಡಿರಲಿಲ್ಲ. ಹಣ ಕೊಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದರು. ಇದಕ್ಕೆ ಸೊಪ್ಪು ಹಾಕದ ಡಿಕೆಶಿ, ‘ನೀವು ಈ ಹಿಂದೆ ಸಚಿವರಾಗಿದ್ರಿ. ನೀವೆ ಹಣ ಖರ್ಚು ಮಾಡಿ. ನಮಗೆ ಆರ್ ಆರ್ ನಗರ ಪ್ರತಿಷ್ಠೆಯಾಗಿದೆ’ ಎಂದು ಜಯಚಂದ್ರಗೆ ಹೇಳಿದ್ದರಂತೆ.

    ಶಿರಾದಲ್ಲಿ ದುಡ್ಡು ಖರ್ಚು ಮಾಡದೆ ಜಯಚಂದ್ರ ಸೋತರು. ಆರ್ ಆರ್ ನಗರದಲ್ಲಿ ಏಕವ್ಯಕ್ತಿ ನಿರ್ಧಾರಗಳಿಂದ ಕಾಂಗ್ರೆಸ್​ ಸೋಲು ಕಂಡಿದೆ ಎಂದು ಕಾರ್ಯಕರ್ತರಲ್ಲಿ ಅಸಮಾಧಾನ ಸ್ಫೋಟಗೊಂಡಿದೆ ಎನ್ನಲಾಗಿದೆ.

    ಇದರ ಜತೆಗೆ ಶಿರಾದಲ್ಲಿ ಸಾಂಪ್ರದಾಯಿಕ ಮತಗಳು ಕಾಂಗ್ರೆಸ್​ಗೆ ಕೈ ಕೊಟ್ಟವು. ಜೆಡಿಎಸ್-ಕಾಂಗ್ರೆಸ್ ನಡುವಿನ ವಿಭಜನೆ ಬಿಜೆಪಿಯ ರಾಜೇಶ್ ಗೌಡಗೆ ಪ್ಲಸ್ ಆಯಿತು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. (ದಿಗ್ವಿಜಯ ನ್ಯೂಸ್​)

    ಆರ್​ ಆರ್​ ನಗರ, ಶಿರಾದಲ್ಲಿ ಕಾಂಗ್ರೆಸ್​ ಸೋಲಿಗೆ ಪ್ರಮುಖ ಕಾರಣ ಇಲ್ಲಿದೆ…

    ನೀವು ಹೇಳಿದ್ರೆ ಆಗುತ್ತೆ, ಅಧ್ಯಕ್ಷ ಸ್ಥಾನ ಕೊಡಿಸಿ ಸರ್​… ಎನ್ನುತ್ತ ಸಿದ್ದು ಕಾಲಿಗೆ ಬಿದ್ದ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts