More

    ರಾಜ್ಯ ಮಟ್ಟದ ಸಂಸ್ಕೃತ ಭಾಷಣ ಸ್ಪರ್ಧೆ: ಏಳು ಮಂದಿಗೆ ಪ್ರಶಸ್ತಿಯ ಗೌರವ

    ಶಿವಮೊಗ್ಗ: ನಗರದ ಬಿಬಿ ರಸ್ತೆಯ ಸಂಸ್ಕೃತ ಭವನದಲ್ಲಿ ಭಾನುವಾರ ರಾಜ್ಯ ಮಟ್ಟದ ಸಂಸ್ಕೃತ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ರಾಜನೀತಿಯಲ್ಲಿ ಸಂಸ್ಕೃತ ಸುಭಾಷಿತಗಳ ಕೊಡುಗೆ ಎಂಬ ವಿಷಯ ಕುರಿತು ಅನೇಕ ಸ್ಪರ್ಧಿಗಳು ಮಾತನಾಡಿದರು. ಸ್ಪರ್ಧೆಯ ತೀರ್ಪುಗಾರರಾಗಿ ಡಾ.ನವೀನ ಭಟ್, ಅರುಣ್ ಕುಮಾರ್ ಕಾಳಗಿ, ಸರಯೂ ಕಾರ್ಯನಿರ್ವಹಿಸಿದರು.
    ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹಮೂರ್ತಿ, ಸಂಸ್ಕೃತ ಭಾರತಿ ಜಿಲ್ಲಾಧ್ಯಕ್ಷ ಎನ್.ವಿ.ಶಂಕರನಾರಾಯಣ, ವಾಸವಿ ಅಕಾಡೆಮಿ ಟ್ರಸ್ಟ್ ಕಾರ್ಯದರ್ಶಿ ಎಸ್.ಕೆ.ಶೇಷಾಚಲ ಕುವೆಂಪು ವಿವಿ ಪರಿಸರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಯೋಗೇಂದ್ರ, ಸ್ಪರ್ಧಾ ಸಂಯೋಜಕ ಅನಂತಕೃಷ್ಣ, ಸಂಸ್ಕೃತ ಭಾರತಿ ನಗರ ಸಂಯೋಜಕಿ ಪ್ರೇಮಾ ವಿಜಯಕುಮಾರ್ ಉಪಸ್ಥಿತರಿದ್ದರು.
    ಪ್ರಶಸ್ತಿ ಹಾಗೂ ವಿಜೇತರ ವಿವರ:
    *ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಸ್ಮರಣಾರ್ಥ ಪ್ರಶಸ್ತಿ-ಮೊದಲ ಸ್ಥಾನ-ಅನಿರುದ್ಧ ಚೆನ್ನೈ, ಜಯತೀರ್ಥ ವಿದ್ಯಾಪೀಠ, ಬೆಂಗಳೂರು.
    *ಸೀತಮ್ಮ ಹಾಗೂ ವಿದ್ವಾನ್ ವೆಂಕಟರಮಣ ಉಪಾದ್ಯ ಸ್ಮರಣಾರ್ಥ ಪ್ರಶಸ್ತಿ-ಎರಡನೇ ಸ್ಥಾನ-ನಾಗರಾಜ ನಾರಾಯಣ ಭಟ್ಟ,
    ಶ್ರೀಮಾತಾ ಸಂಸ್ಕೃತ ಪಾಠಶಾಲೆ, ಉಮ್ಮಚಗಿ.
    *ಅ.ನಾ.ಮಾಧವರಾವ್ ಸ್ಮರಣಾರ್ಥ ಪ್ರಶಸ್ತಿ-ಮೂರನೇ ಸ್ಥಾನ- ಕೃಷ್ಣಮೂರ್ತಿ, ಮೇದಾರಕೇಂದ್ರ ದಕ್ಷಿಣಾಮ್ನಾಯ ಮಹಾವಿದ್ಯಾಲಯ, ಗೋಕರ್ಣ ಹಾಗೂ ಎನ್.ಬಿ.ಯೋಗೇಶ, ಕಾಲಭೈರವೇಶ್ವರ ಸಂಸ್ಕೃತ ವೇದ ಆಗಮ ಮಹಾವಿದ್ಯಾಲಯ ಆದಿಚುಂಚನಗಿರಿ.
    *ವಾಗ್ದೇವಿ ಹಾಗೂ ಮಧುಕರ ಜೋಯಿಸ್ ಪ್ರಾಯೋಜಕತ್ವ ಪ್ರಶಸ್ತಿ-4ನೇ ಸ್ಥಾನ-ನಚಿಕೇತ ಹೆಗಡೆ, ವಿದ್ಯಾವರ್ಧಕ ಕಾನೂನು ಕಾಲೇಜು, ಮೈಸೂರು.
    *ಕರಂಬಳ್ಳಿ ಕೃಷ್ಣಶೆಟ್ಟಿ ಪ್ರಾಯೋಜಕತ್ವ ಪ್ರಶಸ್ತಿ-5ನೇ ಸ್ಥಾನ-ನಾರಾಯಣ ವಾಚಸ್ಪತಿ, ಭಾರತೀ ಯೋಗಧಾಮ, ಮೈಸೂರು.
    *ಹೊರನಾಡು ಅನ್ನಪೂಣೇರ್ಶ್ವರಿ ದೇವಸ್ಥಾನದ ಧರ್ಮಕರ್ತರಾದ ಡಾ.ಭೀಮೇಶ್ವರ ಜೋಶಿ ಪ್ರಾಯೋಜಕತ್ವ ಪ್ರಶಸ್ತಿ-6ನೇ ಸ್ಥಾನ-ಎಂ.ಎನ್.ಮಂಜೇಶ್, ಕಾಲಭೈರವೇಶ್ವರ ವೇದಾಗಮ ಮಹಾವಿದ್ಯಾಲಯ ಆದಿಚುಂಚನಗಿರಿ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts