More

    ಶಿಕ್ಷಕರಿಂದ ಸದೃಢ ಸಮಾಜ ನಿರ್ಮಾಣ

    ಶಿವಮೊಗ್ಗ: ಶಿಕ್ಷಕರು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ವಿದ್ಯಾರ್ಥಿಗಳನ್ನು ಸಂಸ್ಕಾರಯುತ ಪ್ರಜೆಗಳಾಗಿ ರೂಪಿಸುತ್ತಿದ್ದಾರೆ. ಶಿಕ್ಷಕರಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಸರ್ಜಿ ಫೌಂಡೇಶನ್ ಅಧ್ಯಕ್ಷ ಡಾ.ಧನಂಜಯ ಸರ್ಜಿ ಹೇಳಿದರು.
    ಕಾಶಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ರೋಟರಿ ಕ್ಲಬ್ ಹಾಗೂ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒತ್ತಡದ ಜೀವನಶೈಲಿಯಲ್ಲಿ ಶಿಕ್ಷಕರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಲು ಸಾಧ್ಯ ಆಗುತ್ತಿಲ್ಲ. 40 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದರು.
    ಆರೋಗ್ಯ ಶಿಬಿರದಲ್ಲಿ ಭಾಗವಹಿಸಿದ ಎಲ್ಲ ಶಿಕ್ಷಕರಿಗೂ ಸರ್ಜಿ ಆಸ್ಪತ್ರೆಯಿಂದ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ವಿಶೇಷ ರಿಯಾಯಿತಿ ನೀಡಲಾಗುವುದು. ಶಿಕ್ಷಕರು ಒತ್ತಡಮುಕ್ತ ಜೀವನಶೈಲಿ ಹಾಗೂ ಗುಣಮಟ್ಟದ ಆಹಾರ ಸೇವನೆ ಪಾಲಿಸಬೇಕು ಎಂದರು.
    ರೋಟರಿ ವಲಯ 10ರ ಸಹಾಯಕ ಗೌರ‌್ನರ್ ಸುನೀತಾ ಶ್ರೀಧರ್ ಮಾತನಾಡಿ, ಎಲ್ಲದಕ್ಕಿಂತಲೂ ಆರೋಗ್ಯವೆಂಬ ಸಂಪತ್ತು ಬಹಳ ಮುಖ್ಯ. ಶಿಕ್ಷಕರು ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.
    ಸಮುದಾಯ ಸೇವೆಗಳ ನಿರ್ದೇಶಕ ಡಾ.ಎ.ಸಿ.ಶ್ರೀನಿವಾಸ್, ಮುಖ್ಯ ಶಿಕ್ಷಕ ಹಾಲಾನಾಯ್ಕ, ರೋಟರಿ ವಲಯ ಮಾಜಿ ಸಹಾಯಕ ಗೌರ‌್ನರ್ ಜಿ.ವಿಜಯಕುಮಾರ್, ಕಿಶನ್ ನಾರಾಯಣ, ಸಿ.ರಾಜು, ಮುಷ್ತಾಕ್, ಮಂಜುಳಾ ರಾಜು, ಚೇತನ್ ಕುಮಾರ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಜಿ.ರವಿ, ಸರ್ಜಿ ಆಸ್ಪತ್ರೆಯ ಡಾ. ಚಂದುಶ್ರೀ, ಶೂನ್ಯ ಸಂಪದ್ ಮುಂತಾದವರಿದ್ದರು.
    ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ವತಿಯಿಂದ ರೋಟರಿ ಸದಸ್ಯರ ಸಹಾಯದಿಂದ ಕಾಶಿಪುರ ಶಾಲೆಗೆ 20 ಚೇರ್ ಹಾಗೂ ಟೇಬಲ್‌ಗಳನ್ನು ದೇಣಿಗೆ ರೂಪದಲ್ಲಿ ನೀಡಲಾಯಿತು. ನುರಿತ ವೈದ್ಯರ ತಂಡ 30 ಶಾಲೆಗಳಿಂದ ಆಗಮಿಸಿದ್ದ ಶಾಲೆಯ ಶಿಕ್ಷಕರ ಆರೋಗ್ಯ ತಪಾಸಣೆ ನಡೆಸಿತು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts